ಹಾಸನ: ಪಿಯುಸಿ ವಿದ್ಯಾರ್ಥಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಇಂದಿನಿಂದ ಶನಿವಾರದವರೆಗೆ ರಜೆ ನೀಡಲಾಗಿದೆ.
ಹಾಸನ ಜಿಲ್ಲೆಯ ಹುಣಸೂರು ತಾಲೂಕಿನ ಸರ್ಕಾರಿ ಪಿಯುಸಿ ಕಾಲೇಜಿನ ವಿದ್ಯಾರ್ಥಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ದ್ವಿತೀಯ ಪಿಯುಸಿ ತರಗತಿಗೆ ಶನಿವಾರದ ತನಕ ರಜೆ ಘೋಷಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಓದಿ: ದಾವಣಗೆರೆಯಲ್ಲಿ ಓರ್ವ ವಿದ್ಯಾರ್ಥಿನಿ-ಮೂವರು ಶಿಕ್ಷಕರಿಗೆ ಕೊರೊನಾ
ವಿದ್ಯಾರ್ಥಿಯ ಪೋಷಕರಿಗೆ ಯಾವುದೇ ಸೋಂಕು ಇಲ್ಲ. ಆದರೆ ವಿದ್ಯಾರ್ಥಿಗೆ ಪಾಸಿಟಿವ್ ಬಂದ ಹಿನ್ನೆಲೆ ಆತನನ್ನು ಒಂದು ವಾರ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಕಾಲೇಜಿನಲ್ಲಿರುವ 69 ವಿದ್ಯಾರ್ಥಿಗಳಿಗೆ ಶನಿವಾರದವರೆಗೆ ಕಾಲೇಜಿಗೆ ಹಾಜರಾಗದಂತೆ ಸೂಚನೆ ನೀಡಲಾಗಿದೆ. ನಾಳೆ ಕಾಲೇಜಿಗೆ ಸಂಪೂರ್ಣ ಸ್ಯಾನಿಟೈಸ್ ಮಾಡಿ ಸೋಮವಾರದಿಂದ ಕಾಲೇಜು ಆರಂಭಿಸಲಾಗುವುದು ಎಂದು ಡಿಡಿಪಿಐ ದೂರವಾಣಿಯ ಮೂಲಕ ಈಟಿವಿ ಭಾರತಕ್ಕೆ ತಿಳಿಸಿದರು.