ETV Bharat / state

ಆತ್ಮಹತ್ಯೆ ಮಾಡಿಕೊಂಡಿದ್ದ ಪಿಎಸ್​​ಐ ಕಿರಣ್​​ ಕುಮಾರ್​​ಗೆ ಶ್ರದ್ಧಾಂಜಲಿ - ಪಿಎಸ್​​ಐ ಕಿರಣ್​​ ಕುಮಾರ್​​ಗೆ ಶ್ರದ್ಧಾಂಜಲಿ

ಪಿಎಸ್ಐ ಕಿರಣ್ ಕುಮಾರ್ ಅವರ ಭಾವಚಿತ್ರಕ್ಕೆ ಟೌನ್​​ ಪೊಲೀಸ್ ಠಾಣೆಯ ಸಿಬ್ಬಂದಿ​​​ ಮತ್ತು ಸಾರ್ವಜನಿಕರು ಪೂಜೆ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದರು.

Shraddhanjali to PSI Kiran Kumar
ಪಿಎಸ್​​ಐ ಕಿರಣ್​​ ಕುಮಾರ್​​ಗೆ ಶ್ರದ್ಧಾಂಜಲಿ
author img

By

Published : Aug 10, 2020, 4:29 PM IST

ಚನ್ನರಾಯಪಟ್ಟಣ: ಆತ್ಮಹತ್ಯೆಗೆ ಶರಣಾದ ಪಿಎಸ್ಐ ಕಿರಣ್ ಕುಮಾರ್ ಅವರ ಭಾವಚಿತ್ರಕ್ಕೆ ಟೌನ್​​ ಪೊಲೀಸ್ ಠಾಣೆಯ ಸಿಬ್ಬಂದಿ​​​ ಮತ್ತು ಸಾರ್ವಜನಿಕರು ಶ್ರದ್ಧಾಂಜಲಿ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದರು.

ತಾಲೂಕು ದಂಡಾಧಿಕಾರಿ ಮಾರುತಿ ಮಾತನಾಡಿ, ಒಬ್ಬ ದಕ್ಷ ಅಧಿಕಾರಿಯನ್ನು ತಾಲೂಕು ಆಡಳಿತ ಕಳೆದುಕೊಂಡಿದೆ. ಇಂದು ಅವರ 11ನೇ ದಿನದ ಕಾರ್ಯ. ಕೊರೊನಾ ಸಂದರ್ಭದಲ್ಲಿ ಅದ್ಭುತ ಕೆಲಸ ಮಾಡಿದ್ದಾರೆ. ತುಮಕೂರು, ಮಂಡ್ಯ, ಚಾಮರಾಜನಗರ ಹೀಗೆ ಹಲವು ಜಿಲ್ಲೆಗಳಲ್ಲಿ ಒಳ್ಳೆಯ ಹೆಸರು ಗಳಿಸಿದ್ದಾರೆ ಎಂದರು.

ಪಿಎಸ್​​ಐ ಕಿರಣ್​​ ಕುಮಾರ್​​ಗೆ ಶ್ರದ್ಧಾಂಜಲಿ

ಯಾವ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡರು ಎಂಬುದು ತಿಳಿದು ಬಂದಿಲ್ಲ. ಅವರ ಸಾವಿನ ತನಿಖೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ವಿಚಾರ ತಿಳಿದು ಬರುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.