ಹಾಸನ: ಲೋಕಸಭಾ ಕ್ಷೇತ್ರದ ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೆ ತಂದೆ ಹೆಚ್.ಡಿ.ರೇವಣ್ಣ ಮುಂದಾಳತ್ವ ವಹಿಸಿದ್ದರು.
ಇಂದು ಬೆಳಿಗ್ಗೆಯಿಂದಲೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬ ಟೆಂಪಲ್ ರನ್ ಮಾಡಿದ್ದು, ಇಂದು ಬೆಳಗ್ಗೆ 6ರಿಂದ ಹೊಳೆನರಸೀಪುರದ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿತು. ಬಳಿಕ ತಾತಾ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಕುಲದೇವರಾದ ಹರದನಹಳ್ಳಿ ಈಶ್ವರ ದೇವಾಲಯ ಹಾಗೂ ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಪೂಜೆ ಸಲ್ಲಿಸಿದ ಬಳಿಕ ಹಾಸನಕ್ಕೆ ಆಗಮಿಸಿ ನಗರದ ಹೇಮಾವತಿ ಪ್ರತಿಮೆಯ ಬಳಿಯಿಂದ ಬೃಹತ್ ಮೆರವಣಿಗೆ ಹೊರಟು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಜಿಲ್ಲೆ ಒಳಗೊಂಡಂತೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಡೂರು ತಾಲೂಕಿನಿಂದಲೂ ಕೂಡ ಸಹಸ್ರಾರು ಮಂದಿ ಭಾಗಿಯಾಗಿದ್ದರು.