ಹಾಸನ: ಜಿಲ್ಲೆಯಲ್ಲಿ ಇಂದು 6 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿದ ಅವರು, ಇದುವರೆಗೂ 621 ಪ್ರಕರಣಗಳು ವರದಿಯಾಗಿದ್ದು, ಚಿಕಿತ್ಸೆ ಪಡೆದು ಗುಣಮುಖರಾಗಿ 295 ಮಂದಿ ಮನೆಗೆ ಹೋಗಿದ್ದಾರೆ. 216 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ 15 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದರು.
ಅರಸಿಕೆರೆಯಲ್ಲಿ 3, ಚನ್ನರಾಯಪಟ್ಟದಲ್ಲಿ 2 ಹಾಗೂ ಹಾಸನದಲ್ಲಿ 1 ಸೇರಿದಂತೆ ಇಂದು ಒಟ್ಟು ಆರು ಪ್ರಕರಣ ದಾಖಲಾಗಿದೆ ಎಂದರು. ಇನ್ನು ಹೊರಗೆ ಬಂದ ವೇಳೆ ತಪ್ಪದೆ ಮಾಸ್ಕ್ ಧರಿಸಬೇಕು. ಸಭೆ ಸಮಾರಂಭ ಆದಷ್ಟು ಕಡಿಮೆ ಮಾಡಬೇಕು. ಸುಖಾಸುಮ್ಮನೆ ಹೊರಗೆ ಬರುವುದನ್ನು ತಡೆಯಬೇಕು. ಕೋವಿಡ್ ತಡೆಯಲು ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.