ETV Bharat / state

ಸಾಲ ಕೊಡದ ಮಾಲೀಕನ ಬರ್ಬರ ಹತ್ಯೆ ಆರೋಪಿ ಅಂದರ್​! - murder of the owner

ಹಾಸನದ ಅರಸೀಕೆರೆ ತಾಲೂಕಿನ ಜಾವಗಲ್​ನಲ್ಲಿ ಮಾಲೀಕ ಎರಡು ಸಾವಿರ ರೂಪಾಯಿ ಸಾಲ ನೀಡಲಿಲ್ಲವೆಂದು ಟ್ರ್ಯಾಕ್ಟರ್ ಚಾಲಕ ಹಾರೆಯಿಂದ ಮಾಲೀಕನನ್ನು ಕೊಲೆ ಮಾಡಿದ್ದಾನೆ.

owner-murdered-by-his-tractor-driver
owner-murdered-by-his-tractor-driver
author img

By

Published : Jan 13, 2020, 4:09 PM IST

Updated : Jan 13, 2020, 5:02 PM IST

ಹಾಸನ: ಸಾಲ ನೀಡಿಲ್ಲ ಎಂಬ ಕಾರಣಕ್ಕೆ ಚಾಲಕನೋರ್ವ ಮಾಲೀಕನನ್ನು ಕೊಲೆ ಮಾಡಿರುವ ಘಟನೆ ಅರಸೀಕೆರೆ ತಾಲೂಕಿನ ಜಾವಗಲ್​ನಲ್ಲಿ ನಡೆದಿದೆ.

ಸಾಲ ಕೊಡದ ಮಾಲೀಕನ ಬರ್ಬರ ಹತ್ಯೆ ಆರೋಪಿ ಅಂದರ್​!

ವಡ್ಡರಹಟ್ಟಿಯ ನಾಗೇಶ್ ಸಿದ್ಧಾಬೋವಿ(47) ಕೊಲೆಯಾದ ಮಾಲೀಕ. ಟ್ರ್ಯಾಕ್ಟರ್ ಚಾಲಕ ರಂಗಸ್ವಾಮಿ ಮಾಲೀಕರಾದ ನಾಗೇಶ್ ಬಳಿ 2 ಸಾವಿರ ರೂ. ಸಾಲ ಕೇಳಿದ್ದಾನೆ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದೆ.

ಮೊದಲು ಮೃತ ನಾಗೇಶ್, ರಂಗಸ್ವಾಮಿ ಮೇಲೆ ಕೈ ಮಾಡಿದ್ದಾನೆ. ಇದರಿಂದ ಕುಪಿತಗೊಂಡ ರಂಗಸ್ವಾಮಿ ಚೂಪಾದ ಹಾರೆಯಿಂದ ಮಾಲೀಕನ ಪಕ್ಕೆಲುಬಿಗೆ ಚುಚ್ಚಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ನಾಗೇಶ್, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಅರಸೀಕೆರೆ ತಾಲೂಕು ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ರಂಗಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.

Intro:ಸಾಲ ನೀಡದ್ದಕ್ಕೆ ಚಾಲಕನೋರ್ವ ಮಾಲೀಕನನ್ನು ಕೊಲೆ ಮಾಡಿರುವ ಘಟನೆ ಅರಸೀಕೆರೆ ತಾಲೂಕಿನ ಜಾವಗಲ್ನಲ್ಲಿ ನಡೆದಿದೆ.

ವಡ್ಡರಹಟ್ಟಿಯ ನಾಗೇಶ್ ಸಿದ್ಧಾಬೋವಿ(47) ಕೊಲೆಯಾದ ಮಾಲೀಕ . ಟ್ರ್ಯಾಕ್ಟರ್ ಚಾಲಕ ರಂಗಸ್ವಾಮಿ ಮಾಲೀಕರಾದ ನಾಗೇಶ್ ಬಳಿ 2 ಸಾವಿರ ರೂ. ಸಾಲ ಕೇಳಿದ್ದನು. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಮೊದಲು ಮೃತ ನಾಗೇಶ್, ರಂಗಸ್ವಾಮಿ ಮೇಲೆ ಕೈ ಮಾಡಿದ್ದಾನೆ.

ಇದರಿಂದ ಕುಪಿತಗೊಂಡ ರಂಗಸ್ವಾಮಿ ಚೂಪಾದ ಹಾರೆಯಿಂದ ಮಾಲೀಕನ ಪಕ್ಕೆಲುಬಿಗೆ ಚುಚ್ಚಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ನಾಗೇಶ್, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಅರಸೀಕೆರೆ ತಾಲೂಕು ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ರಂಗಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.

Body:7203289

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
Last Updated : Jan 13, 2020, 5:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.