ETV Bharat / state

ಹೆಚ್.​ಡಿ.ರೇವಣ್ಣ ಆಪ್ತನ ಮೇಲೆ ದುಷ್ಕರ್ಮಿಗಳಿಂದ ದಾಳಿ ಪ್ರಕರಣ: ಪೊಲೀಸ್​ ಅಧಿಕಾರಿ ಸೇರಿ ಆರು ಮಂದಿ ಬಂಧನ - ಈಟಿವಿ ಭಾರತ ಕನ್ನಡ

ಮಾಜಿ ಸಚಿವ ಹೆಚ್​​.ಡಿ.ರೇವಣ್ಣ ಆಪ್ತನ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್​​ ಅಧಿಕಾರಿ ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಹಾಸನ ಎಸ್​ಪಿ ಮೊಹಮ್ಮದ್​ ಸುಜಿತಾ ತಿಳಿಸಿದ್ದಾರೆ.

Six were arrested in the case of attack on HD Revannas close friend
ಹೆಚ್.​ಡಿ.ರೇವಣ್ಣ ಆಪ್ತನ ಮೇಲೆ ದಾಳಿ ಪ್ರಕರಣ: ಪೋಲಿಸ್ ಅಧಿಕಾರಿ ಸೇರಿ ಆರು ಮಂದಿ ಬಂಧನ
author img

By ETV Bharat Karnataka Team

Published : Oct 23, 2023, 7:58 AM IST

Updated : Oct 23, 2023, 2:50 PM IST

ಮಾಹಿತಿ ನೀಡಿದ ಎಸ್​ಪಿ ಮೊಹಮ್ಮದ್​ ಸುಜಿತಾ

ಹಾಸನ: ಮಾಜಿ ಸಚಿವ ಹೆಚ್​​.ಡಿ.ರೇವಣ್ಣನ ಆಪ್ತ ಸಹಾಯಕರಲ್ಲಿ ಒಬ್ಬರಾಗಿರುವ ಚನ್ನರಾಯಪಟ್ಟಣದ ಉದ್ಯಮಿ ಮತ್ತು ಪ್ರಥಮ ದರ್ಜೆ ಗುತ್ತಿಗೆದಾರ ಅಶ್ವತ್ಥ ಎಂಬವರ ಮೇಲೆ ನಡೆದಿದ್ದ ದುಷ್ಕರ್ಮಿಗಳ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಪೊಲೀಸ್​ ಅಧಿಕಾರಿ ಸೇರಿ 6 ಮಂದಿಯನ್ನು ಬಂಧಿಸಲಾಗಿದೆ. ಬೆಂಗಳೂರು ಮೂಲದ ಆರ್​ ಸತೀಶ್​ (38), ಸಿ ಮುರುಗನ್​, ಆರ್​ ಮಧುಸೂದನ್​ (38), ಚನ್ನರಾಯಪಟ್ಟಣದ ಬಿ ಎಸ್​ ತೇಜಸ್ವಿ (37), ಅರವಿಂದ್​ (40) ಹಾಗೂ ಕೋಲಾರದ ಆಂತರಿಕ ಭದ್ರತಾ ವಿಭಾಗದ ಪೊಲೀಸ್​ ಅಧಿಕಾರಿ ಜೆ ಅಶೋಕ್​ ಬಂಧಿತರು.

ಅಕ್ಟೋಬರ್​ 10ರಂದು ಎಂದಿನಂತೆ ಅಶ್ವತ್ಥ ರೇವಣ್ಣನ ಮನೆಗೆ ಭೇಟಿ ಕೊಟ್ಟು ಕೆಲ ಹೊತ್ತು ಅವರೊಂದಿಗೆ ರಾಜಕೀಯ ವಿಚಾರಗಳನ್ನ ಚರ್ಚೆ ಮಾಡಿ, ರಾತ್ರಿ ಎಂಟು ಗಂಟೆಯ ಸುಮಾರಿಗೆ ಮನೆಯಿಂದ ತಮ್ಮ ಫಾರ್ಚುನರ್ ವಾಹನದಲ್ಲಿ ಚನ್ನರಾಯಪಟ್ಟಣಕ್ಕೆ ಹೊರಟಿದ್ದರು. ಈ ವೇಳೆ, ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ಅಶ್ವತ್ಥ ಅವರು ಸಂಚರಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಅಟ್ಯಾಕ್​ ಮಾಡಿದ್ರು. ಆದರೆ ಅವರ ಯೋಜನೆ ವಿಫಲವಾಗಿ ಕೂದಲೆಳೆ ಅಂತರದಲ್ಲಿ ಅಶ್ವತ್ಥ್​ ತಮ್ಮ ಪ್ರಾಣ ಉಳಿಸಿಕೊಂಡಿದ್ದರು.

ಕಿಡ್ನಾಪ್​ ಮಾಡಿ ಹಣಕ್ಕೆ ಬೇಡಿಕೆ ಇಡೋ ಸ್ಕೆಚ್ ಹಾಕಿದ್ದ ದುಷ್ಕರ್ಮಿಗಳನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಎಸ್​ಪಿ ಮೊಹಮ್ಮದ್​ ಸುಜಿತಾ, ತನಿಖೆ ವೇಳೆ ಕೋಲಾರ ಆಂತರಿಕ ಭದ್ರತಾ ವಿಭಾಗದ ಇನ್ಸ್​​ಪೆಕ್ಟರ್​ ​ ಅಶೋಕ್​ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಅಶೋಕ್​ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಉಳಿದ 5 ಮಂದಿಯನ್ನು ಬೆಂಗಳೂರಿನ ಬಂಧಿಸಲಾಗಿದ್ದು, ಇನ್ನುಳಿದ ಇಬ್ಬರನ್ನು ಶೀಘ್ರದಲ್ಲೇ ಬಂಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಂಗಳೂರು: ನಾಲ್ವರ ಕಳ್ಳರ ಬಂಧನ, 137 ಗ್ರಾಂ ಚಿನ್ನಾಭರಣ, 31 ಬೈಕ್ ವಶಕ್ಕೆ

ಶ್ರೀಮಂತರನ್ನು ಟಾರ್ಗೆಟ್​ ಮಾಡಿ ನಂತರ ಅವರನ್ನು ಕಿಡ್ನಾಪ್​ ಮಾಡಿ ದುಡ್ಡಿಗಾಗಿ ಡಿಮ್ಯಾಂಡ್​ ಮಾಡೋ ಕತರ್ನಾಕ್​ ಗ್ಯಾಂಗ್ ಇವರದ್ದು. ಈ ಹಿಂದೆ ಕೂಡ ಇಂತಹದ್ದೇ ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ಆರೋಪಿಗಳನ್ನು ಬಂಧಿಸಿ ಅವರಿಂದ ಮೂರು ಐಷರಾಮಿ ಕಾರುಗಳು ಮತ್ತು 8 ಮೊಬೈಲ್​ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಲ್ಲದೇ, ಕೋಲಾರದ ವರ್ತೂರ್​ ಪ್ರಕಾಶ್​ ಕಿಡ್ನಾಪ್​ ಕೇಸ್​ನಲ್ಲಿ ಭಾಗಿಯಾಗಿದ್ದ ಲೋಹಿತ್​ ಹಾಗೂ ಪ್ರವೀಣ್​ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರನ್ನು ಕೂಡ ಶೀಘ್ರದಲ್ಲೇ ಬಂಧಿಸಲಿದ್ದೇವೆ ಎಂದು ಇಡೀ ಪ್ರಕರಣದ ಕುರಿತು ಮಾಹಿತಿ ನೀಡಿದರು. ​

ಇತ್ತೀಚೆಗೆ ಹಾಸನದಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ಮಾಜಿ ಸಚಿವ ಹೆಚ್.ಡಿ ರೇವಣ್ಣನವರ ಆಪ್ತರ ಮೇಲೆ ದಾಳಿಗಳು ನಡೆಯುತ್ತಿದ್ದು, ಎರಡು ವರ್ಷದ ಹಿಂದೆ ಹಾಸನ ನಗರಸಭೆಯ ಸದಸ್ಯ ಪ್ರಶಾಂತ್ ನಾಗರಾಜು ಹಾಗೂ ಎರಡು ತಿಂಗಳ ಹಿಂದೆ ಗ್ರಾನೈಟ್ ಉದ್ಯಮಿ ಕೃಷ್ಣೇಗೌಡ ಎಂಬುವರ ಬರ್ಬರ ಕೊಲೆಯಾಗಿತ್ತು. ವಿಶೇಷ ಅಂದರೆ, ಇವರಿಬ್ಬರೂ ಕೂಡ ರೇವಣ್ಣನಿಗೆ ಬಹಳ ಆತ್ಮೀಯರು ಮತ್ತು ಆಪ್ತರಾಗಿದ್ದರು.

ಇದನ್ನೂ ಓದಿ: ಹೆಚ್​ ಡಿ ರೇವಣ್ಣ ಆಪ್ತನ ಮೇಲೆ ದುಷ್ಕರ್ಮಿಗಳ ದಾಳಿ: ಕೂದಲೆಳೆ ಅಂತರದಲ್ಲಿ ಪಾರು

Last Updated : Oct 23, 2023, 2:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.