ETV Bharat / state

ಆಕ್ಸಿಜನ್​ ಪ್ಲಾಂಟ್​​ ನಿರ್ಮಾಣದಲ್ಲಿ ಭ್ರಷ್ಟಾಚಾರ: ಪ್ರಜ್ವಲ್ ರೇವಣ್ಣ ಆರೋಪ

author img

By

Published : May 14, 2021, 4:11 AM IST

ಆಮ್ಲಜನಕ ಯಂತ್ರಗಳನ್ನು ಜೋಡಿಸಲು ಸುಮಾರು10x10 ಅಡಿ ಕಟ್ಟಡ ನಿರ್ಮಾಣ ಮಾಡಲು ಪ್ರತಿ ಪ್ಲಾಂಟ್​ಗೆ 35 ಲಕ್ಷ ರೂ. ನಿಗದಿ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಆಮ್ಲಜನಕ ಯಂತ್ರಗಳನ್ನು ಕಂಟೈನರ್ ಒಳಗೆ ಇಡಬಹುದಿತ್ತು. ಇದು ಕೇವಲ 2 ಲಕ್ಷ ರೂ.ಯಲ್ಲಿ ಮುಗಿಯುತ್ತಿತ್ತು. ಆದರೆ, ಇದಕ್ಕೆ ಹೆಚ್ಚುವರಿಯಾಗಿ ಸುಮಾರು 35 ಲಕ್ಷ ರೂ. ಪ್ರತಿ ಪ್ಲಾಂಟ್​ಗೆ ವಿನಿಯೋಜಿಸಲಾಗುತ್ತಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಆರೋಪಿಸಿದರು.

ಸಂಸದ ಪ್ರಜ್ವಲ್ ರೇವಣ್ಣ
ಸಂಸದ ಪ್ರಜ್ವಲ್ ರೇವಣ್ಣ

ಸಕಲೇಶಪುರ: ಆಮ್ಲಜನಕ ಪ್ಲಾಂಟ್​ ನಿರ್ಮಾಣದ ಹೆಸರಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಣ ಹೊಡೆಯಲು ಮುಂದಾಗಿದ್ದು, ಇದಕ್ಕೆ ಸಂಬಂಧಿತ ದಾಖಲೆಗಳು ನನ್ನ ಹತ್ತಿರ ಇವೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಆರೋಪಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಕೋವಿಡ್ ಟಾಸ್ಕ್ ಪೋರ್ಸ್ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಆಕ್ಸಿಜನ್ ಪ್ಲಾಂಟ್​​ ನಿರ್ಮಾಣದ ಬಹುತೇಕ ಕಂಪನಿಗಳು ಜರ್ಮನಿಯಲ್ಲಿವೆ. ಅಗತ್ಯವಾದ ಯಂತ್ರೋಪಕರಣಗಳನ್ನು ತರಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ನಂತರದ ದಿನಗಳಲ್ಲಿ ಇದನ್ನು ಕೈಬಿಡಲಾಗಿದೆ. ದೇಶೀಯವಾಗಿ ಆಮ್ಲಜನಕ ಪ್ಲಾಂಟ್​ನ ಎರಡು ಕಂಪನಿಗಳಿಗೆ ಆಮ್ಲಜನಕ ಪೂರೈಕೆ ಮಾಡುವ ಯಂತ್ರಗಳಿಗೆ ಇವರೇ ಒಂದು ದರ ನಿಗದಿ ಮಾಡಿದ್ದಾರೆ ಎಂದರು.

ಭ್ರಷ್ಟಾಚಾರದ ಆರೋಪ ಮಾಡಿದ ಪ್ರಜ್ವಲ್ ರೇವಣ್ಣ

ಆಮ್ಲಜನಕ ಯಂತ್ರಗಳನ್ನು ಜೋಡಿಸಲು ಸುಮಾರು10x10 ಅಡಿ ಕಟ್ಟಡ ನಿರ್ಮಾಣ ಮಾಡಲು ಪ್ರತಿ ಪ್ಲಾಂಟ್​ಗೆ 35 ಲಕ್ಷ ರೂ. ನಿಗದಿ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಆಮ್ಲಜನಕ ಯಂತ್ರಗಳನ್ನು ಕಂಟೈನರ್ ಒಳಗೆ ಇಡಬಹುದಿತ್ತು. ಇದು ಕೇವಲ 2 ಲಕ್ಷ ರೂ.ಯಲ್ಲಿ ಮುಗಿಯುತ್ತಿತ್ತು. ಆದರೆ, ಇದಕ್ಕೆ ಹೆಚ್ಚುವರಿಯಾಗಿ ಸುಮಾರು 35 ಲಕ್ಷ ರೂ. ಪ್ರತಿ ಪ್ಲಾಂಟ್​ಗೆ ವಿನಿಯೋಜಿಸಲಾಗುತ್ತಿದೆ ಎಂದು ದೂರಿದರು.

ಈ ಕಾಮಗಾರಿಯನ್ನು ಲ್ಯಾಂಡ್ ಆರ್ಮಿಗೆ ಕೊಡಲು ಯೋಜಿಸಲಾಗಿತ್ತು. 30 ಜಿಲ್ಲೆಗಳಿಗೆ ತಲಾ 2 ಪ್ಲಾಂಟ್ ನೀಡಲು ಮುಂದಾದ ತಕ್ಷಣ, ಆರೋಗ್ಯ ಇಲಾಖೆಯಿಂದ ಓರ್ವನಿಂದ ಮಾತ್ರವೇ ಟೆಂಡರ್ ಸ್ವೀಕರಿಸಿ ಕಾಮಗಾರಿ ನೀಡಲಾಗಿದೆ. 2 ದಿನಗಳಲ್ಲಿ ಮುಗಿಯುವ ಕೆಲಸಕ್ಕೆ ಹೆಚ್ಚು ದಿನಗಳು ಬೇಕಾಗುವಂತೆ ಮಾಡಿದ್ದಾರೆ. ಇದರಲ್ಲಿ ನೇರವಾಗಿ ಭ್ರಷ್ಟಚಾರ ಕಾಣುತ್ತಿದೆ ಎಂದು ಆಪಾದಿಸಿದರು.

ಈ ಸಂಬಂಧ ಮುಖ್ಯಮಂತ್ರಿಗಳು ಅಥವಾ ಆರೋಗ್ಯ ಸಚಿವರು ಕೇಳಿದಲ್ಲಿ ನಾನು ದಾಖಲಾತಿಗಳನ್ನು ಬಿಡುಗಡೆ ಮಾಡುತ್ತೇನೆ. ಕಷ್ಟದ ಕಾಲದಲ್ಲಿ ಜನರ ದುಡ್ಡನ್ನು ಅನಾವಶ್ಯಕವಾಗಿ ಪೋಲು ಮಾಡುತ್ತಿರುವುದು ಸರಿಯಲ್ಲ. ಕೊರೊನಾದಂತಹ ಸಂಕಷ್ಟದಲ್ಲೂ ಹಣ ಲೂಟಿ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.