ETV Bharat / state

ಹೂವಿನಹಳ್ಳಿಗೆ ಪ್ರವೇಶ ನಿಷೇಧ: ಹಳ್ಳಿಗಳಲ್ಲಿ ವಿಭಿನ್ನ ರೀತಿಯ ಸಾಮಾಜಿಕ ಅಂತರ

ಕೊರೊನಾ ಪಿಡುಗನ್ನು ತಡೆಗಟ್ಟಲು ಹಾಸನದ ಕೆಲ ಗ್ರಾಮಗಳು ಸ್ವಯಂಪ್ರೇರಿತವಾಗಿ ತಮ್ಮ ಗ್ರಾಮಕ್ಕೆ ಹೊರಗಿನ ಜನರ ಪ್ರವೇಶ ನಿರ್ಬಂಧಿಸಿವೆ.

hsn
hsn
author img

By

Published : Mar 27, 2020, 7:44 AM IST

ಹಾಸನ: ಕೋವಿಡ್-19 (ಕೊರೊನಾ ವೈರಸ್ ಖಾಯಿಲೆ-19) ಮಹಾಮಾರಿಯನ್ನು ಹೊಡೆದೋಡಿಸಲು ಹಾಸನದ ಕೆಲ ಗ್ರಾಮಗಳು ಸ್ವಯಂಪ್ರೇರಿತವಾಗಿ ರಸ್ತೆ ಬಂದ್ ಮಾಡಿವೆ. ಈ ಮೂಲಕ ಇಲ್ಲಿನ ಜನರು ಹೊರಗಿನವರ ಪ್ರವೇಶಕ್ಕೆ ಕಟ್ಟುನಿಟ್ಟಿನ ತಾತ್ಕಾಲಿಕ ನಿರ್ಬಂಧ ಹೇರಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.

ಸ್ವಯಂನಿರ್ಬಂಧ ಹೇರಿಕೊಂಡ ಗ್ರಾಮಗಳು

ಹೊಳೆನರಸೀಪುರ ತಾಲೂಕಿನ ಹೂವಿನಹಳ್ಳಿ, ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಸಮೀಪದ ಕೊರಟಿಕೆರೆ ಕಾವಲು, ಗಂಗಾನಗರ ಮತ್ತು ಕಲ್ಲೂರು ಗ್ರಾಮದ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ಸೋಂಕಿತರು, ಶಂಕಿತರು ಹಾಗೂ ಪಟ್ಟಣ ವಾಸಿಗಳು ಯಾರೂ ಮುಂದಿನ 21 ದಿನಗಳವರೆಗೆ ಬರುವುದೇ ಬೇಡ ಎನ್ನುತ್ತಿದ್ದಾರೆ.

road blocked by villages
ಸ್ವಯಂನಿರ್ಬಂಧ ಹೇರಿಕೊಂಡ ಗ್ರಾಮಗಳು

ದಿನದಿಂದ ದಿನಕ್ಕೆ ಕೊರೊನಾ ಜಗದಗಲ ಹರಡುತ್ತಿದೆ. ಸರ್ಕಾರ ಈಗಾಗಲೇ 3 ವಾರಗಳ ಕಾಲ ಇಡೀ ಭಾರತವನ್ನು ಲಾಕ್​ಡೌನ್ ಮಾಡಿದೆ. ಆದರೂ ನಗರ ಪ್ರದೇಶದ ಜನರು ಮಾತ್ರ ಮನೆಯಲ್ಲಿರದೆ ಸುಖಾಸುಮ್ಮನೆ ನಗರ ಪ್ರದಕ್ಷಿಣೆ ಹಾಕುವ ಮೂಲಕ ಆತಂಕ ಹೆಚ್ಚಿಸುತ್ತಿದ್ದಾರೆ.

road blocked by villages
ಸ್ವಯಂ ನಿರ್ಬಂಧ ಹೇರಿಕೊಂಡ ಗ್ರಾಮಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.