ETV Bharat / state

ಡಿ ಕೆ ಶಿವಕುಮಾರ್​​ ಬಂಧನ ವಿರೋಧಿಸಿ ಹಾಸನದಲ್ಲಿ ಪ್ರತಿಭಟನೆ..

author img

By

Published : Sep 4, 2019, 6:11 PM IST

ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಸನದಲ್ಲಿ ಪ್ರತಿಭಟನೆ ನಡೆಸಿದರು.

ಹಾಸನದಲ್ಲಿ ಪ್ರತಿಭಟನೆ

ಹಾಸನ: ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ನೇತೃತ್ವದಲ್ಲಿ ಜಮಾಯಿಸಿದ ಅಪಾರ ಕಾರ್ಯಕರ್ತರು, ಹೊಳೆನರಸೀಪುರ- ಹಾಸನ ಮಾರ್ಗದ ರಸ್ತೆ ತಡೆದು ಟೈರ್ ಸುಟ್ಟು ಬಿಜೆಪಿ ವಿರುದ್ದ ಘೋಷಣೆ ಕೂಗಿದರು.

ಕೇಂದ್ರದ ಬಿಜೆಪಿ ಸರ್ಕಾರ ಇಡಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರಿಗೆ ಭಾರಿ ಕಿರುಕುಳ ನೀಡಲಾಗುತ್ತಿದೆ. ಕಳೆದ ‌ವರ್ಷ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ದುಡಿದ ಶಿವಕುಮಾರ್ ಅವರ ಮೇಲೆ ರಾಜಕೀಯ ಸೇಡು ತೀರಿಸಿಕೊಳ್ಳುವ ಸಲುವಾಗಿ ಬಿಜೆಪಿ ಈಗ ಇಡಿ ಅಧಿಕಾರಿಗಳ ಮೂಲಕ ಡಿಕೆಶಿ ಅವರನ್ನು ಬಂಧಿಸಿ ನೀಚ ಕೆಲಸಕ್ಕೆ ಕೈ ಹಾಕಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಡಿ ಕೆ ಶಿವಕುಮಾರ್​​ ಬಂಧನ ವಿರೋಧಿಸಿ ಹಾಸನದಲ್ಲಿ ಪ್ರತಿಭಟನೆ..

ಕಾಂಗ್ರೆಸ್ ನಾಯಕರನ್ನು ಬಂಧಿಸಿದರೆ ಇಂತಹ ಕುಚೋದ್ಯಗಳಿಗೆಲ್ಲಾ ಪಕ್ಷದ ಕಾರ್ಯಕರ್ತರು ಹೆದರುವುದಿಲ್ಲ. ಜೈಲಿನಿಂದಲೇ ಹೋರಾಟ ಶುರು ಮಾಡಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಷಡ್ಯಂತ್ರಗಳಿಗೆ ಬಗ್ಗುವ ಜಾಯಮಾನ ಹೊಂದಿಲ್ಲ ಎಂದರು.

Intro:ಹಾಸನ : ಕಾಂಗ್ರೆಸ್ ನಾಯಕ ಡಿ.ಕೆ.‌ ಶಿವಕುಮಾರ್ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

Body:ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ನೇತೃತ್ವದಲ್ಲಿ ಪಟ್ಟಣದ ಅನಕೃ ವೃತ್ತದಲ್ಲಿ ಜಮಾಯಿಸಿದ ಅಪಾರ ಕಾರ್ಯಕರ್ತರು ಕೆಲಹೊತ್ತು ಹೊಳೆನರಸೀಪುರ- ಹಾಸನ ಮಾರ್ಗದ ರಸ್ತೆ ತಡೆದು ಟೈರ್ ಸುಟ್ಟು ಬಿಜೆಪಿ ವಿರುದ್ದ ಘೋಷಣೆ ಕೂಗಿದರು.

ಕೇಂದ್ರದ ಬಿಜೆಪಿ ಸರ್ಕಾರ ಇಡಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರಿಗೆ ಭಾರಿ ಕಿರುಕುಳ ನೀಡಲಾಗುತ್ತಿದೆ, ಕಳೆದ ‌ವರ್ಷ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ದುಡಿದ ಶಿವಕುಮಾರ್ ಅವರ ಮೇಲೆ ರಾಜಕೀಯ ಸೇಡು ತೀರಿಸಿಕೊಳ್ಳುವ ಸಲುವಾಗಿ ಬಿಜೆಪಿ ಈಗ ಇಡಿ ಅಧಿಕಾರಿಗಳ ಮೂಲಕ ಡಿಕೆಶಿ ಅವರನ್ನು ಬಂಧಿಸಿ ನೀಚ ಕೆಲಸಕ್ಕೆ ಕೈ ಹಾಕಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಪಕ್ಷದ ಪರ ಕೆಲಸ ನಿರ್ವಹಿಸುವುದೇ ತಪ್ಪು ಎನ್ನುವ ನಿಲುವನ್ನು ಬಿಜೆಪಿ ತಳೆದಂತಿದೆ. ಭಾರತದ ನಾಯಕರೆಂದು ಬಿಂಬಿಸಿಕೊಳ್ಳುತ್ತಿರುವ ಪ್ರಧಾನಿ ಮೋದಿ ಅವರು ಎಲ್ಲರನ್ನು ಸಮಾನವಾಗಿ ಕಾಣದೆ ರಾಜಕೀಯ ಹಗೆ ಸಾಧಿಸುತ್ತಿರುವುದು ಖಂಡನೀಯ, ಕಾಂಗ್ರೆಸ್ ನಾಯಕರನ್ನು ಬಂಧಿಸಿದರೆ ಇಂಥ ಕುಚೋದ್ಯಗಳಿಗೆಲ್ಲಾ ಪಕ್ಷದ ಕಾರ್ಯಕರ್ತರು ಹೆದರುವುದಿಲ್ಲ, ಜೈಲಿನಿಂದಲೇ ಹೋರಾಟ ಶುರು ಮಾಡಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಷಡ್ಯಂತ್ರಗಳಿಗೆ ಬಗ್ಗುವ ಜಾಯಮಾನ ಹೊಂದಿಲ್ಲ ಎಂದರು.

ಕೇಂದ್ರ ಗೃಹ ಮಂತ್ರಿ ಅಮಿತ್‌‌ ಷಾ ಮತ್ತು ಮೋದಿ ಅವರಿಗೆ ಇದೆಲ್ಲಾ ಶೋಭೆ ತರುವುದಿಲ್ಲ, ಡಿಕೆಶಿ ಅವರನ್ನು ಬಿಡುಗಡೆ ಮಾಡದಿದ್ದರೆ ಅರಕಲಗೂಡು ಬಂದ್ ನಡೆಸಲಾಗುವುದು ಎಂದು ಎಚ್ಚರಿಸಿದರು.

Conclusion:ಪಪಂ ಸದಸ್ಯ ಸುಭಾನ್ ಬಾನು, ಪ್ರದೀಪ್, ಅನಿಕೇತನ್, ಭಾಷಿದ್, ಪೃಥ್ವಿ, ಮುಖಂಡರಾದ ಸಮೀರ್, ಜಿಯಾ ಉದ್ದೀನ್, ರಫಿಕ್, ಕೊಣನೂರು ಮೊಹಮದ್ ಶಾಬಾಜ್ ಹಾಗೂ ಅಪಾರ ಕಾರ್ಯಕರ್ತರು ಪ್ರತಿಭಟನೆ ಯಲ್ಲಿ ಹಾಜರಿದ್ರು.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.