ETV Bharat / state

ಹಾಸನ : ಕುಡಿದ ಅಮಲಿನಲ್ಲಿ ಸ್ನೇಹಿತನನ್ನು ಕೊಂದ ಕಿರಾತಕರು - ಚನ್ನರಾಯಪಟ್ಟಣದಲ್ಲಿ ಕೊಲೆ

ಕುಡಿದ ಅಮಲಿನಲ್ಲಿ ಸಣ್ಣ ವಿಷಯಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿ, ಬಿಯರ್ ಬಾಟಲಿಯಲ್ಲಿ ಹೊಟ್ಟೆಗೆ ಬಲವಾಗಿ ಚುಚ್ಚಿ ಕೊಲೆ ಮಾಡಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಜರುಗಿದೆ.

Murder in Hassan ಹಾಸನದಲ್ಲಿ ಕೊಲೆ
ಕುಡಿದ ಅಮಲಿನಲ್ಲಿ ಸ್ನೇಹಿತನನ್ನು ಕೊಂದ ಕಿರಾತಕರು
author img

By

Published : Jun 13, 2020, 10:50 PM IST

ಹಾಸನ: ಕುಡಿದ ಅಮಲಿನಲ್ಲಿ ಸಣ್ಣ ವಿಷಯಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿ ಓರ್ವನನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಜರುಗಿದೆ.

ಪ್ರವೀಣ್ (25) ಎಂಬ ಯುವಕನನ್ನು ಕೊಲೆ ಮಾಡಲಾಗಿದೆ. ಇಂದು ಮಧ್ಯಾಹ್ನ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆಯ ದಿಡಗ ರಸ್ತೆಯ ಪ್ರಕೃತಿ ವೈನ್ಸ್ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಪ್ರವೀಣ್ ಮತ್ತು ಆತನ ಸೇಹಿತರಾದ ರಂಜೀತ್ ಅಲಿಯಾಸ್ ಸಂತೋಷ್, ಅನಿಲ್, ಕುಮಾರ್, ಸಂದೇಶ್, ರಾಕೇಶ್ ಗುಂಡಿನ ಮತ್ತನಲ್ಲಿ ಸಣ್ಣ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ತಾರಕಕ್ಕೇರಿ ನಾಲ್ಕು ಮಂದಿ ಕೈ-ಕೈ ಮಿಲಾಯಿಸಿದ್ದಾರೆ. ಕೊನೆಗೆ ಬಿಯರ್ ಬಾಟಲಿಯಲ್ಲಿ ಪ್ರವೀಣ್ ಹೊಟ್ಟೆಗೆ ಸಂತೋಷ್ ಬಲವಾಗಿ ಚುಚ್ಚಿದ್ದರಿಂದ ಸ್ಥಳದಲ್ಲಿಯೇ ಪ್ರವೀಣ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಓದಿ:ಏಕಾಂತದಲ್ಲಿದ್ದಾಗ ನೋಡಿದ್ದೇ ತಪ್ಪಾಯ್ತು: 8 ವರ್ಷದ ಬಾಲಕನನ್ನು ಕೊಂದ ಪ್ರೇಮಿಗಳು

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನ ಹಿರೀಸಾವೆಯ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಕುಮಾರ್, ಸಂದೇಶ್ ಮತ್ತು ರಾಕೇಶ್ ಎಂಬುವರನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ಮಾಡಿ ಪರಾರಿಯಾಗಿರೋ ಸಂತೋಷ್ ಮತ್ತು ಅನಿಲ್​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.