ಹಾಸನ: ಇಂದು ಜಿಲ್ಲಾ ಉಸ್ತುವಾರಿ ಸಚಿವರು ನಡೆಸುತ್ತಿದ್ದ ಸಭೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಂದ್ರಾ ಎಂದು ಎಲ್ಲರೂ ಒಂದು ಕ್ಷಣ ತಟಸ್ಥರಾಗಿಬಿಟ್ರು. ಬಳಿಕ ಅವರು ಮಾಸ್ಕ್ ತೆಗೆದು ಮೇಲೆ ಗೊತ್ತಾಗಿದ್ದು ಅದು ಬೇರೆ ಯಾರು ಅಲ್ಲ ಶಾಸಕ ಪ್ರೀತಮ್ ಗೌಡ ಅಂತ.
ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವರು ತುರ್ತು ಸಭೆಯನ್ನು ಕರೆದಿದ್ದರು. ಸಭೆಗೆ ಕಾವಿ ತೊಟ್ಟು ಬಂದಂತಹ ವ್ಯಕ್ತಿಯನ್ನು ನೋಡಿದ ಅಧಿಕಾರಿಗಳು ಒಂದು ಕ್ಷಣ ತಟಸ್ಥವಾಗಿ ನಿಂತುಬಿಟ್ಟರು. ಯಾರಪ್ಪ ಇವರು ಹೊಸದಾಗಿ ಬಂದಿದ್ದಾರೆ ಅನ್ನುವಷ್ಟರಲ್ಲಿ ಹಾಕಿದ ಮುಖಗವಸು ತೆಗೆದ ಬಳಿಕ ಇವರು ಹಾಸನದ ಶಾಸಕ ಪ್ರೀತಮ್ ಗೌಡ ಎಂದು ತಿಳಿದು ಅವರನ್ನು ಸ್ವಾಗತಿಸಿದರು.
ವಿಶೇಷವಾಗಿ ಬಂದ ಶಾಸಕ ಪ್ರೀತಮ್ ಗೌಡ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅನುಸರಿಸುವ ಕೇಸರಿಮಯವಾದ ಉಡುಗೆ ತೊಟ್ಟು ಸಭೆಯಲ್ಲಿ ಗಮನ ಸೆಳೆದರು. ಇಷ್ಟೆ ಅಲ್ಲದೇ ಮಫ್ಲರನ್ನೇ ಮಾಸ್ಕ್ ಆಗಿ ಬಳಕೆ ಮಾಡಿ ರಾಷ್ಟ್ರೀಯ ನಾಯಕರು ಅನುಸರಿಸುವ ವೇಷ-ಭೂಷಣಗಳನ್ನು ಶಾಸಕ ಪ್ರೀತಮ್ ಗೌಡ ಅನುಸರಿಸಿದರು.