ETV Bharat / state

ಒಬ್ಬ ಶಾಸಕ ಡಿಸಿಗಾಗಿ ನಾಲ್ಕು ಗಂಟೆ ನಿಲ್ಲಬೇಕಾ.. ನಾನೇನು ದನ ಕಾಯೋನಾ..? - H. D. Revanna Member of the Karnataka Legislative Assembly

ಹೆಚ್​.ಡಿ. ರೇವಣ್ಣ ಮತ್ತು ಹಾಸನ ಜಿಲ್ಲಾಧಿಕಾರಿ ನಡುವೆ ಕಟ್ಟಡ ಒಡೆಯುವ ವಿಚಾರದಲ್ಲಿ ಕಲಹ ಆರಂಭವಾಗಿದೆ. ಅದು ಮುಂದುವರೆದು ಹಾಸನದಲ್ಲಿ ಡಿಸಿ ವಿರುದ್ಧವಾಗಿ ರೇವಣ್ಣ ಮಾಧ್ಯಮಗೋಷ್ಟಿ ನಡೆಸಿ ಮತ್ತೆ ಕಿಡಿಕಾರಿದ್ದಾರೆ.

H. D. Revanna Member of the Karnataka Legislative Assembly
ರೇವಣ್ಣ
author img

By

Published : May 4, 2022, 10:37 PM IST

ಹಾಸನ: ಏನ್ ಯಾವಾಗ್ಲು ಬಿಜೆಪಿ ಸರ್ಕಾರ ಇರುತ್ತೆ ಅನ್ಕಂಡಿದ್ದಾರೆ. ನಾನು ಇಪ್ಪತ್ತೈದು ವರ್ಷಗಳಿಂದ ಎಲ್ಲವನ್ನೂ ನೋಡಿದ್ದೇನೆ. ಒಬ್ಬ ಶಾಸಕ ಧರಣಿ ಕೂತಿದ್ದಾನೆ ಎಂದರೆ ಸ್ಥಳಕ್ಕೆ ಒಬ್ಬ ಜಿಲ್ಲಾಧಿಕಾರಿ ಬರುವುದಿಲ್ಲ ಎಂದರೆ ನಾನೇನು ದನಕಾಯೋನಾ? ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ವಿರುದ್ಧ ಶಾಸಕ ಹೆಚ್​ ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಡಿಸಿ ಆಫೀಸ್ ಒಡೆದು ಹಾಕಿದ್ರೆ ಅದರ ಪರಿಣಾಮ ಬೇರೆ ಆಗುತ್ತೆ. ಡಿಸಿ ಸಭೆಗೆ ಹೋದರೆ ಬೆಲೆ ಕೊಡಲ್ಲ. ಡಿಸಿ ಎಷ್ಟು ದಿನ ಆಡ್ತಾನೆ ಆಡ್ಲಿ ಎಂದು ಬೇಸರ ಹೊರಹಾಕಿದರು. ರಾತ್ರಿ ವೇಳೆ ಹಾಸನ ತಾಲೂಕು ಕಚೇರಿ ಕಟ್ಟಡ ಒಡೆದು ಹಾಕಿದ ಬಗ್ಗೆಯೂ ಅಸಮಾಧಾನ ಹೊರಹಾಕಿದ ರೇವಣ್ಣ ಅವರು, ಡಿಸಿಯವರಿಗೆ ಪುರುಸೊತ್ತಿಲ್ಲ. ರಾತ್ರಿ ವೇಳೆ ಬಿಲ್ಡಿಂಗ್ ಹೊಡೆಯುವುದರಲ್ಲಿ ಬ್ಯುಸಿ ಇದ್ದಾರೆ. ಡಿಸಿ ಅನ್ನೋ ಪದ ತೆಗೆಯಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.

ನಾನು ಒಬ್ಬ ಶಾಸಕನಾಗಿದ್ದೇನೆ. ನನಗೂ ಎರಡು ಹೋಬಳಿ ಬರುತ್ತವೆ. ಮಂತ್ರಿ ಹೇಳಿದ್ರು ಅಂತಾರೆ, ಮಂತ್ರಿ ಇವರಿಗೆ, ನನಗಲ್ಲ. ಕಟ್ಟಡವನ್ನು ರಾತ್ರಿ ಒಡೆಯುವುದಾದರೂ ಏನಿತ್ತು, ಬೆಳಗ್ಗೆ ಒಡೆಬೇಕಿತ್ತು. ಹೇಳೋರು, ಕೇಳೋರು ಯಾರೂ ಇಲ್ಲ ಇವರಿಗೆ. ಅಧಿಕಾರ ಇದೆ ಎಂದು ದರ್ಪ ತೋರಿದ್ರೆ ಹೆಚ್ಚು ದಿನ ನಡೆಯಲ್ಲ ಎಂದು ಗರಂ ಆದರು.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪರೀಕ್ಷೆ ರದ್ದು ವಿಚಾರ: ಸರ್ಕಾರಕ್ಕೆ ಕೆಎಟಿ ನೋಟಿಸ್, ವಿಚಾರಣೆ ಮುಂದೂಡಿಕೆ

For All Latest Updates

TAGGED:

ravana
ETV Bharat Logo

Copyright © 2024 Ushodaya Enterprises Pvt. Ltd., All Rights Reserved.