ETV Bharat / state

ಹೇಮಾವತಿ ರಭಸಕ್ಕೆ ಜನವಸತಿ ಪ್ರದೇಶ ಮುಳುಗಡೆ: ಶಾಸಕ ಎ.ಟಿ ರಾಮಸ್ವಾಮಿ ಭೇಟಿ, ಪರಿಶೀಲನೆ

author img

By

Published : Aug 12, 2019, 2:04 PM IST

ಹೇಮಾವತಿ ಜಲಾಶಯದ ನೀರಿನ ಹರಿವು ಹೆಚ್ಚಾದ ಕಾರಣ ಅರಕಲಗೂಡಿನ ನದಿ ಪಾತ್ರದ ಜನವಸತಿ ಪ್ರದೇಶ,ಅಪಾರ ಪ್ರಮಾಣದ ಕೃಷಿ ಭೂಮಿ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ಹೇಮಾವತಿ ನೀರಿನ ರಭಸಕ್ಕೆ ಜನವಸತಿ ಪ್ರದೇಶ ಮುಳುಗಡೆ

ಹಾಸನ : ಜಿಲ್ಲೆಯ ಅರಕಲಗೂಡು ತಾಲೂಕಿನ ಉತ್ತರಭಾಗ ಗಡಿಯಲ್ಲಿ ಹೇಮಾವತಿ ಮತ್ತು ದಕ್ಷಿಣ ಭಾಗದಲ್ಲಿ ಕಾವೇರಿ ನದಿಗಳು ಅಪಾಯದ ಮಟ್ಟಮೀರಿ ಹರಿಯುತ್ತಿರುವುದರಿಂದ ನದಿ ಪಾತ್ರದ ಜನವಸತಿ ಪ್ರದೇಶ,ಅಪಾರ ಪ್ರಮಾಣದ ಕೃಷಿ ಭೂಮಿ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ಹೇಮಾವತಿ ಜಲಾಶಯದಿಂದ ಅಧಿಕ ನೀರು ಬಿಟ್ಟ ಪರಿಣಾಮ ತಾಲೂಕಿನ ಮರಡಿ, ಹೊನಗಾನಹಳ್ಳಿ, ಹೆಬ್ಬಾಲೆ, ಅತ್ನಿ, ಗಂಗನಾಳು ,ಗಂಜಲಗೂಡು, ಅಣ್ಣಿಗನಹಳ್ಳಿ, ಉಪ್ಪಾರಕೊಪ್ಪಲು, ಬಸವನಹಳ್ಳಿ ಹಾಗೂ ಹರದೂರಪುರ ಗ್ರಾಮಗಳಲ್ಲಿನ ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. ಅಡಿಕೆ, ಬಾಳೆ, ತೆಂಗು, ಮೆಕ್ಕೆಜೋಳ, ಭತ್ತ, ರಾಗಿ, ಶುಂಠಿ ಸೇರಿದಂತೆ ಇತರ ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿವೆ. ನದಿ ನೀರಿನಿಂದ ಜಲಾವೃತಗೊಂಡ ಜನ ವಸತಿ ಹಾಗೂ ಕೃಷಿ ಪ್ರದೇಶಕ್ಕೆ ಶಾಸಕ ಎ.ಟಿ.ರಾಮಸ್ವಾಮಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈಗಾಗಲೇ ಹೇಮಾವತಿ, ಕಾವೇರಿ ನದಿ ಪಾತ್ರದಲ್ಲಿ ನೆರೆಯಿಂದ ಉಂಟಾಗಿರುವ ಕೃಷಿ, ಜನವಸತಿ ಪ್ರದೇಶದ ಹಾನಿ ಕುರಿತು ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿಖರ ಮಾಹಿತಿ ಲಭ್ಯವಾದ ನಂತರ ಸರಕಾರಕ್ಕೆ ಹಾನಿ ಕುರಿತು ಮಾಹಿತಿ ನೀಡಿ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದ್ರು. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕೆಂದು ಅವರು ಮನವಿ ಮಾಡಿದರು.

ಹೇಮಾವತಿ ನೀರಿನ ರಭಸಕ್ಕೆ ಜನವಸತಿ ಪ್ರದೇಶ ಮುಳುಗಡೆ

ಹೇಮಾವತಿ ನದಿ ನೀರು ಹಳ್ಳದ ಪ್ರದೇಶಕ್ಕೆ ವಿಸ್ತರಣೆಗೊಂಡ ಪರಿಣಾಮ ಹೊಳೆನರಸೀಪುರ - ಅರಕಲಗೂಡು,ಹರದೂರುಪುರ - ಪಡವಲಹಿಪ್ಪೆ ಹಾಗೂ ಹೊಳೆನರಸೀಪುರ-ಗೊರೂರು ನಡುವಿನ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಇಂದು ಬೆಳಗ್ಗೆಯಿಂದಲೇ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

Intro:ಹಾಸನ : ಅರಕಲಗೂಡು ತಾಲೂಕಿನ ಉತ್ತರಭಾಗ ಗಡಿಯಲ್ಲಿ ಹೇಮಾವತಿ ಮತ್ತು ದಕ್ಷಿಣ ಭಾಗದಲ್ಲಿ ಕಾವೇರಿ ನದಿಗಳು ಅಪಾಯಮಟ್ಟಮೀರಿ ಹರಿಯುತ್ತಿರುವುದರಿಂದ ನದಿ ಪಾತ್ರದ ಜನವಸತಿ ಪ್ರದೇಶ,ಅಪಾರ ಪ್ರಮಾಣದ ಕೃಷಿ ಭೂಮಿ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಹಾಸನ : ಅರಕಲಗೂಡು ತಾಲೂಕಿನ ಉತ್ತರಭಾಗ ಗಡಿಯಲ್ಲಿ ಹೇಮಾವತಿ ಮತ್ತು ದಕ್ಷಿಣ ಭಾಗದಲ್ಲಿ ಕಾವೇರಿ ನದಿಗಳು ಅಪಾಯಮಟ್ಟಮೀರಿ ಹರಿಯುತ್ತಿರುವುದರಿಂದ ನದಿ ಪಾತ್ರದ ಜನವಸತಿ ಪ್ರದೇಶ,ಅಪಾರ ಪ್ರಮಾಣದ ಕೃಷಿ ಭೂಮಿ ಸಂಪೂರ್ಣವಾಗಿ ಜಲಾವೃತಗೊಂಡಿದೆ.

Body:ಸುಮಾರು ಐದಾರು ದಿನಗಳ ಹಿಂದೆ ತಾಲೂಕಿನಲ್ಲಿ ಮಳೆ ಇಲ್ಲದೇ ಅನಾವೃಷ್ಠಿ ಕಂಡುಬಂದಿತ್ತು. ಬದಲಾದ ಹವಮಾನ ಪರಿಣಾಮ ನಿರಂತರವಾಗಿ ಮಳೆಯ ಅಬ್ಬರ ಜೋರಾದ ಪರಿಣಾಮ ಮೂರು ನಾಲ್ಕು ತಿಂಗಳ ಕಾಲ ಜಲಾಶಯಕ್ಕೆ ಸಂಗ್ರಹವಾಗುತ್ತಿದ್ದ ನೀರು ಕೇವಲ ಮೂರು ದಿನಗಳಲ್ಲಿಯೇ ಬಂದಿದೆ. ಇನ್ನೂ ಹೇಮಾವತಿ ಜಲಾಶಯದಿಂದ ೧ಲಕ್ಷ ಕ್ಯುಸೆಕ್ಸ್ ನೀರನ್ನು ಶನಿವಾರ ಮುಂಜಾನೆಯಿಂದಲೇ ನದಿಗೆ ಹೊರ ಬಿಟ್ಟ ಪರಿಣಾಮ ನದಿ ಪಾತ್ರದಲ್ಲಿ ನೆರೆಹಾವಳಿ ಉಂಟಾಗಿದೆ.

ಹೇಮಾವತಿ ಜಲಾಶಯದಿಂದ ಅಧಿಕ ನೀರು ಬಿಟ್ಟಪರಿಣಾಮ ತಾಲೂಕಿನ ಮರಡಿ, ಹೊನಗಾನಹಳ್ಳಿ, ಹೆಬ್ಬಾಲೆ, ಅತ್ನಿ, ಗಂಗನಾಳು ,ಗಂಜಲಗೂಡು, ಅಣ್ಣಿಗನಹಳ್ಳಿ, ಉಪ್ಪಾರಕೊಪ್ಪಲು, ಬಸವನಹಳ್ಳಿ ಹಾಗೂ ಹರದೂರಪುರ ಗ್ರಾಮಗಳಲ್ಲಿನ ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. ಅಡಿಕೆ, ಬಾಳೆ, ತೆಂಗು, ಮೆಕ್ಕೆಜೋಳ, ಭತ್ತ, ರಾಗಿ, ಶುಂಠಿ ಸೇರಿದಂತ್ತೆ ಇತರೆ ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿವೆ.

ಹೇಮಾವತಿ ನದಿ ನೀರು ಹಳ್ಳದ ಪ್ರದೇಶಕ್ಕೆ ವಿಸ್ತರಣೆಗೊಂಡ ಪರಿಣಾಮ ಹೊಳೆನರಸೀಪುರ-ಅರಕಲಗೂಡು,ಹರದೂರುಪುರ-ಪಡವಲಹಿಪ್ಪೆ ಹಾಗೂ ಹೊಳೆನರಸೀಪುರ-ಗೊರೂರು ನಡುವಿನ ರಸ್ತೆಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಇಂದು ಬೆಳಗ್ಗೆಯಿಂದಲೇ ವಾಹನ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಜನರ ಸಂಚಾರಕ್ಕೆ ತೀವ್ರತರನಾದ ತೊಂದರೆ ಉಂಟಾಗಿದೆ.

ನದಿನೀರಿನಿಂದ ಜಲಾವೃತಗೊಂಡ ಜನ ವಸತಿ ಹಾಗೂ ಕೃಷಿ ಪ್ರದೇಶಕ್ಕೆ ಶಾಸಕ ಎ.ಟಿ.ರಾಮಸ್ವಾಮಿ ಅಧಿಕಾರಿಗಳೊಂದಿಗೆ ಭೇಟಿನೀಡಿ ಪರಿಶೀಲನೆ ನಡೆಸಿದರು.

ಈಗಾಗಲೇ ಹೇಮಾವತಿ, ಕಾವೇರಿ ನದಿ ಪಾತ್ರದಲ್ಲಿ ನೆರೆಯಿಂದ ಉಂಟಾಗಿರುವ ಕೃಷಿ,ಜನವಸತಿ ಪ್ರದೇಶದ ಹಾನಿ ಕುರಿತು ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಒಂದೆರಡು ದಿನಗಳಲ್ಲಿ ನಿಖರ ಮಾಹಿತಿ ಲಭ್ಯವಾಗಲಿದೆ.ಬಳಿಕೆ ಸರಕಾರಕ್ಕೆ ಹಾನಿಕುರಿತು ಮಾಹಿತಿ ನೀಡಿ ಸೂಕ್ತಪರಿಹಾರ ಕಲ್ಪಿಸಲಾಗುವುದು, ನದಿ ಪಾತ್ರದಲ್ಲಿನ ಜನರು ಎಚ್ಚರಿಕೆಯಿಂದ ಇರಬೇಕೆಂದು ಅವರು ಮನವಿ ಮಾಡಿದರು.Conclusion:ಈ ಸಂದರ್ಭದಲ್ಲಿ ತಹಸೀಲ್ದಾರ್ ಶಿವರಾಜ್,ಇಒ ರವಿಕುಮಾರ್,ಎಇಇ ಅಶ್ವಥ್‌ನಾರಾಯಣ್,ಕಂದಾಯ ಅಧಿಕಾರಿ,ಶಿವಕುಮಾರ್,ಮಾಜಿ ಜಿಪಂ ಸದಸ್ಯ ನಂಜುಂಡಸ್ವಾಮಿ,ಗುತ್ತಿಗೆದಾರ ಕಳ್ಳಿಮುದ್ದನಹಳ್ಳಿ ಲೋಕೇಶ್, ರೈತರು ಹಾಜರಿದ್ದರು.

-ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.