ಹಾಸನ:(ಅರಕಲಗೂಡು): ತಾಲೂಕಿನ ಕೊಣನೂರು ಸಮೀಪದ ಹೊಡೇನೂರು ಗ್ರಾಮದಲ್ಲಿ ಬೆಳೆಯಲಾಗಿದ್ದ 15 ಲಕ್ಷ ರೂ. ಮೌಲ್ಯದ 70 ಕೆಜಿ ತೂಕದ ಗಾಂಜಾ ಗಿಡಗಳನ್ನು ಅಬಕಾರಿ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮೇಶ್, ಪ್ರಕಾಶ್ ಮತ್ತು ದೇವರಾಜ್ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿ ಸೋಮೇಶ್ ಜಮೀನಿನಲ್ಲಿ ಶುಂಠಿ ಮತ್ತು ಕೆಸುವಿನ ನಡುವೆ ಬೆಳೆದಿದ್ದ 60 ಕೆಜಿ, ಜೋಳದ ಗಿಡಗಳ ಮಧ್ಯೆ ಪ್ರಕಾಶ್ ಬೆಳೆದಿದ್ದ 10 ಕೆಜಿ ಹಾಗೂ ದೇವರಾಜ್ ಮನೆಯಲ್ಲಿ ಸಂಗ್ರಹಿಸಿದ್ದ 550 ಗ್ರಾಂ ಸೇರಿ 70 ಕೆಜಿಯಷ್ಟು ಗಾಂಜಾ ಗಿಡಗಳನ್ನು ಜಪ್ತಿ ಮಾಡಲಾಗಿದೆ.
ಈ ಗಾಂಜಾವನ್ನು ಕೇರಳ ಮತ್ತು ಮೈಸೂರಿಗೆ ರವಾನಿಸಲು ಸಿದ್ಧತೆ ನಡೆಸಿದ್ದ ವೇಳೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.