ETV Bharat / state

ಹಾಸನದಲ್ಲಿ ಹೆಚ್ಚಾದ ಪುಡಿರೌಡಿಗಳ ಆರ್ಭಟ : ಸ್ಥಳದಲ್ಲೇ ಹೆಡೆಮುರಿ ಕಟ್ಟಿದ ಸರ್ಕಲ್​ ಇನ್ಸ್​ಪೆಕ್ಟರ್​

author img

By

Published : Aug 30, 2021, 7:47 PM IST

ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪುಡಿ ರೌಡಿಗಳನ್ನು ಹಿಡಿಯಲು ಮುಂದಾಗಿದ್ದಾರೆ. ಇದರಲ್ಲಿ ಮೊದಲ ಆರೋಪಿಯಾಗಿರುವ ನಿತಿನ್ ಎಂಬುವನನ್ನು ಹಿಡಿಯಲು ವೃತ್ತನಿರೀಕ್ಷಕ ಕೃಷ್ಣಂರಾಜು ಮುಂದಾದಾಗ ಅವರ ಕೊರಳ ಪಟ್ಟಿಗೆ ಕೈಹಾಕಿದ್ದಾನೆ. ಇದರಿಂದ ಸಿಟ್ಟಾದ ಪೊಲೀಸ್ ನಿರೀಕ್ಷಕ, ಆತನಿಗೆ ಸ್ಥಳದಲ್ಲಿಯೇ ನಾಲ್ಕು ಗೂಸಾ ಕೊಟ್ಟು ಠಾಣೆಗೆ ಕರೆದೊಯ್ದಿದ್ದಾರೆ..

police beat rowdies in hassan
ಪುಡಿರೌಡಿಗಳ ಹೆಡೆಮುರಿ ಕಟ್ಟಿದ ಸರ್ಕಲ್​ ಇನ್ಸ್​ಪೆಕ್ಟರ್​

ಹಾಸನ : ಜಿಲ್ಲೆಯಲ್ಲಿ ಇತ್ತೀಚಿಗೆ ಪುಡಿರೌಡಿಗಳ ಅಟ್ಟಹಾಸ ಹೆಚ್ಚುತ್ತಿದೆ. ನಗರದ 80 ಅಡಿ ರಸ್ತೆಯ ಪ್ರಕರಣ ವರದಿಯಾದ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನಗರದ 80 ಅಡಿ ರಸ್ತೆಯ ಸಮೀಪ ಮಚ್ಚು ಹಿಡಿದು ಪುಂಡಾಟ ನಡೆದು ಎರಡು ದಿನಗಳಾಗಿತ್ತು.

ಅದಕ್ಕೂ ಮುನ್ನ ಪೊಲೀಸ್ ಠಾಣೆಯ ಅನತಿ ದೂರದಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಮುಂಭಾಗ ನಾಲ್ವರು ಪುಂಡರು ಕುಡಿದ ಅಮಲಿನಲ್ಲಿ ಸುಖಾಸುಮ್ಮನೆ ಗಲಾಟೆ ಮಾಡಿಕೊಂಡಿರುವ ಘಟನೆಯೊಂದು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪುಡಿರೌಡಿಗಳ ಹೆಡೆಮುರಿ ಕಟ್ಟಿದ ಸರ್ಕಲ್​ ಇನ್ಸ್​ಪೆಕ್ಟರ್..​

ಹಾಸನ ನಗರದ ಕುವೆಂಪು ಬಡಾವಣೆಯ ಮಾತೃಶ್ರೀ ಕಲ್ಯಾಣ ಮಂಟಪದ ಸಮೀಪವಿರುವ ಜೆಕೆ ಬಾರ್ ಅಂಡ್ ರೆಸ್ಟೋರೆಂಟ್ ಸಮೀಪ ಕೆಲ ಪುಂಡರು ಮಾತಿನ ಮೂಲಕ ಕಾಲಹರಣ ಮಾಡುತ್ತಿದ್ದರು. ಅಲ್ಲಿಗೆ ಬಂದ ಕೆಲವು ಮಂದಿ ಪುಂಡರು ಆತನೊಂದಿಗೆ ಮಾತಿನ ಚಕಮಕಿ ನಡೆಸಿ ಬಳಿಕ ಹಿಗ್ಗಾಮುಗ್ಗಾ ಥಳಿಸುತ್ತಿದ್ದರು.

ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪುಡಿ ರೌಡಿಗಳನ್ನು ಹಿಡಿಯಲು ಮುಂದಾಗಿದ್ದಾರೆ. ಇದರಲ್ಲಿ ಮೊದಲ ಆರೋಪಿಯಾಗಿರುವ ನಿತಿನ್ ಎಂಬುವನನ್ನು ಹಿಡಿಯಲು ವೃತ್ತನಿರೀಕ್ಷಕ ಕೃಷ್ಣಂರಾಜು ಮುಂದಾದಾಗ ಅವರ ಕೊರಳ ಪಟ್ಟಿಗೆ ಕೈಹಾಕಿದ್ದಾನೆ. ಇದರಿಂದ ಸಿಟ್ಟಾದ ಪೊಲೀಸ್ ನಿರೀಕ್ಷಕ, ಆತನಿಗೆ ಸ್ಥಳದಲ್ಲಿಯೇ ನಾಲ್ಕು ಗೂಸಾ ಕೊಟ್ಟು ಠಾಣೆಗೆ ಕರೆದೊಯ್ದಿದ್ದಾರೆ.

ಈ ಪ್ರಕರಣ ಆಗಸ್ಟ್ 20ರಂದು ನಡೆದಿತ್ತು. ಹಲ್ಲೆಗೊಳಗಾದ ವ್ಯಕ್ತಿ ಚಿಕಿತ್ಸೆ ಪಡೆದ ಬಳಿಕ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾನೆ. ದೂರಿನನ್ವಯ ಅಂಗಡಿಯ ಮುಂಭಾಗದಲ್ಲಿದ್ದ ಸಿಸಿಟಿವಿ ಪರಿಶೀಲನೆ ನಡೆಸಿ, ಪುಂಡಾಟಿಕೆ ನಡೆಸಿದ ಆಡುವಳ್ಳಿಯ ನಿತಿನ್, ಚೇತನ್ ಎಂಬುವರನ್ನು ಬಂಧಿಸಲಾಗಿದೆ. ಸಚಿನ್ ಹಾಗೂ ಮಧು ಎಂಬ ಇನ್ನಿಬ್ಬರು ಪುಡಿರೌಡಿಗಳ ವಿರುದ್ಧ ಈಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಇನ್ಸ್​​ಪೆಕ್ಟರ್ ಪುತ್ರನ ಸೈಕಲ್ ಕಳ್ಳತನ​ : ಕೇಸ್​ ಬೆನ್ನತ್ತಿ ಹೋದ ಪೊಲೀಸರು ಭೇದಿಸಿದ್ದು 9 ಪ್ರಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.