ETV Bharat / state

ಅರಸೀಕೆರೆ ಬಳಿ ಒಂದು ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿದ್ದ ಆರೋಪಿಗಳು ಅಂದರ್​ - ಚಿನ್ನಾಭರಣ ಕಳವು ಪ್ರಕರಣ

ಅರಸೀಕೆರೆ ಬಳಿ ಪ್ರಯಾಣಿಕನೋರ್ವರನ್ನು ಹೆದರಿಸಿ ಅವರ ಬಳಿಯಿದ್ದ ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಅರಸೀಕೆರೆ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Police arrested thieves at Arsikere
author img

By

Published : Sep 8, 2019, 9:53 AM IST

ಹಾಸನ: ಅರಸೀಕೆರೆ ಬಳಿ ಪ್ರಯಾಣಿಕನೋರ್ವನನ್ನು ಹೆದರಿಸಿ ಅವನ ಬಳಿಯಿದ್ದ ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಅರಸೀಕೆರೆ ನಗರ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಅರುಣ್ ಕುಮಾರ್, ಕಿರಣ್‌ಕುಮಾರ್, ಹಾಗೂ ದರ್ಶನ್ ಬಂಧಿತ ಆರೋಪಿಗಳು. ಈ ಮೂವರು ಅರಸೀಕೆರೆಯ ಗಂಗಾನಗರ ಬಡಾವಣೆ ನಿವಾಸಿಗಳಾಗಿದ್ದಾರೆ.

ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್‌ನಿವಾಸ್ ಸೆಪಟ್ ಮಾಧ್ಯಮಗೋಷ್ಟಿ

ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್‌ನಿವಾಸ್ ಸೆಪಟ್ ಅವರು, ಪ್ರಕರಣ ಕುರಿತು ಮಾಹಿತಿ ನೀಡಿದ್ರು. ಯಾವುದೋ ವಿಳಾಸ ಕೇಳುವ ನೆಪದಲ್ಲಿ ಅರಸೀಕೆರೆನಲ್ಲಿ ಕೆಲ ಅಪರಿಚಿತರು ಮಹೇಶ್‌ನನ್ನು ಪರಿಚಯ ಮಾಡಿಕೊಂಡು ರೈಲ್ವೆ ನಿಲ್ದಾಣದಿಂದ ಹೊರವಲಯಕ್ಕೆ ಕರೆದೊಯ್ದಿದ್ದರು. ಬಳಿಕ ಆತನಿಗೆ ಲಾಂಗ್​, ಮಚ್ಚು ಮಾರಾಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಹಣ, ಮೊಬೈಲ್, ಚಿನ್ನಾಭಾರಣ ಸೇರಿದಂತೆ ಸುಮಾರು ಒಂದೂವರೆ ಲಕ್ಷದ ಮೌಲ್ಯ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.

ಈ ಸಂಬಂಧ ಅರಸೀಕೆರೆ ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಪ್ರಕರಣದ ಬೆನ್ನತ್ತಿದ್ದ ನಗರ ಠಾಣೆ ನಿರೀಕ್ಷಕ ರಂಗಸ್ವಾಮಿ ಮತ್ತು ತಂಡ ಒಂದು ವಾರದೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಕಳ್ಳತನವಾಗಿದ್ದ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಎಸ್​ಪಿ ಮಾಹಿತಿ ನೀಡಿದ್ರು.

Intro:ಹಾಸನ : ಅರಸೀಕೆರೆ ಮಾರ್ಗವಾಗಿ ತೆರಳುವ ಪ್ರಯಾಣಿಕನೊಬ್ಬನನ್ನು ಯಾಮಾರಿಸಿ ಹೆದರಿಸಿ ಬೆದರಿಸಿ ಹಣ ಮತ್ತು ಚಿನ್ನಾಭರಣ ದೋಚಿದ ಆರೋಪಿಗಳನ್ನು ಕೇವಲ ಒಂದೆ ವಾರದಲ್ಲಿ ಬಂಧಿಸುವಲ್ಲಿ ಅರಸೀಕೆರೆ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
Body:ಯಾವುದೋ ವಿಳಾಸ ಕೇಳುವ ನೆಪಮಾಡಿಕೊಂಡು ಅರಸೀಕೆರೆನಲ್ಲಿ ಕೆಲ ಅಪರಿಚಿತರು ಮಹೇಶ್‌ನನ್ನು ಪರಿಚಯ ಮಾಡಿಕೊಂಡು ರೈಲ್ವೆ ನಿಲ್ದಾಣದಿಂದ ಹೊರವಲಯಕ್ಕೆ ಕರೆದೊಯ್ದು ಆತನನ್ನು ಲಾಂಗು ಮಚ್ಚು ಮಾರಾಕಾಸ್ರ್ತಗಳನ್ನು ತೋರಿಸಿ ಬೆದರಿಕ್ಕೆ ಒಡ್ಡಿ ಆತನ ಹತ್ತಿರ ವಿದ್ದ ಹಣ, ಮೊಬೈಲ್ ಚಿನ್ನಾಭಾರಣ ಸೇರಿಂದಂತೆ ಸುಮಾರು ಒಂದೂವರೆ ಲಕ್ಷದ ಮೌಲ್ಯz ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು, ಈ ಸಂಬಂಧ ಅರಸೀಕೆರೆ ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪ್ರಕರಣದ ಬೆನ್ನು ಹತ್ತಿದ ನಗರ ಠಾಣೆ ನಿರೀಕ್ಷಕ ರಂಗಸ್ವಾಮಿ ಮತ್ತು ತಂಡ ಕೇವಲ ಒಂದು ವಾರದೊಳಗೆ ಆರೋಪಿಗಳನ್ನು ಬಂದಿಸಿದ್ದು ಆರೋಪಿಗಳಿಂದ ಕಳವಾದ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಾಕಾಸ್ತ್ರಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿ ಕಂಬಿ ಏಣಿಸುವಂತೆ ಮಾಡಿದ್ದಾರೆ. ಪ್ರಕರಣದಲ್ಲಿ ಆರೋಪಿಗಳು ಅರುಣ್ ಕುಮಾರ್, ಕಿರಣ್‌ಕುಮಾರ್, ಹಾಗೂ ದರ್ಶನ್ ಎಂಬುವರಾಗಿದ್ದು ಈ ಮೂವರು ಕೂಡ ಸ್ಥಳೀಯರೇ ಆಗಿದ್ದು ಅರಸೀಕೆರೆಯ ಗಂಗಾನಗರ ಬಡಾವಣೆ ವಾಸಿಗಳು ಎಂದು ತಿಳಿದುಬಂದಿರುತ್ತದೆ ಎಂದು ಹಾಸನ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರು ರಾಮ್‌ನಿವಾಸ್ ಸೆಪಟ್ ತಿಳಿಸಿದ್ರು.
ಬೈಟ್-1: ರಾಮ್ ನಿವಾಸ್ ಸೆಪಟ್, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ. ಹಾಸನ.
Conclusion:ಸಿಬ್ಬಂದಿಗಳಾದ ರಘು, ಮಂಜೇಗೌಡ, ಗಿರೀಶ್, ಸಿದ್ದೇಶ್, ಮತ್ತಿತರರು ಕಾರ್ಯಾಚರಣೆಯಲ್ಲಿದ್ದರು, ಪತ್ರಿಕಾಗೋಷಿಯಲ್ಲಿ ಅರಸೀಕೆರೆ ಉಪವಿಭಾಗ ಡಿಎಸ್ಪಿ ನಾಗೇಶ್, ನಿರೀಕ್ಷಕ ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.