ETV Bharat / state

ರಾಜ್ಯದ ಎಲ್ಲ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲೂ ಬ್ಲ್ಯಾಕ್ ಫಂಗಸ್ ಚಿಕಿತ್ಸೆ: ಸಿಎಸ್ ರವಿಕುಮಾರ್ - ಸಿಎಸ್ ರವಿಕುಮಾರ್

ಕೊರೊನಾ ಮೂರನೇ ಅಲೆ ವಿಚಾರವಾಗಿ ಕ್ರಮವಹಿಸಲು ಡಾ.ದೇವಿಶೆಟ್ಟಿ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಮುಂದೆ ಏನು ಮಾಡಬೇಕು ಎನ್ನುವ ಬಗ್ಗೆ ಅವರು ಸಲಹೆ ನೀಡುತ್ತಾರೆ ಎಂದರು.

State chief secretary P Ravi Kumar
State chief secretary P Ravi Kumar
author img

By

Published : May 26, 2021, 12:47 AM IST

ಹಾಸನ: ರಾಜ್ಯದ ಎಲ್ಲ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲೂ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ನೀಡಲಾಗುವುದು ಎಂದು ರಾಜ್ಯ ಸರ್ಕಾರದ ಸಿಎಸ್ ರವಿಕುಮಾರ್ ಹೇಳಿದರು. ಹಾಸನದಲ್ಲಿ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸಾವು ನೋವಿನ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಹೀಗಿರುವಾಗಲೇ ಬ್ಲ್ಯಾಕ್ ಫಂಗಸ್ ಎಂಬ ಮತ್ತೊಂದು ಕಾಯಿಲೆ ರಾಜ್ಯದಲ್ಲಿ ಕಾಣಿಸಿಕೊಂಡಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಎಂದರು.

ಬ್ಲ್ಯಾಕ್​ ಫಂಗಸ್​ ಚಿಕಿತ್ಸೆ ಬಗ್ಗೆ ರವಿಕುಮಾರ್ ಮಾಹಿತಿ

ರಾಜ್ಯದ ಎಲ್ಲ ಮೆಡಿಕಲ್ ಕಾಲೇಜುಗಳಲ್ಲಿ ಬ್ಲ್ಯಾಕ್ ಫಂಗಸ್​ಗೆ ಚಿಕಿತ್ಸೆ ನೀಡುವುದಾಗಿ ತಿಳಿಸಿದ ಅವರು, ರಾಜ್ಯಕ್ಕೆ ಬ್ಲ್ಯಾಕ್ ಫಂಗಸ್​​ ಔಷಧಿ ಬಂದಿದ್ದು, ಅದನ್ನು ಜಿಲ್ಲೆಗೆ ಹಂಚಿಕೆ ಮಾಡುತ್ತಿದ್ದೇವೆ. ಜತೆಗೆ ಮೆಡಿಕಲ್ ಕಾಲೇಜು ಇರುವ ಕಡೆ ಬ್ಲ್ಯಾಕ್ ಫಂಗಸ್ ರೋಗಿಗಳನ್ನು ಬೇರೆಡೆಗೆ ಕಳಿಸುವ ಹಾಗಿಲ್ಲ ಎನ್ನುವ ಆದೇಶವನ್ನು ಜಾರಿಗೊಳಿಸಿದ್ದೇವೆ. ರಾಜ್ಯದಲ್ಲಿ ನಮಗೆ ಬೇಕಾದಷ್ಟು ವ್ಯಾಕ್ಸಿನ್ ಬಂದಿಲ್ಲ. 45 ವರ್ಷ ಮೇಲಿನವರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆ ನೀಡುತ್ತಿದೆ. 18 ವರ್ಷ ಮೇಲಿನವರಿಗೆ ರಾಜ್ಯ ಸರ್ಕಾರ ಲಸಿಕೆ ಖರೀದಿ ಮಾಡಿ ಕೊಡುತ್ತಿದೆ. ಮೊದಲು ಆದ್ಯತೆ ಮೇರೆಗೆ ವ್ಯಾಕ್ಸಿನ್ ನೀಡಲಾಗುತ್ತಿದ್ದು, ಸದ್ಯಕ್ಕೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಆಗಲ್ಲ ಎಂದು ಪರೋಕ್ಷವಾಗಿ ಹೇಳಿದರು.

ಇದನ್ನೂ ಓದಿ: ಆಕ್ಸಿಜನ್​ ಸಂಪರ್ಕ ಕಿತ್ತು ಇನ್ನೋರ್ವ ರೋಗಿಗೆ ನೀಡಿದ ಆರೋಪ: ಸೋಂಕಿತ ಸಾವು

ಕೊರೊನಾ ಮೂರನೇ ಅಲೆ ವಿಚಾರವಾಗಿ ಕ್ರಮವಹಿಸಲು ಡಾ.ದೇವಿಶೆಟ್ಟಿ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಮುಂದೆ ಏನು ಮಾಡಬೇಕು ಎನ್ನುವ ಬಗ್ಗೆ ಅವರು ಸಲಹೆ ನೀಡುತ್ತಾರೆ ಎಂದು ಹೇಳಿದ್ರು. ಆಕ್ಸಿಜನ್ ಕೊರತೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಘಟಕ ಸ್ಥಗಿತ ಆಗಿದ್ದರಿಂದ ಸಮಸ್ಯೆ ಆಗಿತ್ತು. ಆದರೂ ಹೆಚ್ಚಿನ ಸಮಸ್ಯೆ ಆಗದಂತೆ ನಾವು ನಿರ್ವಹಣೆ ಮಾಡಿದ್ದೇವೆ. ಹಾಸನಕ್ಕೂ ಸದ್ಯಕ್ಕೆ ಆಕ್ಸಿಜನ್ ಕೊರತೆ ಇಲ್ಲ. ಆಕ್ಸಿಜನ್ ಬಂದ ಹಾಗೆ ಎಲ್ಲರಿಗೂ ನೀಡುತ್ತೇವೆ. ಹಾಸನಕ್ಕೆ ನಿಮಿಷಕ್ಕೆ 1 ಸಾವಿರ ಲೀಟರ್ ಆಕ್ಸಿಜನ್ ಉತ್ಪಾದನೆ ಘಟಕ ಮಂಜೂರಾಗಿದೆ.ಡಿಆರ್​ಡಿಓದಿಂದ ಶೀಘ್ರವೇ ಅದು ಕಾರ್ಯಾರಂಭ ಮಾಡಲಾಗುತ್ತದೆ. ಹಾಸನದಲ್ಲಿ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ನಗರದಲ್ಲಿ ಸಮಸ್ಯೆ ನಿಯಂತ್ರಣಕ್ಕೆ ಬಂದಿದೆ. ಈಗ ನಮ್ಮ ಗಮನ ಹಳ್ಳಿಗಳ ಕಡೆಗಿದೆ. ಹಳ್ಳಿಯಲ್ಲೂ ಸೋಂಕು ನಿಯಂತ್ರಣ ಮಾಡಬೇಕಿದೆ. ಹಳ್ಳಿಗೆ ಹೋಗಿ ಹೆಚ್ಚು ಪರೀಕ್ಷೆ ಮಾಡಿ, ಐಸೊಲೇಷನ್ ಮಾಡಿ ಅಲ್ಲಿ ಹರಡದಂತೆ ಮಾಡಬೇಕಿದೆ. ಅಲ್ಲದೇ ಜೂನ್ 15ರ ವೇಳೆಗೆ ಎರಡನೇ ಅಲೆ ಮುಗಿಯುವ ನಿರೀಕ್ಷೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.