ETV Bharat / state

ಶಾಸಕ ಪ್ರೀತಮ್ ಗೌಡ ನೇತೃತ್ವದಲ್ಲಿ 25 ಸಾವಿರ ಆಹಾರದ ಕಿಟ್ ವಿತರಣೆಗೆ ಸಿದ್ಧತೆ - Hassan

ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಶಾಸಕ ಪ್ರೀತಮ್ ಜೆ. ಗೌಡ ಅವರ ನೇತೃತ್ವದಲ್ಲಿ ಮೊದಲ ಹಂತದಲ್ಲಿ 37 ಸಾವಿರ ಆಹಾರ ಸಾಮಗ್ರಿಗಳ ಕಿಟ್​ಗಳನ್ನು ವಿತರಿಸಲಾಗಿದೆ. ಈಗ ಎರಡನೇ ಹಂತದಲ್ಲಿ 25 ಸಾವಿರ ಕಿಟ್​ಗಳ ಸಿದ್ಧತೆಯಲ್ಲಿ ಬಿಜೆಪಿ ಕಾರ್ಯಕರ್ತರು ನಿರತರಾಗಿದ್ದಾರೆ.

Food   Kit Distribution
ಶಾಸಕ ಪ್ರೀತಮ್ ಗೌಡ ನೇತೃತ್ವದಲ್ಲಿ 25 ಸಾವಿರ ಆಹಾರ ಸಾಮಗ್ರಿಗಳ ಕಿಟ್ ವಿತರಣೆಗೆ ಸಿದ್ಧತೆ
author img

By

Published : May 18, 2020, 8:14 PM IST

ಹಾಸನ: ಬಿಜೆಪಿಯಿಂದ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ನೇತೃತ್ವದಲ್ಲಿ ಈಗಾಗಲೇ 37 ಸಾವಿರ ಆಹಾರ ಸಾಮಗ್ರಿಗಳ ಕಿಟ್​ಗಳನ್ನು ನೀಡಲಾಗಿದ್ದು, ಮತ್ತೆ 25 ಸಾವಿರ ಕಿಟ್​ಗಳ ವಿತರಣೆ ಮಾಡುವ ಸಿದ್ಧತೆಯಲ್ಲಿ ಬಿಜೆಪಿ ಕಾರ್ಯಕರ್ತರು ನಿರತರಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಬಿಜೆಪಿ ನಗರ ಅಧ್ಯಕ್ಷ ವೇಣುಗೋಪಾಲ್ ಲಾಕ್​​​​​ಡೌನ್ ಆದೇಶ ಜಾರಿಗೆ ಬಂದ ದಿನದಿಂದ ಇಲ್ಲಿವರೆಗೂ ಹಾಸನ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಅವರ ನೇತೃತ್ವದಲ್ಲಿ ಮೊದಲ ಹಂತದಲ್ಲಿ 37 ಸಾವಿರ ಆಹಾರ ಸಾಮಗ್ರಿಗಳ ಕಿಟ್​ಗಳನ್ನು ವಿತರಿಸಲಾಗಿದೆ. ಈಗ ಎರಡನೇ ಹಂತದಲ್ಲಿ ಉಳಿದ ಭಾಗಗಳಾದ ಎಪಿಎಂಸಿಯ ಕೂಲಿ ಕಾರ್ಮಿಕರಿಗೆ, ಹಮಾಲಿಗಳಿಗೆ ಮತ್ತು ಸಮಸ್ಯೆ ಎದುರಿಸುತ್ತಿರುವವರಿಗೆ ರೇಷನ್ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದರು.

ಇನ್ನು 2ನೇ ಹಂತದಲ್ಲಿ 25 ಸಾವಿರಕ್ಕೂ ಹೆಚ್ಚು ರೇಷನ್ ಕಿಟ್​ಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಒಟ್ಟು 55 ಸಾವಿರ ರೇಷನ್ ಕಿಟ್ ನೀಡುವ ಗುರಿ ಹೊಂದಿರುವುದಾಗಿ ಇದೇ ವೇಳೆ, ಬೆಂಬಲಿಗರು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.