ETV Bharat / state

ಐವತ್ತಲ್ಲ ಒಂದು ಲಕ್ಷ ಮತ ಬರುತ್ತೆ ಬರೆದಿಟ್ಟುಕೊಳ್ಳಿ: ಪ್ರೀತಂ ಗೌಡ

author img

By

Published : Apr 16, 2023, 9:29 PM IST

ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಮೂರೂ ಪಕ್ಷಗಳು 2ನೇ ಸ್ಥಾನಕ್ಕೆ ಹೋರಾಟ ಮಾಡುತ್ತಿವೆ. ಜೆಡಿಎಸ್ ನನ್ನ ನೈಜ ಎದುರಾಳಿ ಎಂದು ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಹೇಳಿದರು.

BJP candidate Pritam Gowda spoke.
ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಮಾತನಾಡಿದರು.
ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಹೇಳಿಕೆ

ಹಾಸನ: ಕ್ಷೇತ್ರದಲ್ಲಿ ಬಿಜೆಪಿ ಒಂದು ಲಕ್ಷ ಮತ ಪಡೆಯುವುದು ನಿಶ್ಚಿತ. ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಎರಡನೇ ಸ್ಥಾನಕ್ಕಾಗಿ ಫೈಟ್ ಮಾಡಲಿ ಎಂದು ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಸವಾಲು ಹಾಕಿದರು.

ನಿನ್ನೆ ಹಾಸನ ಜನರು ನನ್ನ ಎದುರಾಳಿಗಳಿಗೆ ಸಂದೇಶ ಕೊಟ್ಟಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿಯಿಂದ ಕೂಡ ಅಭ್ಯರ್ಥಿಗಳು ಇರುತ್ತಾರೆ. ಆದರೆ ಜೆಡಿಎಸ್ ನನ್ನ ನೈಜ ಎದುರಾಳಿ. ಉಳಿದ ಮೂರು ಪಕ್ಷಗಳು 2ನೇ ಸ್ಥಾನಕ್ಕೆ ಹೋರಾಟ ಮಾಡುತ್ತವೆ ಎಂದರು.

ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಾಸನ ಲೂಟಿಯಾಗಿದೆ ಎಂಬ ರೇವಣ್ಣನವರ ಹೇಳಿಕೆ ವಿಚಾರ ಕುರಿತು ಮಾತನಾಡಿ, ಹೌದು. ನಾನು ಕ್ಷೇತ್ರದ ಜನರ ಪ್ರೀತಿಯನ್ನು ಲೂಟಿ ಮಾಡಿದ್ದೇನೆ. ಜನರ ಪ್ರೀತಿ ಲೂಟಿ ಮಾಡಿದ್ದಕ್ಕೆ ನಿನ್ನೆ ಅಷ್ಟೊಂದು ಜನ ಸೇರಿದ್ದರು. ಸ್ವರೂಪ್ ಟಿಕೆಟ್ ಪಡೆಯುವುದಕ್ಕೆ ಎಷ್ಟೊಂದು ಪರದಾಡಿದರು. ಇನ್ನು ಅವರೇನು ಕೆಲಸ ಮಾಡುತ್ತಾರೆ ಎಂದು ಜನ ಯೋಚನೆ ಮಾಡುತ್ತಾರೆ. ಒಂದು ಪತ್ರ ಕೊಡುವುದಕ್ಕೂ ಹೊಳೆನರಸೀಪುರದ ಅನುಮತಿ ಬೇಕು. ಹಾಗಾಗಿ ಹಾಸನದ ಜನರು ಕೆಲಸಗಾರನಿಗೆ ಅವಕಾಶ ಕೊಡುತ್ತಾರೆ ಎಂದು ರೇವಣ್ಣಗೆ ಟಾಂಗ್ ನೀಡಿದ್ದಾರೆ.

'ದಳ'ಪತಿಗಳಿಗೆ ತಿರುಗೇಟು: ಸ್ವರೂಪ್ ಅವರ ತಂದೆ ನಗರಸಭೆ ಅಧ್ಯಕ್ಷರಾಗಿ ಆರು ಬಾರಿ ಚುನಾವಣೆಯಲ್ಲಿ ಅಭ್ಯರ್ಥಿ ಆಗಿದ್ದರು. 40 ವರ್ಷ ಆ್ಯಕ್ಟೀವ್ ರಾಜಕೀಯದಲ್ಲಿ ಇದ್ದವರು ಎನ್ನುವ ಮೂಲಕ 'ದಳ'ಪತಿಗಳ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನಾನು ಮಾಡಿದ ಕೆಲಸ ಏನೆಂದು ನಿನ್ನೆ ಜನರು ಉತ್ತರ ಕೊಟ್ಟಿದಾರೆ. ನಾನು ಯಾರಿಗೂ ಸಂದೇಶ ಕೊಟ್ಟಿಲ್ಲ. ಜನರೇ ನನ್ನ ಎದುರಾಳಿಗಳಿಗೆ ಸಂದೇಶ ಕೊಟ್ಟಿದ್ದಾರೆ ಎಂದು ಹೇಳಿದರು.

ರೇವಣ್ಣ ಸ್ಪರ್ಧೆ ಮಾಡಿದ್ರೆ ಐವತ್ತು ಸಾವಿರ ಮತಗಳ ಅಂತರದಲ್ಲಿ ಗೆಲುವೆಂಬ ಸವಾಲು ವಿಚಾರಕ್ಕೆ ಅವರು ಈಗ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಹಾಗಾಗಿ ಇದು ಅಪ್ರಸ್ತುತ. ಯಾರೇ ಅಭ್ಯರ್ಥಿಯಾದರೂ ಒಂದು ಲಕ್ಷ ಓಟು ಪಡೆದುಕೊಳ್ಳಬೇಕು ಎಂದು ಕಾರ್ಯಕರ್ತರು ನಿರ್ಧರಿಸಿದ್ದಾರೆ.

ಹದಿನೆಂಟು ತಿಂಗಳ ಹಿಂದೆ ಸವಾಲು ಹಾಕಿದ್ದೆ. ಆಗ ಯಾರು ಉತ್ತರ ಕೊಡಬೇಕಿತ್ತೋ ಕೊಟ್ಟಿದ್ದರೆ ಅದಕ್ಕೆ ಮಾನ್ಯತೆ ಇರುತ್ತಿತ್ತು. ಈಗ ಅವರು ಮಾತನಾಡಿದರೆ ನಾನು ಚರ್ಚೆ ಮಾಡುತ್ತೇನೆ. ಐವತ್ತು ಸಾವಿರ ಮತಗಳ ಲೀಡ್‌ಗೆ ಈಗಲೂ ಬದ್ದ, ಮುಂದಿನ ಚುನಾವಣೆಗೂ ಅವಕಾಶ ಕೋಡುತ್ತೇನೆ ಎಂದು ತಿಳಿಸಿದರು.

ಸ್ವರೂಪ್ ಪ್ರಕಾಶ್‌ಗೆ ಜೆಡಿಎಸ್ ಟಿಕೆಟ್: ಜೆಡಿಎಸ್ ಪಕ್ಷ ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸ್ವರೂಪ್ ಪ್ರಕಾಶ್‌ಗೆ ಟಿಕೆಟ್ ನೀಡಿರುವುದನ್ನು ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ.ಗೌಡ ಸ್ವಾಗತಿಸಿದ್ದಾರೆ. ಕುಮಾರಸ್ವಾಮಿ ಹಾಸನ ವಿಧಾನಸಭಾ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸಿ ಖುದ್ದು ತಾನೇ ಪ್ರಚಾರ ನಡೆಸುವುದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, ಕುಮಾರಣ್ಣ ಯಾವತ್ತಿಗೂ ತನ್ನ ಹಿತೈಷಿ. ಅವರು ಸದಾ ತನ್ನ ಒಳಿತನ್ನೇ ಬಯಸುತ್ತಾರೆ. ಇದೆಲ್ಲ ಮಾಧ್ಯಮ ಮತ್ತು ಜನರಿಗೆ ಮುಂದೆ ಗೊತ್ತಾಗಲಿದೆ ಎಂದರು.

ಇದನ್ನೂ ಓದಿ: ಪ್ರಚಾರಕ್ಕೆ ತೆರಳಿದ ಬಿ.ವೈ.ವಿಜಯೇಂದ್ರರಿಗೆ ತರಲಘಟ್ಟ ತಾಂಡಾದಲ್ಲಿ ವಿರೋಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.