ETV Bharat / state

ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರ ಸಂಘದಿಂದ ಪ್ರತಿಭಟನೆ - ಹಾಸನದಲ್ಲಿ ಪ್ರತಿಭಟನೆ ನ್ಯೂಸ್

ಗ್ರಾಮ ಪಂಚಾಯತ್ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾ.ಪಂ ಕಚೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

Protest
Protest
author img

By

Published : Jun 26, 2020, 10:06 PM IST

ಹಾಸನ: ಗ್ರಾಮ ಪಂಚಾಯತ್ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾ.ಪಂ ಕಚೇರಿ ಮುಂದೆ ಸಿಐಟಿಯು ಮತ್ತು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

​ಗ್ರಾ.ಪಂ. ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೇಗೌಡ ಮಾತನಾಡಿ, ಗ್ರಾ.ಪಂ ನೌಕರರಿಗೆ ಕನಿಷ್ಠ ವೇತನ, ಅನುಮೋದನೆ, ಸೇವಾ ನಿಯಮಾವಳಿ, ಉಪಧನ ಮತ್ತಿತರೆ ಸೇವಾ ಸೌಲಭ್ಯಗಳ ಕುರಿತು ಸರ್ಕಾರ ಆದೇಶ ಹೊರಡಿಸಿದರೂ ಸಹ ಗ್ರಾ.ಪಂ.ಗಳಲ್ಲಿ ಸರ್ಕಾರದ ಆದೇಶಗಳು ಜಾರಿಯಾಗಿರುವುದಿಲ್ಲ. ಸರ್ಕಾರದ ಅಧಿಸೂಚನೆಯಂತೆ ಹಾಸನ ತಾಲೂಕು, ಗ್ರಾಮ ಪಂಚಾಯತಿಗಳಲ್ಲಿ ನೇಮಕಗೊಂಡು ಕೆಲಸ ಮಾಡುತ್ತಿರುವ ಎಲ್ಲಾ ನೌಕರರಿಗೆ ಉತ್ತಮ ಸವಲತ್ತು ನೀಡಬೇಕು ಎಂದು ಆಗ್ರಹಿಸಿದರು‌.

ಅಧಿಕಾರಿಗಳು ಸರ್ಕಾರದ ಮತ್ತು ಜಿ.ಪಂ. ಆದೇಶಗಳನ್ನು ಜಾರಿ ಮಾಡದೆ, ಪಂಚಾಯತ್ ರಾಜ್ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ತಾಲೂಕಿನ ಜವಾಬ್ದಾರಿ ಹೊಂದಿರುವ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ತಾವು ಪ್ರತಿ ವಾರ ಪಿಡಿಒಗಳ ಸಭೆ ಕರೆದರೂ ಕೂಡಾ ಗ್ರಾ.ಪಂ. ನೌಕರರಿಗೆ ಸಂಬಂಧಿಸಿದ ಆದೇಶಗಳನ್ನು ಗ್ರಾ.ಪಂ.ಗಳಲ್ಲಿ ಸಮರ್ಪಕವಾಗಿ ಜಾರಿ ಮಾಡಿಸಲು ವಿಷಯಗಳನ್ನು ಒತ್ತಾಯಪೂರ್ವಕವಾಗಿ ಹೇಳುತ್ತಿಲ್ಲ. ಅಲ್ಲದೇ, ಮೇಲ್ವಿಚಾರಣೆ ನಡೆಸಿ ಸರ್ಕಾರದ ಆದೇಶ ಜಾರಿ ಮಾಡದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ ಅವರು, ಕೂಡಲೇ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಹಲವಾರು ಪಂಚಾಯಿತಿಗಳಲ್ಲಿ​ ಅನುಕಂಪದ ನೇಮಕಾತಿಗೆ ತೊಂದರೆಯಾಗುತ್ತಿದ್ದು, ಸರ್ಕಾರದ ಆದೇಶದಂತೆ ಅನುಕಂಪದ ನೇಮಕಾತಿಗಳನ್ನು ಮಾಡಿಕೊಳ್ಳಲು ಸೂಕ್ತ ನಿರ್ದೇಶನ ನೀಡಬೇಕು. ಮರಣ ಅಥವಾ ನಿವೃತ್ತಿ ಹೊಂದಿದ ನೌಕರರ ಅಥವಾ ಅವಲಂಬಿತರಿಗೆ ಕೂಡಲೇ ಗ್ರಾಚ್ಯುಟಿ ಹಣ ಪಾವತಿಸಲು ಆದೇಶ ನೀಡಬೇಕು. ಕಾನೂನು ಬಾಹಿರವಾಗಿ, ಹೊಸದಾಗಿ ಅಕ್ರಮ ನೇಮಕಾತಿ ಮಾಡಿಕೊಳ್ಳುವುದನ್ನು ತಡೆದು ಅಕ್ರಮ​ ನೇಮಕಾತಿ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.