ETV Bharat / state

ಆರ್​ಸಿಈಪಿ ಮುಕ್ತ ವ್ಯಾಪಾರ ಒಪ್ಪಂದ ರಫ್ತು ನೀತಿ ಕೈ ಬಿಡಬೇಕು: ರೇವಣ್ಣ - revanna talking about rcep

ಆರ್.ಸಿ.ಈ.ಪಿ ಮುಕ್ತ ವ್ಯಾಪಾರ ಒಪ್ಪಂದ ರಫ್ತು ನೀತಿಯನ್ನು ಕೂಡಲೇ ಕೈಬಿಡಬೇಕು. ರಾಜ್ಯ ಸರ್ಕಾರ ಕೂಡಲೇ ಸದನ ಕರೆದು ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಹಾಗೂ ನಿಯೋಗದೊಂದಿಗೆ ತೆರಳಿ ಪ್ರಧಾನಿಯವರಿಗೆ ಮನವರಿಕೆ ಮಾಡಬೇಕು ಎಂದು ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಆಗ್ರಹಿಸಿದರು.

ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಸುದ್ದಿಗೋಷ್ಠಿ
author img

By

Published : Oct 27, 2019, 9:08 AM IST

ಹಾಸನ: ಹಾಲು ಉತ್ಪಾದಕರಿಗೆ ಡೈರಿ ಉದ್ಯಮಕ್ಕೆ ಮಾರಕವಾದ ಆರ್.ಸಿ.ಈ.ಪಿ ಮುಕ್ತ ವ್ಯಾಪಾರ ಒಪ್ಪಂದ ರಫ್ತು ನೀತಿಯನ್ನು ಕೈ ಬಿಡಬೇಕು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಒತ್ತಾಯಿಸಿದರು.

ನಗರದ ಹಾಸನ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲು ಉತ್ಪಾದನೆ ಹಾಗೂ ಮಾರಾಟದಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕ ರಾಜ್ಯ 10 ಕೋಟಿಗೂ ಹೆಚ್ಚು ಹಾಲು ಉತ್ಪಾದಕರನ್ನು ಹೊಂದಿದೆ. ಇಂತಹ ನೀತಿಯಿಂದ ಉತ್ಪಾದಕರು ತೊಂದರೆಗೆ ಸಿಲುಕಲಿದ್ದಾರೆ. ಇಂತಹ ನೀತಿಯನ್ನು ಕೂಡಲೇ ಕೈಬಿಡಬೇಕು. ರಾಜ್ಯ ಸರ್ಕಾರ ಕೂಡಲೇ ಸದನ ಕರೆದು ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಹಾಗೂ ನಿಯೋಗದೊಂದಿಗೆ ತೆರಳಿ ಪ್ರಧಾನಿಯವರಿಗೆ ಮನವರಿಕೆ ಮಾಡಬೇಕೆಂದರು.

ಮಾಜಿ ಸಚಿವ ಹೆಚ್​.ಡಿ.ರೇವಣ್ಣ

ಹಾಸನ ಹಾಲು ಒಕ್ಕೂಟವು 2019-20ನೇ ಸಾಲಿನ ಸೆಪ್ಟಂಬರ್ ತಿಂಗಳವರೆಗೂ ಅಂದಾಜು 10 ಕೋಟಿ ರೂ. ಲಾಭ ಗಳಿಸಿದೆ. ಲಾಭವನ್ನು ಉತ್ಪಾದಕರಿಗೆ ವರ್ಗಾಯಿಸುವ ನಿಟ್ಟಿನಲ್ಲಿ ದೀಪಾವಳಿ ಉಡುಗೊರೆಯಾಗಿ ಪ್ರತಿ ಲೀಟರ್​ ಹಾಲಿಗೆ 1 ರೂ. ಖರೀದಿ ದರ ಹೆಚ್ಚಿಸಲಾಗಿದೆ. ದರ ಹೆಚ್ಚಳದಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್​​ಗೆ 26.50ರಷ್ಟು ದರ ಸಿಗಲಿದೆ. ಕರ್ನಾಟಕ ಹಾಲು ಮಂಡಳಿಯಲ್ಲೇ ಅತಿ ಹೆಚ್ಚಿನ ದರ ಪಾವತಿಸುತ್ತಿರುವ ಎರಡನೇ ಒಕ್ಕೂಟವಾಗಿದೆ ಎಂದರು.

ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ.ಶಿವಕುಮಾರ್‌ಗೆ ಅವರದೇ ಆದ ಶಕ್ತಿಯಿದೆ. ಅವರದು 30 ವರ್ಷಗಳ ರಾಜಕಾರಣ. ನಾನು ಪ್ರತಿನಿತ್ಯ ಶಿವಕುಮಾರ್ ಜೊತೆ ಸಂಪರ್ಕದಲ್ಲಿದ್ದೇನೆ. ಆದರೆ ಐಟಿ ದಾಳಿ ಬಗ್ಗೆ ನಾನು ಉತ್ತರ ನೀಡುವುದಿಲ್ಲ ಎಂದು ಹೇಳಿದರು. ಇದೇ ವೇಳೆ ರೇವಣ್ಣ ರಾಜ್ಯದ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು.

Intro:ಹಾಸನ; ಹಾಲು ಉತ್ಪಾದಕರಿಗೆ ಡೈರಿ ಉದ್ಯಮಕ್ಕೆ ಮಾರಕವಾದ ಆರ್.ಸಿ.ಈ.ಪಿ ಮುಕ್ತ ವ್ಯಾಪಾರ ಒಪ್ಪಂದ ರಫ್ತು ನೀತಿಯನ್ನು ಕೈಬಿಡಬೇಕು ಎಂದು ಮಾಜಿ ಸಚಿವ ಎಚ್. ಡಿ.ರೇವಣ್ಣ ಒತ್ತಾಯಿಸಿದರು.

ನಗರದ ಹಾಸನ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಕಚೇರಿಯಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು ಕೆಂದ್ರದ ಇಂತಹ ಅವೈಜ್ಞಾನಿಕ ನೀತಿಯ ಕಾರಣ ಲಕ್ಷಾಂತರ ಹಾಲು ಉತ್ಪಾದಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಇಂತಹ ನೀತಿಯನ್ನು ಕೂಡಲೇ ಕೈಬಿಡಬೇಕು, ರಾಜ್ಯ ಸರ್ಕಾರ ಕೂಡಲೆ ಸದನ ಕರೆದು ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು, ಹಾಗೂ ನಿಯೋಗದೊಂದಿಗೆ ತೆರಳಿ ಪ್ರಧಾನ ಮಂತ್ರಿ ಅವರಿಗೆ ಮನವರಿಕೆ ಮಾಡಬೇಕೆಂದ ಅವರು, ಹಾಲು ಉತ್ಪಾದನೆ ಹಾಗೂ ಮಾರಾಟದಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕ ರಾಜ್ಯ ೧೦ ಕೋಟಿಗೂ ಹೆಚ್ಚು ಹಾಲು ಉತ್ಪಾದಕರನ್ನು ಹೊಂದಿದ್ದು, ಇಂತಹ ನೀತಿಯಿಂದ ಅವರು ತೊಂದರೆಗೆ ಸಿಲುಕಲಿದೆ ಇದನ್ನು ಮರು ಪರಿಶೀಲಿಸಿ ಕ್ರಮಕ್ಕೆ ಮುಂದಾಗಬೇಕು ಇಲ್ಲವಾದಲ್ಲಿ ಹಾಲು ಉತ್ಪಾದಕರು ಹಾಗೂ ಇದನ್ನೆ ನಂಬಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿದೆ ಎಂದರು.

ದೀಪಾವಳಿ ಬೆಳಕಿನ ಹಬ್ಬಕ್ಕೆ ಇಂದಿನಿಂದಲೇ ಹಾಲು ಉತ್ಪಾದಕರಿಗೆ ಲೀಟರಿಗೆ ೧ ರೂಗಳಂತೆ ಪ್ರೋತ್ಸಹ ಧನ ಹೆಚ್ಚಳ ಮಾಡಲಾಗುವುದು. ೨೦೧೯-೨೦ನೇ ಸಾಲಿನ ಸೆಪ್ಟಂಬರ್ ಮಾಹೆಯವರೆಗೂ ಅಂದಾಜು ೪೦ ಕೋಟಿ ರೂ ಲಾಭವನ್ನು ಹಾಸನ ಹಾಲು ಒಕ್ಕುಟಗಳಿಸಿದೆ. ಲಾಭವನ್ನು ಉತ್ಪಾದಕರಿಗೆ ವರ್ಗಾಯಿಸುವ ನಿಟ್ಟಿನಲ್ಲಿ ದೀಪಾವಳಿ ಉಡುಗರೆಯಾಗಿ ಪ್ರತಿ ಕೆಜಿ ಹಾಲಿಗೆ ೧ ರೂ ಖರೀದಿ ಧರ ಹೆಚ್ಚಿಸಲಾಗಿದೆ. ದರ ಹೆಚ್ಚಳದಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ ೨೬.೫೦ ರಷ್ಟು ದರ ಸಿಗಲಿದೆ. ಕರ್ನಾಟಕ ಹಾಲು ಮಂಡಳಿಯಲ್ಲೆ ಅತೀ ಹೆಚ್ಚಿನ ದರ ಪಾವತಿಸುತ್ತಿರುವ ಎರಡನೇ ಒಕ್ಕೂಟವಾಗಿದೆ ಎಂದರು. ದೀಪವಳಿ ಆಚರಿಸಲಿ ಎಂದು ದೆಹಲಿ ಹೈಕೋರ್ಟ್ ಜಾಮೀನು ನೀಡಿರುವುದು ಸಂತೋಷದ ವಿಚಾರವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ. ಶಿವಕುಮಾರ್‌ಗೆ ಅವರದೆಯಾದ ಶಕ್ತಿಯಿದೆ. ಅವರದು ೩೦ ವರ್ಷಗಳ ರಾಜಕಾರಣ ಇದ್ದು, ರಾಜಕೀಯದಲ್ಲಿ ವಯಕ್ತಿಕವಾಗಿ ಏನೆ ಇರಲಿ ಚುನಾವಣೆ ವೇಳೆ ಬೇರೆ. ನಾನು ಪ್ರತಿನಿತ್ಯ ಶೀವಕುಮಾರ್ ಜೊತೆ ಸಂಪರ್ಕದಲ್ಲಿದ್ದೇನೆ. ಐಟಿ ದಾಳಿ ಬಗ್ಗೆ ನಾನು ಉತ್ತರ ನೀಡುವುದಲ್ಲ ಎಂದರು.
ರಾಜ್ಯದ ಸಮಸ್ತ ಜನತೆಗೆ ದೀಪಾವಳಿ ಹಬ್ಬವು ಬಾಳಲ್ಲಿ ಬೆಳಕು ತರಲಿ ಎಂದು ಭಕ್ತಿಪೂರ್ವಕವಾಗಿ ದೇವರಲ್ಲಿ ಪ್ರಾರ್ಥಿಸಿರುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಇದೆ ವೇಳೆ ಶುಭ ಹಾರೈಸಿದರು.
Body:ಬೈಟ್ ; ಎಚ್.ಡಿ. ರೇವಣ್ಣ, ಮಾಜಿ ಸಚಿವ.Conclusion:-ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.