ಹಾಸನ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಮಾಜಿ ಪ್ರಧಾನಿ ತವರೂರಾದ ಹೊಳೆನರಸೀಪುರದಲ್ಲಿ ಮುಸ್ಲಿಂ ಬಾಂಧವರು ಕಾಂಗ್ರೆಸ್ ಪಕ್ಷದ ಸಹಕಾರದೊಂದಿಗೆ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಹೊಳೆನರಸೀಪುರ ತಾಲೂಕು ಮುಸ್ಲಿಂ ಬಾಂಧವರು ಪಟ್ಟಣದ ಲಕ್ಷ್ಮಿನರಸಿಂಹ ದೇವಾಲಯದ ಹಿಂಭಾಗದಿಂದ ಪ್ರತಿಭಟನೆ ಪ್ರಾರಂಭಿಸಿ ಬಳಿಕ ಕೆಲವು ಪ್ರಮುಖ ರಸ್ತೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದ್ದು, ತಮ್ಮ ಮುಸ್ಲಿಂ ಸಮಾಜವನ್ನ ಹೊರತುಪಡಿಸಿ ಪೌರತ್ವ ತಿದ್ದುಪಡಿ ಮಸೂದೆ ಜಾರಿ ಮಾಡಲು ಹೊರಟಿರುವುದು ಜಾತ್ಯಾತೀತೆಯ ವಿರುದ್ದದ ತಿದ್ದುಪಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಸ್ಸಾಂ ಬಳಿಕ ಭಾರತದಾದ್ಯಂತ ಎನ್.ಆರ್.ಸಿ.ಜಾರಿಗೊಳಿಸಲು ಭದ್ರತಾ ಮಸೂದೆಯಾಗಿ ಪೌರತ್ವ ಕಾಯ್ದೆ ಜಾರಿ (ಸಿಎಬಿ)ಯನ್ನ ತಿದ್ದುಪಡಿ ಮಾಡಿ ಇಸ್ಲಾಂ ಧರ್ಮವನ್ನ ಅವಮಾನಿಸಿ, ಧರ್ಮವನ್ನ ಹತ್ತಿಕ್ಕಲು ನಡೆಸುತ್ತಿರುವ ಷಡ್ಯಂತ್ರವಾಗಿದೆ. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಮಸೂದೆ ಮಂಡಿಸಿದ್ದು, ಬಿಜೆಪಿ ದೇಶಕ್ಕೆ ಮಾರಕ ಮತ್ತು ಸಂವಿಧಾನ ವಿರೋಧಿಯಾಗಿದ್ದು, ದೇಶ ಒಡೆಯಲು ಈ ಕಾಯ್ದೆ ಜಾರಿಗೊಳಿಸಿದೆ ಎಂದು ಆರೋಪಿಸಿದ್ದಾರೆ.