ETV Bharat / state

ಮಹಿಳೆಯರ ಮಾಂಗಲ್ಯ ಸರವೇ ಇವರ ಟಾರ್ಗೆಟ್.. ಖತರ್ನಾಕ್ ಕಳ್ಳರನ್ನು ಮತ್ತೆ ಜೈಲಿಗಟ್ಟಿದ ಹಾಸನ ಪೊಲೀಸರು

ಸುಮಾರು 22 ಮಂದಿ ಮಹಿಳೆಯರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಖತರ್ನಾಕ್ ಕಳ್ಳರನ್ನು ಹಾಸನ ಪೊಲೀಸರು ಸೆರೆಹಿಡಿದಿದ್ದಾರೆ.

nuptial-chain-robbers-arrested-by-police-in-hassan
ಖತರ್ನಾಕ್ ಕಳ್ಳರನ್ನು ಮತ್ತೆ ಜೈಲಿಗಟ್ಟಿದ ಹಾಸನ ಪೊಲೀಸರು
author img

By

Published : Apr 26, 2021, 8:57 PM IST

ಹಾಸನ: ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಮಾಂಗಲ್ಯ ಸರವನ್ನು ಸೇರಿದಂತೆ ಚಿನ್ನಾಭರಣವನ್ನು ಲಪಟಾಯಿಸುತ್ತಿದ್ದ ಕತರ್ನಾಕ್ ಕಳ್ಳರನ್ನು ಕೊನೆಗೂ ಹೆಡೆಮುರಿ ಕಟ್ಟುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗೋಪಾಲ್@ ಗೋಪಿ (39) ಹಾಗೂ ರಮೇಶ್ (45) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಸುಮಾರು 660 ಗ್ರಾಂ ತೂಕದ 30 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರಗಳನ್ನು ವಶಪಡಿಸಿಕೊಳ್ಳುವಲ್ಲಿ ಜಿಲ್ಲೆಯ ಹಿರೀಸಾವೆ ಪೊಲೀಸ್ ಸೇರಿದಂತೆ ಚನ್ನರಾಯಪಟ್ಟಣ ತಾಲೂಕಿನ ವಿವಿಧ ಪೊಲೀಸ್ ಠಾಣೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಆಟೋ ಚಾಲಕನಾದ ಗೋಪಾಲ್ ಮತ್ತು ಎಳನೀರು ವ್ಯಾಪಾರಿಯಾಗಿರೋ ರಮೇಶ್, ಚಾಮರಾಜನಗರ ಜಿಲ್ಲೆಯ ಮೇಗಲಹುಂಡಿ ಮತ್ತು ಸಾಗಡೆ ಗ್ರಾಮದವರು. ಮಧ್ಯಪಾನ ಮತ್ತು ಧೂಮಪಾನ ಸೇರಿದಂತೆ ಜೂಜಾಟ ಮತ್ತು ದುಶ್ಚಟಗಳಿಗೆ ಬಲಿಯಾಗಿ ಹಣವನ್ನು ಹೊಂದಿಸಲು ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಇಂತಹ ಕೃತ್ಯ ಎಸಗಿದ್ದಾರೆ.

ಎಎಸ್​ಪಿ ಬಿ. ಎನ್ ನಂದಿನಿ ಮಾತನಾಡಿದರು

ಪ್ರಕರಣದ ಹಿನ್ನೆಲೆ: ಸೆಪ್ಟೆಂಬರ್​​ 29ರಂದು ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಪೋಲಿಸ್ ಠಾಣೆ ವ್ಯಾಪ್ತಿಯ ಗೌಡರಹಳ್ಳಿ ಗ್ರಾಮದ ಇಂದ್ರಮ್ಮ ಬಟ್ಟೆ ತೊಳೆಯಲು ಎಂದು ಕೆರೆಗೆ ಹೋಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಹಿಂಬದಿಯಿಂದ ಬಂದು ಚಂದ್ರಮ್ಮ ಅವರ ಕುತ್ತಿಗೆಯನ್ನು ಹಿಡಿದು ಬಲವಂತವಾಗಿ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದ. ಈ ವೇಳೆ ಇಂದ್ರಮ್ಮ ಕುಟುಂಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ರು, ಈ ದೂರಿನನ್ವಯ ಎಸ್ಪಿ ಶ್ರೀನಿವಾಸಗೌಡ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಂದಿನಿ ಹಾಗೂ ಡಿವೈಎಸ್ಪಿ ಲಕ್ಷ್ಮೇಗೌಡ ನೇತೃತ್ವದಲ್ಲಿ ವಿಶೇಷ ಮೂರು ತಂಡಗಳನ್ನು ರಚನೆ ಮಾಡಿ ತನಿಖೆ ಆರಂಭಿಸಿದ್ದರು.

22 ಪ್ರಕರಣಗಳಲ್ಲಿ ಭಾಗಿ: ಒಂದಲ್ಲ ಎರಡಲ್ಲ ಸುಮಾರು 22 ಮಂದಿ ಮಹಿಳೆಯರ ಮಾಂಗಲ್ಯವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಖತರ್ನಾಕ್ ಕಳ್ಳರು ಕೊನೆಗೂ ಕಂಬಿ ಹಿಂದೆ ಸರಿದಿದ್ದಾರೆ.

ಹಿರಿಸಾವೆ ಠಾಣೆಯಲ್ಲಿ 1 ಪ್ರಕರಣ ದಾಖಲಾದರೆ, ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಶ್ರವಣಬೆಳಗೊಳ ಮನೆಯಲ್ಲಿ 2 ಪ್ರಕರಣ, ಮಂಡ್ಯ ಜಿಲ್ಲೆಯ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ, ಕೆ ಆರ್ ಪೇಟೆ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ನಾಗಮಂಗಲ ಪೊಲೀಸ್ ಠಾಣೆಯಲ್ಲಿ 3, ಪಾಂಡವಪುರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ 1, ಅರಕೆರೆ ಪೊಲೀಸ್ ಠಾಣೆಯಲ್ಲಿ 1, ಬಸರಾಳು ಪೊಲೀಸ್ ಠಾಣೆಯಲ್ಲಿ 1, ಮಂಡ್ಯ ಹಾಗೂ ಶ್ರೀರಂಗ ಪೊಲೀಸ್ ಠಾಣೆಯಲ್ಲಿ ತಲ ಒಂದೊಂದು ಪ್ರಕರಣ, ಸಂತೆಮರಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಸೇರಿದಂತೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಬರೋಬ್ಬರಿ 22 ಪ್ರಕರಣಗಳಲ್ಲಿ ಖದೀಮರು ಭಾಗಿಯಾಗಿದ್ದಾರೆ.

ಆರು ವರ್ಷ ಜೈಲಲ್ಲಿದ್ದ ಗೋಪಾಲ@ಗೋಪಿ: ಚಾಮರಾಜನಗರ ಜಿಲ್ಲೆಯ ಮನೆ ಕಳ್ಳತನದಲ್ಲಿ ಭಾಗಿಯಾಗಿದ್ದ ಗೋಪಾಲ್ ಅಲಿಯಾಸ್ ಗೋಪಿ ಈ ಹಿಂದೆ ಆರು ವರ್ಷಗಳ ಕಾಲ ಜೈಲುವಾಸ ಅನುಭವಿಸಿ 2019ರಲ್ಲಿ ಬಿಡುಗಡೆಗೊಂಡಿದ್ದ. ಕೋವಿಡ್- 19ರ ಸಂದರ್ಭದಲ್ಲಿ ಮತ್ತೆ ತನ್ನ ಹಳೆಯ ಚಾಳಿಯನ್ನು ತನ್ನ ಸ್ನೇಹಿತ ಎಳನೀರು ವ್ಯಾಪಾರಿ ರಮೇಶ್ ಜೊತೆ ಸೇರಿಕೊಂಡು ಚೈನ್ಸ್ ಸ್ನ್ಯಾಚಿಂಗ್ ಮಾಡೋದನ್ನು ಶುರುಮಾಡಿ ಸುಮಾರು 22 ಪ್ರಕರಣಗಳಲ್ಲಿ ಭಾಗಿಯಾಗಿ ಮತ್ತೆ ಜೈಲ್ ಊಟದ ರುಚಿ ನೋಡಲು ಹೊರಟಿದ್ದಾನೆ. ಇದಲ್ಲದೆ ಜೈಲಿನಿಂದ ಬಂದ ಬಳಿಕ ಚಾಮರಾಜನಗರದ ಸಂತೆಮರಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಬೈಕೊಂದನ್ನು ಕೂಡ ಈತನಿಂದ ವಶಪಡಿಸಿಕೊಂಡಿದ್ದಾರೆ.

ಮಹಿಳೆಯರ ಮಾಂಗಲ್ಯ ಸರವೇ ಇವರ ಟಾರ್ಗೆಟ್: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಆಭರಣಗಳನ್ನು ಪ್ರದರ್ಶನ ಮಾಡಿಕೊಳ್ಳುವುದು ಒಂದು ಫ್ಯಾಷನ್ ಆಗಿ ಬಿಟ್ಟಿದೆ. ಇವುಗಳನ್ನು ಗುರಿಯಾಗಿಟ್ಟುಕೊಂಡಿರುವ ಈ ಖತರ್ನಾಕ್ ಆಸಾಮಿಗಳು, ಬಟ್ಟೆ ತೊಳೆಯಲು ಹೋಗುವ ಅಥವಾ ದನ ಮೇಯಿಸುತ್ತಿದ್ದ ಮಹಿಳೆಯರ ಹಾಗೂ ಜಮೀನಿನಲ್ಲಿ ಕೆಲಸ ಮಾಡುವ ಗಂಡನಿಗೆ ಊಟ ತೆಗೆದುಕೊಂಡು ಹೋಗುವ ಮಹಿಳೆಯರನ್ನು ಸೇರಿದಂತೆ ಒಂಟಿಯಾಗಿ ತಿರುಗಾಡುವ ವಯೋವೃದ್ಧ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅವರು ಹಾಕಿಕೊಂಡಿದ್ದ ಮಾಂಗಲ್ಯಸರವನ್ನು ಪರಾರಿ ಮಾಡುತ್ತಿದ್ದರು.

ದಾರಿ ಕೇಳುವ ಅಥವಾ ಶುಂಠಿ ಖರೀದಿಸುವ ನೆಪದಲ್ಲಿ ಕಳ್ಳತನ: ಮಹಿಳೆಯರನ್ನೇ ಟಾರ್ಗೆಟ್ ಮಾಡಿರುವ ಇವರುಗಳು ಒಂಟಿಯಾಗಿ ಹೋಗುವ ಮಹಿಳೆಯರ ಬಳಿಬಂದು ದಾರಿ ಕೇಳುವ ನೆಪದಲ್ಲಿ ಅಥವಾ ನಾವು ಶುಂಠಿ ಬೆಳೆದು ಕೊಡುತ್ತೇವೆ, ತೆಂಗಿನ ಮಟ್ಟೆ, ಕುರಿ-ಮೇಕೆ ಖರೀದಿ ಮಾಡಲು ಬಂದಿದ್ದೇವೆ ಎಂಬ ನೆಪವನ್ನು ಹೇಳಿ ಅವರ ಗಮನವನ್ನು ಬೇರೆಡೆಗೆ ಸೆಳೆದು ತಕ್ಷಣ ಕೊರಳಿನಲ್ಲಿರುವ ಸರವನ್ನು ಕದ್ದು ದ್ವಿಚಕ್ರ ವಾಹನಗಳಲ್ಲಿ ಪರಾರಿಯಾಗುತ್ತಿದ್ದರು.

30 ಲಕ್ಷ ಮೌಲ್ಯದ ಮಾಂಗಲ್ಯ ಸರಗಳು ವಶ: ಹತ್ತಲ್ಲ, ಸಾವಿರವಲ್ಲ. ಬರೋಬ್ಬರಿ 30 ಲಕ್ಷ ಮೌಲ್ಯದ 22 ಪ್ರಕರಣದ 660 ಗ್ರಾಂ ತೂಕದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

ಓದಿ: ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡಿ ಬೀದಿ ಬದಿ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆದಿದೆ : ರಂಗಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.