ETV Bharat / state

ಹಾಸನದಲ್ಲಿ ಮತ್ತೆ 144 ಮಂದಿಗೆ ಕೊರೊನಾ.. 25 ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದು, ಉಸಿರಾಟದಲ್ಲಿ ತೊಂದರೆ, ಜ್ವರ, ಶೀತ, ನೆಗಡಿ, ಕೆಮ್ಮು ಕಾಣಿಸಿದ್ರೆ ತಪಾಸಣೆಗೆ ಒಳಪಡಬೇಕು ಎಂದು ಸಾರ್ವಜನಿಕರಲ್ಲಿ ಆರೋಗ್ಯಾಧಿಕಾರಿ ಸತೀಶ್ ಮನವಿ ಮಾಡಿದ್ದಾರೆ..

dds
ಹಾಸನದಲ್ಲಿ ಮತ್ತೆ 144 ಮಂದಿಗೆ ಕೊರೊನಾ
author img

By

Published : Nov 1, 2020, 2:15 PM IST

ಹಾಸನ : ಜಿಲ್ಲೆಯಲ್ಲಿ ಇಂದು ಹೊಸದಾಗಿ 144 ಕೋವಿಡ್‌ ಪ್ರಕರಣ ವರದಿಯಾಗಿವೆ. ಸೋಂಕಿತರ ಸಂಖ್ಯೆ 25,033ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯಾಧಿಕಾರಿ ಸತೀಶ್ ತಿಳಿಸಿದ್ದಾರೆ.

ಹಾಸನದಲ್ಲಿ ಮತ್ತೆ 144 ಮಂದಿಗೆ ಕೊರೊನಾ

3 ಮಂದಿ ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 428ಕ್ಕೆ ತಲುಪಿದೆ. ಇಂದು ಬಿಡುಗಡೆಯಾದ 210 ಜನರು ಸೇರಿ ಈವರೆಗೆ 23,558 ಮಂದಿ ಗುಣಮುಖರಾಗಿದ್ದಾರೆ. 1047 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್‌ ಆಸ್ಪತ್ರೆ, ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ 38 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲೂಕುವಾರು ಪ್ರಕರಣ : ಇಂದು ದಾಖಲಾಗಿರುವ ಕೊರೊನಾ ಪ್ರಕರಣಗಳಲ್ಲಿ ಆಲೂರು-13, ಅರಕಲಗೂಡು-7, ಅರಸೀಕೆರೆ-11, ಬೇಲೂರು-15, ಚನ್ನರಾಯಪಟ್ಟಣ-35, ಹಾಸನ-56, ಹೊಳೆನರಸೀಪುರ-13, ಸಕಲೇಶಪುರ-4, ಇತರೆ- 0 ಒಟ್ಟು 144 ಪಾಸಿಟಿವ್ ಪ್ರಕರಣ ದಾಖಲಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.