ETV Bharat / state

ಜನತಾ ಕರ್ಫ್ಯೂವಿನಿಂದ ಪ್ರಯೋಜನ ಇಲ್ಲ, ಸಂಪೂರ್ಣ ಲಾಕ್​ಡೌನ್​ ಮಾಡಬೇಕು: ಪ್ರಜ್ವಲ್ ರೇವಣ್ಣ

author img

By

Published : May 8, 2021, 10:34 PM IST

ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕಿಡಿಕಾರಿದ್ದಾರೆ.

Prajwal Revanna
ಪ್ರಜ್ವಲ್ ರೇವಣ್ಣ

ಹಾಸನ: ಈಗಿರುವ ಕೊರೊನಾ ಕರ್ಫ್ಯೂವನ್ನೇ ಸರ್ಕಾರ ಲಾಕ್‍ಡೌನ್ ಎಂದು ಹೆಸರು ಬದಲಿಸಿದೆ. ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜ್ವಲ್ ರೇವಣ್ಣ, ಸಂಸದ

ನಗರದಲ್ಲಿ ಮಾತನಾಡಿದ ಪ್ರಜ್ವಲ್​, ನಿತ್ಯ 50 ರಿಂದ 55 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಅದಕ್ಕಿಂತ ಕೆಟ್ಟ ಸುದ್ದಿ ಎಂದರೆ ಪ್ರತಿ ದಿನ 250 ರಿಂದ 300 ಜನ ಮೃತಪಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ಮಾಡಿದ್ದರಿಂದ ಈಗ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ನಿತ್ಯ 6 ರಿಂದ 12 ಗಂಟೆ ಓಡಾಡಲು ಬಿಟ್ಟು ಸಂಜೆಯಿಂದ ಲಾಕ್‍ಡೌನ್ ಮಾಡ್ತೀವಿ ಅಂತಿದ್ದಾರೆ.

ಈ ಲಾಕ್‍ಡೌನ್ ಫಲ ತರುವುದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ತೊಂದರೆ ಇದೆ, ಇದಕ್ಕೆ ಸರ್ಕಾರವೇ ಹೊಣೆ. ಲಾಕ್‍ಡೌನ್​ ನಿಯಮಗಳನ್ನು ಬದಲಿಸಿ ಅಥವಾ ಎರಡು ದಿನ ಅಗತ್ಯವಸ್ತು ಕೊಳ್ಳಲು ಅವಕಾಶ ಮಾಡಿಕೊಡಬೇಕು. ಸಂಪೂರ್ಣ ಲಾಕ್‍ಡೌನ್ ಮಾಡದಿದ್ದರೆ ಸೋಂಕಿತರ ಸಂಖ್ಯೆ ಕಡಿಮೆ ಆಗಲು ಸಾಧ್ಯವಿಲ್ಲ. ದಯವಿಟ್ಟು ಸರ್ಕಾರ ಈ ವಿಚಾರದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.