ETV Bharat / state

ಪರಿಷತ್ ಅಭ್ಯರ್ಥಿಗಳ ಬಗ್ಗೆ ಚರ್ಚೆಯಾಗಿಲ್ಲ: ಸಂಸದ ಪ್ರಜ್ವಲ್ ರೇವಣ್ಣ - ವಿಧಾನ ಪರಿಷತ್ ಸದಸ್ಯ ಚುನಾವಣೆ

ನಮ್ಮ ಕುಟುಂಬದಿಂದ ವಿಧಾನ ಪರಿಷತ್ ಸದಸ್ಯ(Council Election) ಸ್ಥಾನಕ್ಕೆ ನಿಲ್ಲುವ ವಿಚಾರ ಪ್ರಸ್ತಾಪವಾಗಿಲ್ಲ. ಇದು ಕೇವಲ ಊಹಾಪೋಹ ಎಂದು ಸಂಸದ ಪ್ರಜ್ವಲ್ ರೇವಣ್ಣ(MP Prajwal revanna) ಹೇಳಿದರು..

prajwal revanna
ಸಂಸದ ಪ್ರಜ್ವಲ್ ರೇವಣ್ಣ
author img

By

Published : Nov 12, 2021, 3:22 PM IST

Updated : Nov 12, 2021, 4:03 PM IST

ಹಾಸನ : ನಮ್ಮ ಕುಟುಂಬದಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ (Council Election) ನಿಲ್ಲುವ ವಿಚಾರ ಪ್ರಸ್ತಾಪವಾಗಿಲ್ಲ. ಇದು ಕೇವಲ ಊಹಾಪೋಹ ಎಂದು ಸಂಸದ ಪ್ರಜ್ವಲ್ ರೇವಣ್ಣ(MP Prajwal revanna) ಸ್ಪಷ್ಟಪಡಿಸಿದರು.

ಪರಿಷತ್‌ ಟಿಕೆಟ್‌ ಕುರಿತಂತೆ ಸಂಸದ ಪ್ರಜ್ವಲ್ ರೇವಣ್ಣ ಸ್ಪಷ್ಟನೆ ನೀಡಿರುವುದು..

ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ಹಾಗೂ ಮುಖಂಡರು ಕಾರ್ಯಕರ್ತರ ಜೊತೆ ಸಭೆ ನಡೆಸಿ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಯನ್ನು ಅಂತಿಮ ಮಾಡಲಾಗುತ್ತದೆ ಎಂದರು.

ನಮ್ಮ ಕುಟುಂಬದಿಂದಲೇ ಕಣಕ್ಕಿಳಿಯುವ ಬಗ್ಗೆ ಎಲ್ಲಿಯೂ ಚರ್ಚೆಯಾಗಿಲ್ಲ. ಇದು ಕೇವಲ ಊಹಾಪೋಹ ಎಂದರು. ಈ ಬಾರಿ ಅಹಿಂದ ವರ್ಗಕ್ಕೆ ಪರಿಷತ್ ಚುನಾವಣೆ ಟಿಕೆಟ್ ನೀಡುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಸಂಬಂಧ ಈವರೆಗೂ ಯಾವುದೇ ಸಭೆಗಳಾಗಲಿ, ಚರ್ಚೆಗಳಾಗಲಿ ನಡೆದಿಲ್ಲ. ಅಭ್ಯರ್ಥಿ ಕಣಕ್ಕಿಳಿಸುವ ವಿಚಾರ ಪಕ್ಷದ ವರಿಷ್ಠರಿಗೆ, ಮುಖಂಡರಿಗೆ ಬಿಟ್ಟಿದ್ದು ಎಂದರು.

Last Updated : Nov 12, 2021, 4:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.