ಹಾಸನ: ಅರಸೀಕೆರೆ ತಾಲೂಕು ಅಣ್ಣಾಯಕನಹಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಫಾಸ್ಟರ್ ರಾಜು ಮೇಲೆ ಹೊರಿಸಲಾಗಿರುವ ಮತಾಂತರದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಜಿಲ್ಲಾ ಕ್ರೈಸ್ತರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫಾಸ್ಟರ್ ರಾಜುರವರು ಯಾವುದೇ ರೀತಿಯ ಬಲವಂತದ ಮತಾಂತರ ಮಾಡಿರುವುದಿಲ್ಲ. ಅವರು ಯೇಸುವಿನ ಹಿಂಬಾಲಕರಾಗಿದ್ದು, ಅನೇಕರು ಸ್ವಇಚ್ಛೆಯಿಂದ ಯಾವುದೇ ಅಮಿಷವಿಲ್ಲದೆ ಯೇಸುವನ್ನು ಹಿಂಬಾಲಿಸುತ್ತಿದ್ದಾರೆ. ಪ್ರಾರ್ಥನೆಯಲ್ಲಿ ಪಾಲ್ಗೊಳ್ಳತ್ತಿರುವುದನ್ನೇ ಮತಾಂತರ ಎಂಬುದಾಗಿ ಬಿಂಬಿಸಲಾಗುತ್ತಿದೆ ಎಂದರು.
ಫಾಸ್ಪರ್ ರಾಜುರವರಿಗೆ ಮಾನಸಿಕ ಕಿರುಕುಳ ನೀಡುತ್ತಿರುವುದನ್ನು ನಿಲ್ಲಿಸಬೇಕು, ನಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತಂದು ಮಾನಹಾನಿ ಮಾಡುವುದನ್ನು ನಾವು ವಿರೋಧಿಸುತ್ತೇವೆ. ಇದರಲ್ಲಿ ಸತ್ಯಾಸತ್ಯತೆಗಳನ್ನು ಕೂಲಂಕಷವಾಗಿ ವಿಚಾರಣೆ ಮಾಡಿ ನ್ಯಾಯ ಸಮ್ಮತವಾದ ತಪ್ಪುಗಳಿದ್ದರೆ ಕಾನೂನಾತ್ಮಕವಾದ ವಿಚಾರಣೆಗಳು ನಡೆಯಲಿ, ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.