ಹಾಸನ: ಹೈಕಮಾಂಡ್ ಮತ್ತು ರಾಜ್ಯ ನಾಯಕರು ನೀಡಿದ್ದ ಭರವಸೆಯನ್ನು ಮತ್ತೊಮ್ಮೆ ಉಳಿಸಿಕೊಂಡಿದ್ದಾರೆ. ಅವರು ಯಾವುದೇ ಖಾತೆ ಕೊಟ್ಟರೂ ಕೂಡ ನಾವು ನಿರ್ವಹಿಸಿಕೊಂಡು ಹೋಗುತ್ತೇನೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸ್ಪಷ್ಟಪಡಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದರು.
ಈ ಬಾರಿಯೂ ನಮಗೆ ಅನ್ಯಾಯವಾಗಲ್ಲ ಎಂಬ ವಿಶ್ವಾಸವಿತ್ತು. ಪಕ್ಷಕ್ಕೆ ಮತ್ತು ರಾಜ್ಯಕ್ಕೆ ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ಇದೇ ಖಾತೆ ಬೇಕೆಂದು ಪಟ್ಟು ಹಿಡಿದಿಲ್ಲ. ಇನ್ನು ಬಿಜೆಪಿ ರಾಷ್ಟೀಯ ಹಾಗೂ ದೊಡ್ಡ ಪಕ್ಷ. ಕೇಂದ್ರದ ನಾಯಕರು ಸೂಚನೆಯಂತೆ ನಡೆಯುತ್ತೇವೆ. ಅಸಮಾಧಾನವಿದ್ದರೆ ಪಕ್ಷ ಆತಂರಿಕವಾಗಿ ಚರ್ಚೆ ನಡೆಸುತ್ತದೆ ಎಂದರು.
ಓದಿ: ರಾಜ್ಯದಲ್ಲಿ ಇಂದಿನಿಂದಲೇ ನೈಟ್ ಮತ್ತು ಗಡಿಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ : ಸಿಎಂ ಬೊಮ್ಮಾಯಿ ಆದೇಶ
ಇನ್ನು ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು. ವಿಜಯೇಂದ್ರರವರಿಗೆ ಸ್ಥಾನ ನೀಡುವ ವಿಚಾರ ಕುರಿತಂತೆ, ಅದು ಪಕ್ಷ ಮತ್ತು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಮುನ್ನಡೆದರು.