ETV Bharat / state

ಚುನಾವಣೆ ಪೂರ್ವದಲ್ಲಿ ಸಿಎಂ ಕೊಟ್ಟ ಮಾತು ಉಳಿಸಿಕೊಳ್ಳಬೇಕು: ಕೋಡಿಹಳ್ಳಿ ಚಂದ್ರಶೇಖರ್

author img

By

Published : Feb 11, 2020, 5:04 AM IST

Updated : Feb 11, 2020, 7:08 AM IST

ಕೇಂದ್ರದಲ್ಲಿ ಒಂದು ಸ್ಪಷ್ಟತೆ ಇಲ್ಲದ ಬಜೆಟ್ ಮಂಡಿಸಿದ್ದಾರೆ. ಬಜೆಟ್​ ರೈತರ ಪರವಾಗಿಲ್ಲ, ದೇಶದಲ್ಲಿ ಎಲ್ಲವನ್ನು ಒಂದೊಂದಾಗಿ ಖಾಸಗೀಕರಣ ಮಾಡಲಾಗುತ್ತಿದ್ದು, ಕೂಡಲೇ ನಿಲ್ಲಿಸುವಂತೆ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

president-of-state-farmers-union-kodihalli-chandrashekar

ಹಾಸನ: ಕೇಂದ್ರ ಸರ್ಕಾರ ಸ್ಪಷ್ಟತೆ ಇಲ್ಲದ ಬಜೆಟ್ ಮಂಡಿಸಿದ್ದಾರೆ. ಬಜೆಟ್​ ರೈತರ ಪರವಾಗಿಲ್ಲ, ದೇಶದಲ್ಲಿ ಎಲ್ಲವನ್ನೂ ಒಂದೊಂದಾಗಿ ಖಾಸಗೀಕರಣ ಮಾಡಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ಹೊರಹಾಕಿದ್ದಾರೆ.

ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಕೇಂದ್ರದಲ್ಲಿ ನಿರ್ಮಲಾ ಸೀತಾರಾಮನ್​​ ಅವರು ಸ್ಪಷ್ಟತೆ ಇಲ್ಲದ ಕೋತಾ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ಮಾಡುವ ಪದ್ಧತಿಯನ್ನು ಬದಲಾವಣೆ ಮಾಡಿಕೊಂಡಿದ್ದು, ಈ ಬಗ್ಗೆ ಜನರಿಗೆ ಬಜೆಟ್ ಅಂಶವನ್ನು ಸ್ಪಷ್ಟವಾಗಿ ನೀಡಬೇಕು. ಬಜೆಟ್ ಯಾವ ಯಾವ ಕ್ಷೇತ್ರಗಳಿಗೆ ಎಷ್ಷರ ಮಟ್ಟಿಗೆ ತಲುಪಬೇಕೋ ಅಷ್ಟರ ಮಟ್ಟಿಗೆ ತಲುಪುವಲ್ಲಿ ವಿಫಲವಾಗಿದೆ ಎಂದರು.

ಯಡಿಯೂರಪ್ಪ ಕೊಟ್ಟಿದ್ದ ಮಾತಿಗೆ ತಪ್ಪಲ್ಲ, ಕೊಟ್ಟ ಮಾತಿನಂತೆ ಸಚಿವರಾಗಿ ಮಾಡಿದ್ದಾರೆ ಎಂದೆಲ್ಲ ಹೇಳಲಾಗುತ್ತಿದೆ. ಆದ್ರೆ, ಸಿಎಂ ಯಡಿಯೂರಪ್ಪ ಅವರು ಚುನಾವಣಾ ಪೂರ್ವದಲ್ಲಿ ಪ್ರತಿ ರೈತನಿಗೆ 1 ಲಕ್ಷ ಸಾಲ ಮನ್ನಾ ಮಾಡುತ್ತೇವೆ ಎಂದಿದ್ರು, ಅದನ್ನ ಮರೆಯಬಾರದು. ರೈತರಿಗೆ ಸಂಕಷ್ಟ ಇದ್ದಾಗ ತಾವು ನೆರವಾಗಬೇಕು. ಇಲ್ಲ ಸಲ್ಲದ ಕಾರಣ ನೀಡಿ ರೈತರ ಪಂಪ್ ಸೆಟ್​ಗಳಿಗೆ ನೀಡಿದ್ದ ಪವರ್ ಕಟ್ ಮಾಡುತ್ತಿದ್ದಾರೆ. ಈ ಪ್ರಕ್ರಿಯೆಯನ್ನ ತಕ್ಷಣವೇ ನಿಲ್ಲಿಸಬೇಕು. ಅಂಬಾನಿ ಸಾಲ ಮನ್ನಾ ಮಾಡಲಾಗುತ್ತೆ, ರೈತರ ಕಷ್ಟ ಇವರಿಗೆ ಅರ್ಥವಾಗುವುದಿಲ್ಲವೆ? ಕೂಡಲೇ ಎಲ್ಲ ರೈತರ ಎಲ್ಲ ಬ್ಯಾಂಕ್​​​ಗಳ ಸಾಲ ಮನ್ನಾ ಮಾಡಬೇಕೆಂದು ಒತ್ತಾಯ ಮಾಡಿದರು.

Last Updated : Feb 11, 2020, 7:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.