ETV Bharat / state

ಹಾಸನ: ಆಸ್ತಿ ವಿಚಾರವಾಗಿ ವೃದ್ಧನ ಕೊಲೆ ಆರೋಪ - ಆಸ್ತಿ ವಿಚಾರವಾಗಿ ಕೊಲೆ

ಆಸ್ತಿ ವಿಚಾರದ ಹಿನ್ನೆಲೆಯಲ್ಲಿ ವಯೋವೃದ್ಧರೊಬ್ಬರನ್ನು ಕೊಲೆ ಮಾಡಲಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಪ್ರಕರಣದ ಸತ್ಯಾಸತ್ಯತೆ ಹೊರ ಬೀಳಲಿದೆ.

rudregowda
ರುದ್ರೇಗೌಡ
author img

By

Published : Sep 26, 2020, 8:26 AM IST

ಹಾಸನ: ಆಸ್ತಿ ವಿಚಾರದ ಹಿನ್ನೆಲೆಯಲ್ಲಿ ವಯೋವೃದ್ಧರೊಬ್ಬರನ್ನು ಕೊಲೆ ಮಾಡಿರುವ ಆರೋಪ ಜಿಲ್ಲೆಯ ಶಾಂತಿಗ್ರಾಮ ಹೋಬಳಿಯ ಚಿಗಹಳ್ಳಿ ಗ್ರಾಮದಲ್ಲಿ ಕೇಳಿ ಬಂದಿದೆ.

ರುದ್ರೇಗೌಡ (75) ಕೊಲೆಯಾದವರು. ರಾಮೇಗೌಡ, ರಮೇಶ್, ಶೇಖರ್, ರುದ್ರೇಗೌಡ, ರತ್ನಮ್ಮ ಮತ್ತು ಅನುಸೂಯ ಕೊಲೆ ಮಾಡಿದ ಆರೋಪ ಹೊತ್ತಿದ್ದು, ಇವರೆಲ್ಲರೂ ಸಹ ಇದೇ ಗ್ರಾಮದ ನಿವಾಸಿಗಳು.

ಆಸ್ತಿ ವಿಚಾರವಾಗಿ ಕೊಲೆ

ಪ್ರಕರಣದ ಹಿನ್ನೆಲೆ: ರುದ್ರೇಗೌಡ ಜಮೀನಿನ ಸರ್ವೇ ನಂಬರ್ 14/2ರಲ್ಲಿ ನಮಗೂ ಆಸ್ತಿ ಬರಬೇಕೆಂದು ಆರೋಪಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಸೆ. 24ರಂದು ತಹಶೀಲ್ದಾರ್ ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ವಿಚಾರಣೆ ಇದ್ದು, ಅದಕ್ಕೆ ಕೊಲೆಯಾದ ರುದ್ರೇಗೌಡ ವಿಚಾರಣೆಗೆ ಭಾಗವಹಿಸಿದ್ದರು. ಹಾಸನದ ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಮೀನು ವಿವಾದದ ಸಂಬಂಧ ಸಾಕ್ಷಿ ಹೇಳಿದ ಹಿನ್ನೆಲೆಯಲ್ಲಿ ಆರೋಪಿಗಳು ರುದ್ರೇಗೌಡರ ಮನೆಯ ಹತ್ತಿರ ಹೋಗಿ ಗಲಾಟೆ ಮಾಡಿ ನಮ್ಮ ವಿರುದ್ಧವೇ ಸಾಕ್ಷಿ ಹೇಳುವುದಕ್ಕೆ ನಿನಗೆಷ್ಟು ಧೈರ್ಯ, ನಿನ್ನನ್ನು ಕೊಲೆ ಮಾಡಿದರೆ ಆಸ್ತಿ ನಮಗೆ ದಕ್ಕಲು ಸಾಧ್ಯ ಎಂದು ರುದ್ರೇಗೌಡರನ್ನು ಅವಾಚ್ಯ ಶಬ್ಧಗಳಿಂದ ಬೈದು ನಿಂದಿಸಿದ್ದಾರೆ ಎನ್ನಲಾಗಿದೆ.

ಮನೆಯಲ್ಲಿದ್ದ ರುದ್ರೇಗೌಡ ಮನೆಯಿಂದ ಹೊರ ಬಂದ ಬಳಿಕ ಗಲಾಟೆ ಮಾಡುತ್ತಿದ್ದ ಆರೋಪಿಗಳು ಏಕಾಏಕಿ ರುದ್ರೇಗೌಡರನ್ನು ಎಳೆದು ಎದೆಯ ಭಾಗಕ್ಕೆ ಮತ್ತು ಮರ್ಮಾಂಗದ ಮೇಲೆ ಹಲ್ಲೆ ನಡೆಸಿದ್ದು, ರುದ್ರೇಗೌಡರು ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ರುದ್ರೇಗೌಡರನ್ನು ತಕ್ಷಣ ಹೆಚ್ಚಿನ ಚಿಕಿತ್ಸೆಗೆ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗೆ ಸ್ಪಂದಿಸದ ರುದ್ರೇಗೌಡ ಮೃತಪಟ್ಟಿದ್ದಾರೆ.

ಈ ಸಂಬಂಧ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಮೇಲ್ನೋಟಕ್ಕೆ ವಯೋವೃದ್ಧರಾಗಿರುವ ರುದ್ರೇಗೌಡರಿಗೆ ಗಲಾಟೆಯ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಪ್ರಕರಣದ ಸತ್ಯಾಸತ್ಯತೆ ಹೊರ ಬೀಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.