ETV Bharat / state

ಪ್ರಜಾ ವಿರೋಧಿ ಕಾಯ್ದೆ ತಂದ ಅರಸನ ಸಿಂಹಾಸನಕ್ಕೆ ಕಂಟಕ ಎಂದಿದ್ದೆ - ಕೋಡಿಮಠದ ಸ್ವಾಮೀಜಿ - Kodimath Shri hassan news

ಅರಸ ಪ್ರಜಾ ವಿರೋಧಿ ಕಾಯ್ದೆ ತರುತ್ತಾನೆಂದು ಪ್ರಜೆ ವಿರೋಧ ಮಾಡಿ ಅರಸನ ಸಿಂಹಾಸನಕ್ಕೆ ತೊಂದರೆ ಕೊಡುತ್ತಾನೆ ಎಂದು ಹಿಂದೆಯೇ ಹೇಳಿದ್ದೆ. ಅದರಂತೆ ರೈತ ವಿರೋಧಿ ಕಾಯ್ದೆ ಜಾರಿ ಮಾಡಲು ಆಗುತ್ತಲೇ ಇಲ್ಲ ಎಂದು ತಮ್ಮ ಭವಿಷ್ಯವಾಣಿಯನ್ನು ಸಮರ್ಥನೆ ಮಾಡಿಕೊಂಡರು..

ಕೋಡಿಮಠದ ಶ್ರೀಗಳು ಭವಿಷ್ಯ
ಕೋಡಿಮಠದ ಶ್ರೀಗಳು ಭವಿಷ್ಯ
author img

By

Published : Dec 28, 2020, 1:20 PM IST

Updated : Dec 28, 2020, 1:47 PM IST

ಹಾಸನ : ರಾಜ್ಯವಷ್ಟೇ ಅಲ್ಲ, ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದ್ದಾರೆ.

ಶ್ರೀಕ್ಷೇತ್ರ ಕೋಡಿಮಠದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರಾಜಕೀಯ ಧ್ರುವೀಕರಣದ ಜೊತೆಗೆ ಜಾಗತಿಕ ಮಟ್ಟದಲ್ಲಿಯೂ ಕೂಡ ಬದಲಾವಣೆಯಾಗುವ ಸಾಧ್ಯತೆ ಇದೆ. ಇದಕ್ಕೆಲ್ಲ ಕಾರಣ ಈಗ ಬಂದಿರುವ ಗ್ರಹಣಗಳ ಸಂಕೇತವೇ ಸಾಕ್ಷಿಯಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಭವಿಷ್ಯ ಗೋಚರ ಆಗಿರುವ ಪ್ರಕಾರ, ನನ್ನ ಕಣ್ಣ ಮುಂದೆ ನೀರು ಕಾಣುತ್ತಿದೆ. ಅಂದರೆ ಅಕಾಲಿಕ ಮಳೆ ಅನಾಹುತಗಳು ಆಗುವ ಸಾಧ್ಯತೆ ಇದೆ.

ಕೋಡಿಮಠದ ಸ್ವಾಮೀಜಿ ಭವಿಷ್ಯ

ಯಾವಾಗ ಬೇಕಾದರೂ ಮಳೆ ಆಗುವ ಸಂಭವವಿದೆ. ಕೊರೊನಾ ರೂಪಾಂತರದ ಬಗ್ಗೆ ನಾನು ಎರಡು ತಿಂಗಳ ಹಿಂದೆಯೇ ಹೇಳಿದ್ದೆ. ಕೊರೊನಾ ಎಂಬ ಹೆಮ್ಮಾರಿ ಸಂಪೂರ್ಣವಾಗಿ ಹೋಗಲು ಇನ್ನು ಹತ್ತು ವರ್ಷ ಬೇಕಾಗುತ್ತದೆ ಎಂದು ಭವಿಷ್ಯ ನುಡಿದ್ದಾರೆ.

ಭೂಮಿ ನಿಸ್ಸಾರಗೊಂಡಿದೆ ಅಂದರೆ ಅದರ ಸತ್ವವನ್ನು ಕಳೆದುಕೊಳ್ಳುತ್ತಿದೆ. ಈಗಿನ ಔಷಧಿಗಳು ಮನುಷ್ಯನ ಆರೋಗ್ಯಕ್ಕೆ ಮಾರಕವಾಗಲಿವೆ. ಪ್ರತಿ ಕೃಷಿ ಚಟುವಟಿಕೆಗಳಿಗೂ ರಾಸಾಯನಿಕ ಔಷಧಿಗಳನ್ನು ಹಾಕುತ್ತಿರುವುದು ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಮತ್ತೊಂದು ಕಾರಣ. ಗೋವುಗಳ ಮಲಮೂತ್ರದಿಂದ ಬೆಳೆದ ಆಹಾರ ರಾಸಾಯನಿಕ ಮುಕ್ತವಾಗಿದ್ದು, ಅದು ಮಾತ್ರ ಮನುಷ್ಯನನ್ನು ಕಾಪಾಡಬಲ್ಲದು. ಇಲ್ಲದಿದ್ದರೆ ಮತ್ತೊಂದು ಮಾರಣಾಂತಿಕ ಕಾಯಿಲೆ ಬಂದರೂ ಬರಬಹುದು ಎಂದು ಆಂತಕವಾಗಿಯೇ ನುಡಿದರು.

ಓದಿ:ಬೆಳಗಾವಿ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಅಳವಡಿಕೆ: ಕನ್ನಡ ಪರ ಹೋರಾಟಗಾರರು-ಪೊಲೀಸರ ಮಧ್ಯೆ ವಾಗ್ವಾದ

ಅರಸ ಪ್ರಜಾ ವಿರೋಧಿ ಕಾಯ್ದೆ ತರುತ್ತಾನೆಂದು ಪ್ರಜೆ ವಿರೋಧ ಮಾಡಿ ಅರಸನ ಸಿಂಹಾಸನಕ್ಕೆ ತೊಂದರೆ ಕೊಡುತ್ತಾನೆ ಎಂದು ಹಿಂದೆಯೇ ಹೇಳಿದ್ದೆ. ಅದರಂತೆ ರೈತ ವಿರೋಧಿ ಕಾಯ್ದೆ ಜಾರಿ ಮಾಡಲು ಆಗುತ್ತಲೇ ಇಲ್ಲ ಎಂದು ತಮ್ಮ ಭವಿಷ್ಯವಾಣಿಯನ್ನು ಸಮರ್ಥನೆ ಮಾಡಿಕೊಂಡರು.

Last Updated : Dec 28, 2020, 1:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.