ETV Bharat / state

ಹಳೆ ದ್ವೇಷ: ಪಕ್ಕದ ಮನೆಯವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ - Kannada news

ಮನೆಯ ಬಳಿ ಬಂದ ಮಂಜುಳಾ ಅವರ ಪತಿ ದೇವರಾಜು ಮೇಲೆ ಮಾರಕಾಸ್ತ್ರಗಳಿಂದ ಶಿವರಾಮ್ ಪುತ್ರ ಶಿವರಾಜ್ ಏಕಾಏಕಿ ಹಲ್ಲೆ ಮಾಡಿದ್ದಾನೆ. ಕಬ್ಬಿನಿಂದ ರಾಡಿನಿಂದ ದೇವರಾಜ್ ತಲೆಗೆ ಬಲವಾಗಿ ಹೊಡೆದಿದ್ದರಿಂದ ದೇವರಾಜ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.

ಹಳೆ ದ್ವೇಷ ಪಕ್ಕದ ಮನೆಯವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
author img

By

Published : Jun 9, 2019, 10:18 PM IST

ಹಾಸನ : ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಪಕ್ಕದ ಮನೆಯ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಗಾಂಧಿ ಸರ್ಕಲ್ ಬಳಿಯಿರುವ ದಿವಂಗತ ಮಾಜಿ ಸಚಿವ ಎಚ್ ಸಿ ಶ್ರೀಕಂಠಯ್ಯ ಅವರ ಮನೆಯ ಪಕ್ಕದಲ್ಲಿ ಘಟನೆ ನಡೆದಿದೆ.

ಮನೆ ಕಟ್ಟುವ ವಿಚಾರದಲ್ಲಿ 6 ವರ್ಷಗಳ ಹಿಂದೆ ದೇವರಾಜು ಮತ್ತು ಶಿವರಾಮ್ ಎಂಬ ಅಕ್ಕಪಕ್ಕದ ಮನೆಯವರಿಗೆ ಸಣ್ಣಪುಟ್ಟ ಗಲಾಟೆ ನಡೆದಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಲೇರಿತ್ತು.

ಈ ಬಗ್ಗೆ ಶಿವರಾಮ್ ಕುಟುಂಬಕ್ಕೆ ಪೊಲೀಸರು ಖಡಕ್ ವಾರ್ನಿಂಗ್ ಕೊಟ್ಟು ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ದರು. ಆ ಬಳಿಕ ನಿನ್ನೆ ರಾತ್ರಿ ಅಶ್ಲೀಲ ಪದಗಳನ್ನು ಬಳಸಿ ಶಿವರಾಮ್ ಕುಟುಂಬ, ಮಂಜುಳಾ ಮೇಲೆ ಆರೋಪ ಮಾಡಿ ಕ್ಯಾತೆ ತೆಗೆದಿದ್ದಾರಂತೆ. ಮಂಜುಳಾ ತಕ್ಷಣ ಈ ಬಗ್ಗೆ ಪೊಲೀಸ್ ಠಾಣೆಗೆ ಮತ್ತು ತಮ್ಮ ಪತಿಗೆ ಫೋನ್ ಮಾಡಿ ಬರುವಂತೆ ತಿಳಿಸಿದ್ದಾರೆ.

ಹಳೆ ದ್ವೇಷ ಪಕ್ಕದ ಮನೆಯವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ತಕ್ಷಣ ಮನೆಯ ಬಳಿ ಬಂದ ಮಂಜುಳಾ ಅವರ ಪತಿ ದೇವರಾಜು ಮೇಲೆ ಮಾರಕಾಸ್ತ್ರಗಳಿಂದ ಶಿವರಾಮ್ ಪುತ್ರ ಶಿವರಾಜ್ ಏಕಾಏಕಿ ಹಲ್ಲೆ ಮಾಡಿದ್ದಾನೆ. ಕಬ್ಬಿನಿಂದ ರಾಡಿನಿಂದ ದೇವರಾಜ್ ಅವರ ತಲೆಗೆ ಬಲವಾಗಿ ಹೊಡೆದಿದ್ದರಿಂದ ದೇವರಾಜ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.

ದೇವರಾಜು ಅವರ ಮಕ್ಕಳು ತಂದೆಯನ್ನು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಹಲ್ಲೆ ನಡೆಸಿದ ಶಿವರಾಜ್ ಮೇಲೆ ಮನೆ ಕಳ್ಳತನ, ಹಲ್ಲೆ ಪ್ರಕರಣಗಳಿವೆ.

Intro:ಹಾಸನ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಪಕ್ಕದಮನೆಯ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಗಾಂಧಿ ಸರ್ಕಲ್ ಬಳಿಯಿರುವ ದಿವಂಗತ ಮಾಜಿ ಸಚಿವ ಎಚ್ ಸಿ ಶ್ರೀಕಂಠಯ್ಯ ಅವರ ಮನೆಯ ಪಕ್ಕದಲ್ಲಿ ಇಂಥದೊಂದು ಘಟನೆ ನಡೆದಿದೆ.

ಮನೆ ಕಟ್ಟುವ ವಿಚಾರದಲ್ಲಿ 6 ವರ್ಷಗಳ ಹಿಂದೆ ದೇವರಾಜು ಮತ್ತು ಶಿವರಾಮ್ ಎಂಬ ಅಕ್ಕ ಪಕ್ಕದ ಮನೆಯವರಿಗೆ ಸಣ್ಣಪುಟ್ಟ ಗಲಾಟೆ ನಡೆದಿದ್ದು, ಬಳಿಕ ಪೊಲೀಸ್ ಠಾಣೆ ಮೆಟ್ಟಲೇರಿತ್ತು. ಸುಖಾಸುಮ್ಮನೆ ಗಲಾಟೆ ಮಾಡಿ ತೊಂದರೆ ಕೊಟ್ಟಿದ್ದ ಶಿವರಾಮ್ ಕುಟುಂಬಕ್ಕೆ ಪೊಲೀಸರು ಖಡಕ್ ವಾರ್ನಿಂಗ್ ಕೊಟ್ಟು ಶಿವರಾಮ್ ಕುಟುಂಬದಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ರು.

ಬಳಿಕ ನಿನ್ನೆ ರಾತ್ರಿ ಸುಖಾ ಸುಮ್ಮನೆ ಅಶ್ಲೀಲ ಪದಗಳನ್ನು ಬಳಸಿ ಶಿವರಾಮ್ ಕುಟುಂಬ ಮಂಜುಳಾ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಕ್ಯಾತೆ ತೆಗೆದಿದ್ದಾರೆ ಮಂಜುಳಾ ರವರು ತಕ್ಷಣ ಪೊಲೀಸ್ ಠಾಣೆಗೆ ಮತ್ತು ತಮ್ಮ ಪತಿಗೆ ಫೋನ್ ಮಾಡಿ ಬರುವಂತೆ ತಿಳಿಸಿದ್ದಾರೆ. ತಕ್ಷಣ ಮನೆಯ ಬಳಿ ಬಂದ ಮಂಜುಳಾ ಅವರ ಪತಿ ದೇವರಾಜು ಮೇಲೆ ಮಾರಕಾಸ್ತ್ರಗಳಿಂದ ಶಿವರಾಮ್ ಪುತ್ರ ಶಿವರಾಜ್ ಏಕಾಏಕಿ ಹಲ್ಲೆ ಮಾಡಿದ್ದಾನೆ. ಕಬ್ಬಿನಿಂದ ರಾಡಿನಿಂದ ದೇವರಾಜ್ ಅವರ ತಲೆಗೆ ಬಲವಾಗಿ ಹೊಡೆದಿದ್ದರಿಂದ ದೇವರಾಜ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ಬೈಟ್: ದೇವರಾಜು, ಹಲ್ಲೆಗೊಳಗಾದವರು.

ತಕ್ಷಣ ದೇವರಾಜು ಅವರ ಮಕ್ಕಳು ತಂದೆಯನ್ನ ಹೆಚ್ಚಿನ ಚಿಕಿತ್ಸೆಗಾಗಿ ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೂ ಹಲ್ಲೆ ಮಾಡಿದ ಶಿವರಾಜ್ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದಿತ್ತು. 2017ರಲ್ಲಿ ಕೂಡ ಈತ ಇವರ ಮೇಲೆ ಗಲಾಟೆ ಮಾಡಿಕೊಂಡು ಪ್ರಕರಣವನ್ನ ಪೊಲೀಸರ ಮಧ್ಯಸ್ಥಿಕೆಯಲ್ಲಿ ತೀರ್ಮಾನ ಮಾಡಿಕೊಂಡಿದ್ದರು.

ನಗರದ ಗಾಂಧಿ ಸರ್ಕಲ್ ಸಮೀಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯ ಮನೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವ ವೇಳೆ ಸಿಕ್ಕಿಬಿದ್ದ ಪ್ರಕರಣ, ಮನೆಗಳ್ಳತನ ಮತ್ತು ಹಲ್ಲೆ ಪ್ರಕರಣಗಳು ಸೇರಿದಂತೆ 3 ಕ್ಕೂ ಹೆಚ್ಚು ಪ್ರಕರಣಗಳು ಈತನ ಬೆನ್ನಮೇಲಿವೆಯಂತೆ

ಬೈಟ್: ಮಂಜುಳಾ, ಹಲ್ಲೆಗೊಳಗಾದವರು.

ಉತ್ತರ ಕ್ಷುಲಕ ಕಾರಣಕ್ಕೆ ಪಕ್ಕದ ಮನೆಯವರ ಮೇಲೆ ಹಲ್ಲೆ ಮಾಡಿರುವುದು ನಿಜಕ್ಕೂ ಬೇಸರದ ಸಂಗತಿ ಸದ್ಯ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಪೊಲೀಸರು ಯಾವ ರೀತಿಯ ಕ್ರಮವನ್ನು ಜರುಗಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.