ETV Bharat / state

ಪ್ರಕೃತಿ ಯಾರಿಂದಲೋ ಬಂದ ಬಳುವಳಿಯಲ್ಲ, ಸಂರಕ್ಷಣೆ ಹೊಣೆ ನಮ್ಮಲ್ಲರದು..

ಸಾಲುಮರದ ತಿಮ್ಮಕ್ಕ ಹಾಗೂ ಇತರೆ ಹಿರಿಯರ ಆದರ್ಶಗಳಂತೆ ಮರಗಳನ್ನು ಬೆಳೆಸಲು ನಾವು ಮುಂದಾಗಬೇಕು. ಅರಣ್ಯ, ತೋಟಗಾರಿಕೆ ಇಲಾಖೆ, ನರೇಗಾ ಸೇರಿದಂತೆ ಹಲವಾರು ಯೋಜನೆಗಳ ಮೂಲಕ ಉಚಿತವಾಗಿ ಸಸಿಗಳನ್ನು ನೀಡಲಾಗುತ್ತಿದೆ.

Responsibility of Environmental Protection is ours: DC
ಪ್ರಕೃತಿ ಯಾರಿಂದಲೋ ಬಂದ ಬಳುವಳಿಯಲ್ಲ, ಸಂರಕ್ಷಣೆ ಹೊಣೆ ನಮ್ಮದು: ಜಿಲ್ಲಾಧಿಕಾರಿ
author img

By

Published : Jun 5, 2020, 9:09 PM IST

ಹಾಸನ: ಪ್ರತಿದಿನ ಒಂದಲ್ಲಾ ಒಂದು ರೀತಿಯಲ್ಲಿ ನಾವು ಪರಿಸರಕ್ಕೆ ಹಾನಿಯುಂಟುಮಾಡುತ್ತಿದ್ದೇವೆ. ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹಾಗಾಗಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದ್ದಾರೆ.

ಪ್ರಕೃತಿ ಯಾರಿಂದಲೋ ಬಂದ ಬಳುವಳಿಯಲ್ಲ, ಸಂರಕ್ಷಣೆ ಹೊಣೆ ನಮ್ಮದು..

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಕೆ ಹೆಚ್ ಬಿ ಕಾಲೋನಿ ಪಾರ್ಕ್ ಆವರಣದಲ್ಲಿ ಇಂದು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಅವರು, ಪ್ರಕೃತಿ ಯಾರಿಂದಲೂ ಬಂದ ಬಳುವಳಿಯಲ್ಲ, ಆದ್ದರಿಂದ ಎಲ್ಲರೂ ಸಹ ಪ್ರಕೃತಿಯ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಸಾಲುಮರದ ತಿಮ್ಮಕ್ಕ ಹಾಗೂ ಇತರೆ ಹಿರಿಯರ ಆದರ್ಶಗಳಂತೆ ಮರಗಳನ್ನು ಬೆಳೆಸಲು ನಾವು ಮುಂದಾಗಬೇಕು. ಅರಣ್ಯ, ತೋಟಗಾರಿಕೆ ಇಲಾಖೆ, ನರೇಗಾ ಸೇರಿದಂತೆ ಹಲವಾರು ಯೋಜನೆಗಳ ಮೂಲಕ ಉಚಿತವಾಗಿ ಸಸಿಗಳನ್ನು ನೀಡಲಾಗುತ್ತಿದೆ. ಸಾರ್ವಜನಿಕರು ಈ ಸೌಲಭ್ಯಗಳನ್ನು ಬಳಸಿಕೊಂಡು ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಬೇಕು ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು ಮಾತನಾಡಿ, ಅರಣ್ಯ ಇಲಾಖೆ ವತಿಯಿಂದ #PLANT - SHOOT- SEND ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಾರ್ವಜನಿಕರು ತಮ್ಮ ತಮ್ಮ ಮನೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು, ಅದನ್ನು ಚಿತ್ರೀಕರಿಸಿ ಅರಣ್ಯ ಇಲಾಖೆಗೆ ಕಳುಹಿಸಿದರೆ ಉತ್ತಮ ಚಿತ್ರೀಕರಣ ಮಾಡಿದವರಿಗೆ ಬಹುಮಾನ ನೀಡಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.