ETV Bharat / state

'ರೇವಣ್ಣನವರನ್ನು ಮಾತನಾಡಲು ಬಿಟ್ಟರೆ ಗೊಮ್ಮಟೇಶ್ವರನನ್ನು ನಾನೇ ಕಟ್ಟಿಸಿದ್ದು ಎಂದಾರು..!' - Hassan BJP MLA

ಈ ಚುನಾವಣೆ ಫಲಿತಾಂಶ ಬಂದ ಬಳಿಕ ನಾನು ಸಚಿವನಾಗಿ ಬರುತ್ತೇನೆಯೋ ಅಥವಾ ಶಾಸಕನಾಗಿ ಬಂದು ಮಾತನಾಡುತ್ತೇನೆಯೋ ಎಂಬುದರ ಬಗ್ಗೆ ಗೊತ್ತಾಗಲಿದೆ. ಈಗಲೇ ನಾನು ಅದನ್ನು ಹೇಳುವುದಿಲ್ಲ ಎನ್ನುವ ಮೂಲಕ ತಾವೂ ಒಬ್ಬ ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಾಸಕ ಪ್ರೀತಂ ಗೌಡ ತೋರಿಸಿಕೊಟ್ಟರು.

Preetham Gowda Reaction About Revanna Statement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಶಾಸಕ ಪ್ರೀತಂ ಜಿ. ಗೌಡ
author img

By

Published : Oct 8, 2020, 5:13 PM IST

Updated : Oct 8, 2020, 5:55 PM IST

ಹಾಸನ: ಮಾಜಿ ಸಚಿವ ರೇವಣ್ಣನವರನ್ನು ಮಾತನಾಡುವುದಕ್ಕೆ ಬಿಟ್ಟರೆ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ, ಬೇಲೂರಿನ ಚೆನ್ನಕೇಶವ ಮತ್ತು ಶ್ರವಣಬೆಳಗೊಳದ ಗೊಮ್ಮಟೇಶ್ವರನನ್ನು ನಾನೇ ಕಟ್ಟಿಸಿದ್ದು ಎಂದು ಹೇಳಿ ಬಿಡುತ್ತಾರೆ...

ಹಾಸನ ನಗರಸಭೆಗೆ 25 ಗ್ರಾಮಗಳ ಸೇರ್ಪಡೆ ವಿಚಾರ ವ್ಯಂಗ್ಯವಾಡಿದ್ದಾರೆ ಎನ್ನುವ ಮಾತಿಗೆ ಶಾಸಕ ಪ್ರೀತಂ ಜಿ. ಗೌಡ ಈ ರೀತಿ ಟಾಂಗ್ ಕೊಟ್ಟರು.

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅವರ ಅವಧಿಯಲ್ಲಿ ಸೇರ್ಪಡೆ ಮಾಡುವಂತೆ ಆಗ ಒತ್ತಡ ಹೇರಲಾಗಿತ್ತು. ಆದರೆ, ಅವರ ಸರ್ಕಾರ ಈ ಮನವಿಯನ್ನು ತಿರಸ್ಕರಿತ್ತು. ಈಗ ನಾನು ಅದನ್ನ ಕೈಗೆತ್ತಿಕೊಂಡು ಸರ್ಕಾರದ ಮುಂದೆ ತಂದು ಪಡೆದಿದ್ದೇನೆ. ಒಬ್ಬ ಯುವಕ ಇಂತಹ ಕೆಲಸ ಮಾಡಿದ್ದಾನೆ ಎಂದರೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು, ವ್ಯಂಗ್ಯ ಮಾಡಬಾರದು ಎಂದು ಟೀಕಿಸಿದರು.

2011ರ ಜನಗಣತಿ ಪ್ರಕಾರ ಮಹಾನಗರ ಪಾಲಿಕೆ ಆಗಲು ಸಾಧ್ಯವಿಲ್ಲ. ಆದರೆ, ಅದರ ವರದಿ ಬಂದ ಬಳಿಕ ಜಿಲ್ಲೆಯಲ್ಲಿ ಎಷ್ಟು ಜನಸಂಖ್ಯೆ ಇದೆ ಎಂಬುದು ಮುಂದಿನ ನಿರ್ಧಾರ ಗೊತ್ತಾಗುತ್ತೆ. ಅಭಿವೃದ್ಧಿ ಮಾಡುವುದು ಮಾತ್ರ ನನ್ನ ಕೆಲಸ. ಕಾರಣ ಹಾಸನದ ಜನತೆ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. 25 ಗ್ರಾಮಗಳ ಸೇರ್ಪಡೆಯಿಂದ ನಗರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡಲು ಹೆಚ್ಚು ಅನುಕೂಲವಾಗುತ್ತದೆ ಎಂದರು.

ನನ್ನ ಕೆಲಸದ ಬಗ್ಗೆ ಜನರು ಮಾತನಾಡಬೇಕು, ಯಾರೋ ವಿರೋಧಿಗಳು ನನ್ನ ಬಗ್ಗೆ ನಿಂದನೆ ಮಾಡಿದರೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ವ್ಯಂಗ್ಯದ ಹೇಳಿಕೆಗಳನ್ನು ಕೊಡುವ ನಾಯಕರಿಗೆ ಟಾಂಗ್​ ನೀಡಿದ ಶಾಸಕ ಪ್ರೀತಂ, ಅಮೃತ ಯೋಜನೆ ಕಾಮಗಾರಿ ಡಿಸೆಂಬರ್ ತಿಂಗಳ ಒಳಗೆ ಮುಗಿಯಬೇಕಿತ್ತು. ಕೋವಿಡ್-19 ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ ಎಂದು ಕಾಮಗಾರಿಗಳ ಮಂದಗತಿ ಅಭಿವೃದ್ಧಿ ಬಗ್ಗೆ ಮಾಹಿತಿ ನೀಡಿದರು.

ಹಾಸನ ನಗರಸಭೆಗೆ ಯಾವುದೇ ಮೀಸಲಾತಿ ಬಂದರೂ ಈ ಬಾರಿ ಬಿಜೆಪಿಯ ಸದಸ್ಯರೊಬ್ಬರು ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯಲಿದ್ದಾರೆ, ಇದು ಶತಸಿದ್ಧ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಗರ್ವದಿಂದಲೇ ಹೇಳಿದ ಪ್ರೀತಂ ಗೌಡ, ಶಿರಾ ಮತ್ತು ಆರ್​ಆರ್​ ನಗರ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ, ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಭವಿಷ್ಯ ನುಡಿದರು.

ಈ ಚುನಾವಣೆ ಫಲಿತಾಂಶ ಬಂದ ಬಳಿಕ ನಾನು ಸಚಿವನಾಗಿ ಬರುತ್ತೇನೆಯೋ ಅಥವಾ ಶಾಸಕನಾಗಿ ಬಂದು ಮಾತನಾಡುತ್ತೇನೆಯೋ ಗೊತ್ತಾಗಲಿದೆ. ಈಗಲೇ ನಾನು ಅದನ್ನು ಹೇಳುವುದಿಲ್ಲ ಎನ್ನುವ ಮೂಲಕ ತಾವೂ ಒಬ್ಬ ಸಚಿವ ಸ್ಥಾನದ ಆಕಾಂಕ್ಷಿ ಎಂದು ತೋರಿಸಿಕೊಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಶಾಸಕ ಪ್ರೀತಂ ಜಿ. ಗೌಡ

ಇನ್ನು ನಗರದ ರೈಲ್ವೆ ಮೇಲ್ಸೇತುವೆ ಹಾಗೂ ಒಳ ಸೇತುವೆ ಕಾಮಗಾರಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ತೊಡಕಾಗಿರುವ ಕಾಮಗಾರಿಯನ್ನು ಎಲ್ಲ ಆಯಾಮದಿಂದ ಶೀಘ್ರದಲ್ಲೇ ಬಗೆಹರಿಸುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ, ಬೇಕಾದರೆ ನನ್ನ ಹೇಳಿಕೆಯನ್ನು ದಾಖಲು ಮಾಡಿಕೊಂಡು ಇಟ್ಟುಕೊಳ್ಳಿ ಅಂತ ಗಂಭೀರವಾಗಿ ಮಾತನಾಡಿದರು.

Last Updated : Oct 8, 2020, 5:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.