ETV Bharat / state

ಮಾರ್ಕೇಟ್‌ನಲ್ಲಿ ನಡೆಯುವ ಬಿಡ್​ನಂತೆ ಮುಂಬಡ್ತಿ ಹುದ್ದೆಗಳ ಮಾರಾಟ: ರೇವಣ್ಣ

ರಾಜ್ಯದಲ್ಲಿ ವಿವಿಧ ಇಲಾಖೆಗಳ 24 ಮುಖ್ಯ ಅಭಿಯಂತರುಗಳಿಗೆ ಬಡ್ತಿ ನೀಡಲು ಸ್ವತಃ ಮುಖ್ಯಮಂತ್ರಿಗಳೇ ಸಹಿ ಹಾಕಿದ್ದಾರೆ. ಇವರಲ್ಲಿ 7 ಮಂದಿ ಅಧಿಕಾರಿಗಳಿಗೆ ಬಡ್ತಿ ಆದೇಶದ ಪ್ರತಿ ನೀಡದೇ ಒಂದು ಸಮಾಜವನ್ನು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರೇವಣ್ಣ ಗಂಭೀರವಾಗಿ ಆರೋಪ ಮಾಡಿದರು.

ಮಾಜಿ ಸಚಿವ ರೇವಣ್ಣ ಸುದ್ದಿಗೋಷ್ಠಿ
author img

By

Published : Sep 19, 2019, 7:48 PM IST

ಹಾಸನ: ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆಯುವ ಬಿಡ್‌ನಂತೆಯೇ ರಾಜ್ಯದಲ್ಲಿ ಮುಂಬಡ್ತಿ ಹುದ್ದೆಗಳು ಮಾರಾಟವಾಗುತ್ತಿವೆ ಎಂದು ಮಾಜಿ ಸಚಿವ ರೇವಣ್ಣ ಆರೋಪ ಮಾಡಿದರು.

ಮಾಜಿ ಸಚಿವ ರೇವಣ್ಣ ಸುದ್ದಿಗೋಷ್ಠಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ, ರಾಜ್ಯದಲ್ಲಿ ಈಗಾಗಲೇ ವಿವಿಧ ಇಲಾಖೆಗಳ 24 ಮುಖ್ಯ ಅಭಿಯಂತರುಗಳಿಗೆ ಬಡ್ತಿ ನೀಡಲು ಸ್ವತಃ ಮುಖ್ಯಮಂತ್ರಿಗಳೇ ಸಹಿ ಹಾಕಿದ್ದು, ಉಳಿದ 7 ಮಂದಿಗೆ ಆದೇಶ ಪ್ರತಿ ನೀಡದೇ ಒಂದು ಸಮಾಜವನ್ನು ಗುರಿಯಾಗಿಟ್ಟುಕೊಂಡು ಅಧಿಕಾರಿ ವರ್ಗದವರನ್ನು ಮುಗಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಟೀಕಾಪ್ರಹಾರ ಮಾಡಿದರು.

ಡಿ.ಕೆ ಶಿವಕುಮಾರ್ ಒಬ್ಬನೇನಾ ಹಣ ಮಾಡಿರೋದು?

ರಾಜ್ಯದಲ್ಲಿ ಡಿ.ಕೆ ಶಿವಕುಮಾರ್ ಒಬ್ಬರೇನಾ ಹಣ ಮಾಡಿರೋದು? ಬೇರೆ ಸಮಾಜದವರು ಯಾರೂ ಹಣ ಮಾಡಿಲ್ವಾ? ಅವರುಗಳನ್ನ ಏಕೆ ತನಿಖೆಗೆ ಒಳಪಡಿಸಿಲ್ಲ? ನಂಬರ್ 18 ರಿಂದ 24ರ ಸಮಾಜವನ್ನು ಮುಖ್ಯಮಂತ್ರಿಗಳು ಮುಗಿಸಲು ಹೊರಟಿದ್ದಾರೆ ಎನ್ನುವ ಮೂಲಕ 'ಸಮಾಜ'ದ ಹೆಸರುಗಳನ್ನು ಪ್ರಸ್ತಾಪಿಸದೇ ಸಂಖ್ಯೆಗಳ ಮೂಲಕವೇ ಆಕ್ರೋಶ ವ್ಯಕ್ತಪಡಿಸಿದ್ರು.

ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡುವ ಕಾರ್ಯ ಮಾಡದೆ, ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವಂತೆ ಅಧಿಕಾರಿಗಳ ವರ್ಗಾವಣೆ, ಮುಂಬಡ್ತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದ್ರು.

ಉತ್ತರಾಧಿಕಾರಿಗಾಗಿ ಸಿದ್ದತೆ:

ಬಿಜೆಪಿಯಲ್ಲಿ 75 ವರ್ಷ ಮೀರಿದ ಹಿರಿಯರಿಗೆ ಯಾವುದೇ ಅಧಿಕಾರ ನೀಡುವುದಿಲ್ಲ ಅಂತ ಮೋದಿ ಮತ್ತು ಅಮಿತ್ ಶಾ ಆದೇಶ ಹೊರಡಿಸಿದ್ದಾರಲ್ಲಾ, ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಇರುವಷ್ಟು ದಿನ ಹಣದ ಲೂಟಿ ಮಾಡಬೇಕು, ಎಲ್ಲವನ್ನು ಮಾಡಿಕೊಂಡು ಮುಂದಿನ ಬಿಜೆಪಿಯ ಉತ್ತರಾಧಿಕಾರಿಯಾಗಿ ವಿಜಯೇಂದ್ರರನ್ನ ರಾಜಕೀಯ ಮುಖ್ಯವಾಹಿನಿಗೆ ತಂದು ಪಟ್ಟಾಭಿಷೇಕ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಅಂತ ವ್ಯಂಗ್ಯವಾಡಿದ್ರು.

Intro:ಹಾಸನ: ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆಯುವ ಆಕ್ಷನ್ ಬಿಡ್ ನಂತೆಯೇ ರಾಜ್ಯದಲ್ಲಿ ಮುಂಬಡ್ತಿ ಹುದ್ದೆಗಳು ಮಾರಾಟವಾಗುತ್ತಿವೆ ಅಂತ ಮಾಜಿ ಸಚಿವ ರೇವಣ್ಣ ಗಂಭೀರವಾಗಿ ಆರೋಪ ಮಾಡಿದರು.

ಒಕ್ಕಲಿಗ ಸಮಾಜವನ್ನ ಸಿಎಂ ಟಾರ್ಗೇಟ್ ಮಾಡಿದ್ದಾರೆ:

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ವಿವಿಧ ಇಲಾಖೆಗಳ 24 ಮುಖ್ಯ ಅಭಿಯಂತರುಗಳಿಗೆ ಬಡ್ತಿ ನೀಡಲು ಸ್ವತಃ ಮುಖ್ಯಮಂತ್ರಿಗಳೇ ಸಹಿ ಹಾಕಿದ್ದು ಮಂದಿಗೆ ಮಾತ್ರ ಮುಂಬಡ್ತಿ ನೀಡಿ ಉಳಿದ 7 ಮಂದಿಗೆ ಆದೇಶ ಪ್ರತಿ ನೀಡದೆ ಒಂದು ಸಮಾಜವನ್ನು ಗುರಿಯಾಗಿಟ್ಟುಕೊಂಡು ಆ ಸಮಾಜದ ಅಧಿಕಾರಿ ವರ್ಗದವರನ್ನು ಮುಗಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಅಂತ ಪರೋಕ್ಷವಾಗಿ ಆರೋಪಿಸುವ ಮೂಲಕ ಟೀಕಾಪ್ರಹಾರ ಮಾಡಿದರು.

ಡಿಕೆಶಿವಕುಮಾರ್ ಬಿಟ್ಟು ಬೇರೆ ಸಮಾಜದವರು ಹಣ ಮಾಡಿಲ್ಲ:

ಡಿಕೆ ಶಿವಕುಮಾರ್ ಒಬ್ಬನೇನಾ ಹಣ ಮಾಡಿರೋದು..?

ರಾಜ್ಯದಲ್ಲಿ ಡಿಕೆಶಿವಕುಮಾರ್ ಒಬ್ಬರೇನಾ ಹಣ ಮಾಡಿರೋದು..? ಬೇರೆ ಸಮಾಜದವರು ಯಾರು ಹಣ ಮಾಡಿಲ್ವಾ..? ಅವರುಗಳನ್ನ ಯಾಕೆ ತನಿಖೆಗೆ ಒಳಪಡಿಸಿಲ್ಲ..? ಇದು ಒಂದು ಸಮಾಜವನ್ನು ಮುಗಿಸುವ ಯತ್ನ ಅಷ್ಟೇ. ನಂಬರ್ 18 ರಿಂದ 24ರ ಸಮಾಜವನ್ನು ಮುಖ್ಯಮಂತ್ರಿಗಳು ಮುಗಿಸಲು ಹೊರಟಿದ್ದಾರೆ ಎನ್ನುವ ಮೂಲಕ ಸಮಾಜದ ಹೆಸರುಗಳನ್ನ ಪ್ರಸ್ತಾಪಿಸದೆ ನಂಬರ್ ಗಳ ಮೂಲಕವೇ ಆಕ್ರೋಶವನ್ನು ವ್ಯಕ್ತಪಡಿಸಿ ಡಿಕೆ ಶಿವಕುಮಾರ್ ಪರ ಇವತ್ತು ಬ್ಯಾಟಿಂಗ್ ಮಾಡಿದರು.

ನೆರೆ ಸಂತ್ರಸ್ಥರಿಗಿಂತ ಪದವಿ ಹಣ ಮುಖ್ಯವಾಯ್ತು:

ರಾಜ್ಯದಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಪರಿಹಾರವನ್ನು ನೀಡುವ ಕಾರ್ಯವನ್ನು ಮಾಡದೆ, ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವಂತೆ ಅಧಿಕಾರಿಗಳ ವರ್ಗಾವಣೆ, ಮುಂಬಡ್ತಿ ವಿಚಾರದಲ್ಲಿ ಹಣದ ಲೂಟಿ ಮಾಡುತ್ತಿದ್ದಾರೆ. ಮುಂದೆಂದು ಕೂಡ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಗಮನದಲ್ಲಿಟ್ಟುಕೊಂಡು ರಾಜ್ಯದ ಹಣವನ್ನು ಎಷ್ಟು ಲೂಟಿ ಮಾಡಬಹುದು ಎಂಬ ಲೆಕ್ಕಾಚಾರವನ್ನು ಹಾಕಿ ಕೊಳ್ಳೆ ಹೊಡೆದಿದ್ದಾರೆ ಎಂದು ಮುಖ್ಯಮಂತ್ರಿಗಳ ವಿರುದ್ಧ ಗುಡುಗಿದರು.

ಉತ್ತರಾಧಿಕಾರಿಗಾಗಿ ಸಿದ್ದತೆ:

ಬಿಜೆಪಿ ಪಕ್ಷದಲ್ಲಿ 75 ವರ್ಷದ ನಂತರ ಯಾವುದೇ ಅಧಿಕಾರ ನೀಡುವುದಿಲ್ಲ ಅಂತ ಮೋದಿ ಮತ್ತು ಅಮಿತ್ ಶಾ ಆದೇಶ ಹೊರಡಿಸಿದ್ದಾರಲ್ಲಾ.ಹಾಗಾಗಿ ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಇರುವಷ್ಟು ದಿನ ರಾಜ್ಯದ ಯಾವ ಯಾವ ಮೂಲೆಗಳಿಂದ ಹಣದ ಲೂಟಿ ಮಾಡಬೇಕು ಎಲ್ಲವನ್ನು ಮಾಡಿಕೊಂಡು ಮುಂದಿನ ಬಿಜೆಪಿಯ ಉತ್ತರಾಧಿಕಾರಿಯಾಗಿ ವಿಜಯೇಂದ್ರರನ್ನ ರಾಜಕೀಯ ಮುಖ್ಯವಾಹಿನಿಗೆ ತಂದು ಪಟ್ಟಾಭಿಷೇಕ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಅಂತ ವ್ಯಂಗ್ಯವಾಡಿದ್ರು.

ಇನ್ನು ನೆಪಮಾತ್ರಕ್ಕೆ ಸಾವಿರ ಕೋಟಿ ನೆರೆ ಪರಿಹಾರ ಅಂತ ಬಿಡುಗಡೆ ಮಾಡಿದ್ದು ಬೆಳೆ ಪರಿಹಾರ ಹಣವನ್ನು ಇನ್ನು ಬಿಡುಗಡೆ ಮಾಡಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಬೆಳೆ ಪರಿಹಾರವನ್ನು ಕೂಡ ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡಿದರು.

ಬೈಟ್: ಹೆಚ್.ಡಿ .ರೇವಣ್ಣ, ಮಾಜಿ ಸಚಿವ.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.