ETV Bharat / state

ದೊಡ್ಡಗೌಡರೆದುರು ಸಿದ್ದು ಅಭಿಮಾನಿಗಳ ಅಬ್ಬರ, ಭಾಷಣಕ್ಕೆ ಅಡ್ಡಿ! - undefined

ಹಾಸನ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರದ ವೇಳೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಭಾಷಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರ ಅಭಿಮಾನಿಗಳು ಅಡ್ಡಿಪಡಿಸಿದರು.

ದೇವೇಗೌಡರ ಭಾಷಣಕ್ಕೆ ಅಡ್ಡಿ ಪಡಿಸುತ್ತಿರುವ ಅಭಿಮಾನಿಗಳು
author img

By

Published : Apr 11, 2019, 8:45 PM IST

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಭಾಷಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರ ಅಭಿಮಾನಿಗಳು ಅಡ್ಡಿಪಡಿಸಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿ ಕಡೂರು, ಬಾಣಾವಾರ, ಗಂಡಸಿ ಹೊಳೆನರಸೀಪುರ ಹಾಗೂ ಹಳ್ಳಿ ಮೈಸೂರಿನಲ್ಲಿ ಗುರು-ಶಿಷ್ಯರಾದ ದೇವೇಗೌಡ ಹಾಗೂ ಸಿದ್ದರಾಮಯ್ಯ ಜಂಟಿ ಪ್ರಚಾರಕಾರ್ಯ ಆರಂಭಿಸಿದರು. ಕಡೂರಿನಲ್ಲಿ ಚುನಾವಣಾ ಪ್ರಚಾರ ಮುಗಿದ ಬಳಿಕ, ಬಾಣಾವರದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರದಲ್ಲಿ ಸ್ಥಳೀಯ ಮುಖಂಡರುಗಳ ಭಾಷಣದ ಬಳಿಕ ದೇವೇಗೌಡರು ಮಾತನಾಡಲು ಮುಂದಾದ ಸಂದರ್ಭದಲ್ಲಿ ಸಿದ್ದು ಅಭಿಮಾನಿಗಳ ಕೂಗಾಟ ಜೋರಾಗಿತ್ತು.

ದೇವೇಗೌಡರ ಭಾಷಣಕ್ಕೆ ಅಡ್ಡಿ ಪಡಿಸುತ್ತಿರುವ ಸಿದ್ದರಾಮಯ್ಯ ಅಭಿಮಾನಿಗಳು

ಇದರ ಮಧ್ಯೆಯೂ ದೇವೇಗೌಡರು ಮತ್ತೆ ಭಾಷಣ ಮುಂದುವರಿಸಲು ಮುಂದಾದರು. ಕುರುಬ ಸಮಾಜದ ಜನರು ಮಾತ್ರ ಮತ್ತೆ ಮತ್ತೆ ಸದ್ದು ಮಾಡಿ ಸಿದ್ದರಾಮಯ್ಯನವರಿಗೆ ಜೈಕಾರ ಹಾಕಿ ದೇವೇಗೌಡರಿಗೆ ಕಿರಿಕಿರಿ ಉಂಟುಮಾಡಿದರು. ಶಾಸಕ ಶಿವಲಿಂಗೇಗೌಡ ಸೇರಿದಂತೆ ಎಲ್ಲಾ ನಾಯಕರುಗಳು ಸುಮ್ಮನಾಗುವಂತೆ ಸೂಚಿಸಿದರೂ, ದೊಡ್ಡಗೌಡರು ಭಾಷಣ ನಿಲ್ಲಿಸುವವರೆಗೂ ಸಿದ್ದರಾಮಯ್ಯ ಪರ ಜೈಕಾರ ಕೂಗುವುದನ್ನು ನಿಲ್ಲಿಸಲಿಲ್ಲ.

Intro:ಹಾಸನ: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಭಾಷಣಕ್ಕೆ ಸಿದ್ದು ಅಭಿಮಾನಿಗಳು ಅಡ್ಡಿಪಡಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ಇಂದು ನಡೆದಿದೆ.

ಅರಸೀಕೆರೆ ತಾಲ್ಲೂಕಿನಲ್ಲಿ ಬಾಣಾವರ‌ ಪಟ್ಟಣದಲ್ಲಿ ಇಂದು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನ ಪರವಾಗಿ ಏರ್ಪಡಿಸಿದ್ದ ಚುನಾವಣಾ ಪ್ರಚಾರದಲ್ಲಿ ಇಂತಹುದೊಂದು ಘಟನೆ ನಡೆಯಿತು.

13 ವರ್ಷದ ಬಳಿಕ ಮೊದಲ ಬಾರಿಗೆ ಗುರು ಶಿಷ್ಯರಾದ ದೇವೇಗೌಡ ಮತ್ತು ಸಿದ್ದರಾಮಯ್ಯ ಒಂದೇ ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು. ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಪರವಾಗಿ ಇಂದು ಹಾಸನ ಲೋಕಸಭಾ ಕ್ಷೇತ್ರದ ಕಡೂರು, ಬಾಣಾವಾರ, ಗಂಡಸಿ ಹೊಳೆನರಸೀಪುರ ಹಾಗೂ ಹಳ್ಳಿ ಮೈಸೂರಿನಲ್ಲಿ ಗುರು ಶಿಷ್ಯರಾದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ಜಂಟಿ ಪ್ರಚಾರ ಕಾರ್ಯ ಆರಂಭಿಸಿದ್ರು.

ಕಡೂರಿನಲ್ಲಿ ಚುನಾವಣಾ ಪ್ರಚಾರ ಮುಗಿದ ಬಳಿಕ ಬಾಣಾವರದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರದಲ್ಲಿ ಸ್ಥಳೀಯ ಮುಖಂಡರುಗಳ ಭಾಷಣದ ಬಳಿಕ ದೇವೇಗೌಡರು ಮಾತನಾಡಲು ಮುಂದಾದ ಸಂದರ್ಭದಲ್ಲಿ
ಸಿದ್ದು ಅಭಿಮಾನಿಗಳ ಆರ್ಭಟ ಕೂಗಾಟ ಜೋರಾಗಿತ್ತು. ಇದರ ಮಧ್ಯೆ ದೇವೇಗೌಡರು ಮತ್ತೆ ಭಾಷಣವನ್ನು ಮುಂದುವರಿಸಲು ಮುಂದಾದ್ರು. ಆದ್ರೆ ಸಿದ್ದು ಅಭಿಮಾನಿಗಳು ಮಾತ್ರ ಮತ್ತೆ ಸದ್ದು ಮಾಡಿ ಸಿದ್ದರಾಮಯ್ಯನವರಿಗೆ ಜೈಕಾರ ಹಾಕಿ ದೇವೇಗೌಡರ ಭಾಷಣಕ್ಕೆ ಅಡ್ಡಿಪಡಿಸಲು ಮುಂದಾಗಿಯೇಬಿಟ್ರು.

ಶಾಸಕ ಶಿವಲಿಂಗೇಗೌಡ ಸೇರಿದಂತೆ ಎಲ್ಲಾ ನಾಯಕರುಗಳು ಸುಮ್ಮನಾಗುವಂತೆ ಸೂಚಿಸಿದರೂ ಸಿದ್ದರಾಮಯ್ಯಗೆ ಜೈಕಾರ ಕೂಗುವುದನ್ನ ನಿಲ್ಲಿಸದ ಅಭಿಮಾನಿಗಳು ಹಾಗೂ ಕುರುಬ ಸಮಾಜದ ಜನತೆ ಕೊನೆಗೂ ದೇವೇಗೌಡರ ಭಾಷಣ ನಿಲ್ಲಿಸುವವರೆಗೂ ಸುಮ್ಮನಾಗಲಿಲ್ಲ. ಸಿದ್ದರಾಮಯ್ಯ ಎಂದು ಜೈಕಾರ ಕೂಗುತ್ತಾ ದೊಡ್ಡಗೌಡರಿಗೆ ಆಭಾಸವಾಗುವಂತೆ ಐದು ನಿಮಷವೂ ಅವರಿಗೆ ಭಾಷಣ ಮಾಡಲು ಬಿಡಲಿಲ್ಲ.

ಒಟ್ಟಾರೆ ದೊಡ್ಡಗೌಡರ ಮಾತು ಕೇಳಲು ತಯಾರಿಲ್ಲದ ಸಿದ್ದರಾಮಯ್ಯ ಅಭಿಮಾನಿಗಳ ಈ ನಡೆ ಎಲ್ಲೋ ಒಂದು ಕಡೆ ಹಾಸನ ಜಿಲ್ಲೆಯಲ್ಲಿ ಜೆಡಿಎಸ್‌ ಗೆ ನಮ್ಮ ಬೆಂಬಲ ಇಲ್ಲ ಎಂಬ ಸಂದೇಶವನ್ನು ನೀಡುವಂತಿತ್ತು.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.