ಹಾಸನ: ಪೌರತ್ವ ಕಾಯ್ದೆ ತಿದ್ದುಪಡಿ ಖಂಡಿಸಿ ಅಂಗಡಿ ಮುಂಗ್ಗಟ್ಟನ್ನು ಬಂದ್ ಮಾಡಿ ನಗರದ ವಲ್ಲಭಬಾಯಿ ರಸ್ತೆಯಲ್ಲಿರುವ ಅಮೀರ್ ಹುಸೇನ್ ಕಟ್ಟಡದ ಆವರಣದಲ್ಲಿ ಮುಸ್ಲಿಂ ಹಿತರಕ್ಷಣಾ ಒಕ್ಕೂಟ ಪ್ರತಿಭಟನೆ ನಡೆಸಿತು.
ಮುಸ್ಲಿಂ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ನಾಸೀರ್ ಉಸೇನ್ ರೆಜ್ವಿ ಮಾತನಾಡಿ, ಎಲ್ಲಾ ಮುಸ್ಲಿಂ ಬಾಂಧವರು ಮತ್ತು ಸೆಕ್ಯೂಲರ್ ಪಾರ್ಟಿ ಒಂದಾಗಿ ಈ ದೇಶದ ಸ್ಥಿತಿ-ಗತಿ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಭಾರತವನ್ನು ಇಬ್ಭಾಗ ಮಾಡುವ ದುರುದ್ದೇಶವನ್ನಿಟ್ಟುಕೊಂಡು ತರಲಾಗಿರುವ ಪೌರತ್ವ ಕಾಯ್ದೆಯನ್ನು ನಮ್ಮ ಒಕ್ಕೂಟದಿಂದ ವಿರೋಧಿಸುತ್ತೇವೆ.
ಇದು ಅಂಸವಿಧಾನಿಕವಾದ ಒಂದು ಕಾಯ್ದೆಯಾಗಿದ್ದು, ಕೂಡಲೇ ರದ್ದು ಮಾಡಬೇಕು. ಭಾರತ ಜಾತ್ಯಾತೀತ ರಾಷ್ಟ್ರ. ಈಗ ಒಂದು ಆಕ್ಟ್‌ನ್ನು ಜಾರಿಗೆ ತಂದು ಸಂವಿಧಾನವನ್ನೆ ಬದಲಾಯಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.