ಹಾಸನ: ನಮ್ಮ ವಾರ್ಡಿಗೆ ಕೊಡಬೇಕಾದ ನೀರನ್ನು ಮೇಲಾಧಿಕಾರಿಗಳ ಗಮನಕ್ಕೆ ತರದೆ ಬೇರೆಯವರಿಗೆ ಅಕ್ರಮವಾಗಿ ನೀರನ್ನು ಬಿಡುತ್ತಿದ್ದಾರೆ ಎಂದು ಆರೋಪ ಮಾಡಿ ವಾಟರ್ ಮ್ಯಾನ್ ಸಿದ್ದೇಶ್ ಎಂಬುವವರನ್ನು ಜೆಡಿಎಸ್ ಕಾರ್ಯಕರ್ತರು ಪಂಪ್ಹೌಸ್ನಲ್ಲಿ ಕೂಡಿಹಾಕಿ ನಗರಸಭೆಯ ಜೆಡಿಎಸ್ ಸದಸ್ಯ ವಾಸು ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯಿತು.
ಹಾಸನ ನಗರದ 4 ನೇ ವಾರ್ಡಿನಲ್ಲಿ ಜನತೆಗೆ ನೀಡಬೇಕಾದ ನೀರಿನ್ನು ಪ್ರತಿನಿತ್ಯ ನೀಡದೆ ನಾಲ್ಕನೇ ವಾರ್ಡಿನ ನೀರನ್ನು ಬೇರೆಯವರಿಗೆ ನೀಡುತ್ತಿದ್ದಾರೆ ಎಂಬ ಆರೋಪದ ಮೇಲೆ ವಾಟರ್ ಮ್ಯಾನ್ ಸಿದ್ದೇಶ್ವರ ಎಂಬವರನ್ನು ಇವತ್ತು ವಾರ್ಡಗಳಿಗೆ ನೀರೆತ್ತುವ ಪಂಪ್ಹೌಸ್ನಲ್ಲಿ ಕೂಡಿಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಯ 4 ನೇ ವಾರ್ಡ್ ಬೇರೆ ವಾರ್ಡ್ಗಳಿಗಿಂತ ದೊಡ್ಡದು, ಹಾಗಾಗಿ ಪ್ರತಿನಿತ್ಯ ನಗರವನ್ನ ಸ್ವಚ್ಚತೆ ಮಾಡುವ ಪೌರಕಾರ್ಮಿಕರಗಳು ಕೂಡಾ 4 ನಾಲ್ಕು ಮಂದಿ ಇದ್ದು, 4ನೇ ವಾರ್ಡ್ಗೆ ಸಾಕಷ್ಟು ಅನ್ಯಾಯವಾಗ್ತಿದೆ ಎಂದು ಸದಸ್ಯ ವಾಸುದೇವ್ ಮತ್ತು ಜೆಡಿಎಸ್ ಕಾರ್ಯಕರ್ತರು ಆರೋಪಿಸಿ ಪ್ರತಿಭಟನೆ ಮಾಡಿದ್ರು. ಬಳಿಕ ಸ್ಥಳಕ್ಕೆ ಬಂದ ಆಯುಕ್ತ ಕೃಷ್ಣಮೂರ್ತಿ ಸಮಸ್ಯೆಯನ್ನು ಈಗಾಗಲೇ ವಾಸುರವರು ನಮ್ಮ ಗಮನಕ್ಕೆ ತಂದಿದ್ದಾರೆ. ಇದರ ಬಗ್ಗೆ ಕೂಲಂಕುಶವಾಗಿ ನಾನು ಪರಿಶೀಲನೆ ಮಾಡುತ್ತೇನೆ. ಜೊತೆಗೆ ನಾಲ್ಕನೇ ವಾರ್ಡಿನ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಬಗೆಹರಿಸುತ್ತೇನೆ ಎಂದರು.
ಈಗಾಗಲೇ 50 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ನೀರಿನ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಜೊತೆಗೆ ನೀರಿನ ನಿರ್ವಹಣೆ ಮಾಡುತ್ತಿರುವ ಸಿದ್ದೇಶ್ ಅವರನ್ನು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.