ETV Bharat / state

2 ದಿನದ ಅಂತರದಲ್ಲಿ ಕೊರೊನಾಗೆ ತಂದೆ - ತಾಯಿ ಬಲಿ: ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದ ಸೋಂಕಿತ ಪುತ್ರ - Funeral of the infected

ತಂದೆ ಶುಕ್ರವಾರ ಕೊರೊನಾದಿಂದ ಮೃತಪಟ್ಟರೆ, ತಾಯಿ ಶನಿವಾರ ಕೊನೆಯುಸಿರೆಳೆದಿದ್ದಾರೆ. ಮೊದಲು ತಾಯಿಗೆ ಕೊರೊನಾ ದೃಢವಾದ ಹಿನ್ನೆಲೆ ತಂದೆ - ಮಗ ಇಬ್ಬರು ಪರೀಕ್ಷೆಗೆ ಒಳಗಾಗಿದ್ದರು. ಪರೀಕ್ಷೆಯಲ್ಲಿ ಇಬ್ಬರಿಗೂ ಪಾಸಿಟಿವ್ ಬಂದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Parents died from corona within 2 days:
ಎರಡು ದಿನದ ಅಂತರದಲ್ಲಿ ಕೊರೊನಾಗೆ ತಂದೆ-ತಾಯಿ ಬಲಿ
author img

By

Published : Sep 28, 2020, 6:31 PM IST

ಹಾಸನ: ಕೊರೊನಾದಿಂದ ಮೃತಪಟ್ಟ ತಂದೆ - ತಾಯಿಯ ಅಂತ್ಯಕ್ರಿಯೆಯಲ್ಲಿ ಸೋಂಕಿತ ಪುತ್ರ ದುಃಖದ ನಡುವೆಯೂ ಭಾಗಿಯಾಗಿದ್ದ ಹೃದಯವಿದ್ರಾವಕ ಸನ್ನಿವೇಶ ಹಾಸನದ ಬೀರನಹಳ್ಳಿಯಲ್ಲಿ ಕಂಡು ಬಂದಿದೆ.

ಕೇವಲ ಎರಡು ದಿನದ ಅಂತರದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಈತ ಪಿಪಿಇ ಕಿಟ್ ಧರಿಸಿ ಆ್ಯಂಬುಲೆನ್ಸ್​​ನಲ್ಲಿ ಆಗಮಿಸಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಬೇಕಾದ ಪರಿಸ್ಥಿತಿ ಬಂದೊದಗಿತ್ತು.

ಈತನ ತಂದೆ ಶುಕ್ರವಾರ ಕೊರೊನಾದಿಂದ ಮೃತಪಟ್ಟರೆ ತಾಯಿ ಶನಿವಾರ ಕೊನೆಯುಸಿರೆಳೆದಿದ್ದಾರೆ. ಮೊದಲು ತಾಯಿಗೆ ಕೊರೊನಾ ದೃಢವಾದ ಹಿನ್ನೆಲೆ ತಂದೆ - ಮಗ ಇಬ್ಬರೂ ಪರೀಕ್ಷೆಗೆ ಒಳಗಾಗಿದ್ದರು. ಪರೀಕ್ಷೆಯಲ್ಲಿ ಇಬ್ಬರಿಗೂ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ತಂದೆ ಹಾಗೂ ತಾಯಿ ಮೃತಪಟ್ಟು ಪುತ್ರ ಅನಾಥನಾಗಿದ್ದಾನೆ. ಸದ್ಯ ಪುತ್ರ ಕೋವಿಡ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.