ಹಾಸನ: ಚನ್ನರಾಯಪಟ್ಟಣದ ಹೆಬ್ಬಳಲು (ಲಕ್ಷ್ಮಿಪುರ) ಗ್ರಾಮದ ದಿನೇಶ್(27)ನನ್ನು ಕಾರಿನ ಡಿಕ್ಕಿಯಲ್ಲಿ ಸುಟ್ಟುಹಾಕಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ದೊಡ್ಡಪ್ಪನ ಮಗಳನ್ನೇ ಮದುವೆಯಾದ ಕಾರಣಕ್ಕೆ ದಿನೇಶ್ ಹೆಂಡತಿ, ಮಾವ ಮತ್ತು ಮೈದುನ ಸೇರಿಕೊಂಡು ಕೊಲೆ ಮಾಡಿದ್ದಾರೆ. ಸದ್ಯ ಆರೋಪಿಗಳನ್ನು ಚನ್ನರಾಯಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾಗಿರುವ ದಿನೇಶ್ ತಾತ ನಂಜುಂಡಯ್ಯನಿಗೆ ಪುಟ್ಟಸ್ವಾಮಿ ಮತ್ತು ಮಂಜಮ್ಮ ಎಂಬ ಇಬ್ಬರು ಮಕ್ಕಳಿದ್ದು, ಮಂಜಮ್ಮನ ಮಗಳಾದ ಅಭಿಲಾಷಾಳನ್ನು ದಿನೇಶ್ಗೆ ಕೊಟ್ಟು ಮದುವೆ ಮಾಡಲಾಗಿತ್ತು. ದಿನೇಶ್ ಮತ್ತು ಅಭಿಲಾಷ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಇನ್ನು ತನ್ನ ತಾತನ ಮಗನಾಗಿದ್ದ ಮಂಜುನಾಥ್ಗೆ ಮಗಳಿದ್ದು, ಆ ಮಗಳನ್ನು ದಿನೇಶ್ ಲೈಂಗಿಕವಾಗಿ ಬಳಸಿಕೊಂಡು ನಂತ್ರ ಮದುವೆ ಆಗಿದ್ದ. ದಿನೇಶ್ ಮದುವೆಯಾಗಿದ್ದ ಆ ಬಾಲಕಿ (16) ದಿನೇಶ್ಗೆ ತಂಗಿಯಾಗಬೇಕಿತ್ತು. ಇದರಿಂದ ಸಂಬಂಧಕ್ಕೆ ಅವಮಾನ ಮಾಡಿದ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಪತ್ನಿ ಹಾಗೂ ದಿನೇಶ್ ಮೈದುನ ಸೇರಿ ಕೊಲೆ ಮಾಡಿ ಸುಟ್ಟು ಹಾಕಿದ್ದಾರೆ.
ಕೊಲೆಯಾಗಿದ್ದು ಹೇಗೆ :
ಮನೆಗೆ ಕರೆಸಿಕೊಂಡ ದಿನೇಶ್ ಹೆಂಡತಿ ಅಭಿಲಾಷಾ, ದಿನೇಶ್ಗೆ ಮದ್ಯಪಾನ ಮಾಡಿಸುತ್ತಾಳೆ. ಮದ್ಯದ ಅಮಲಿನಲ್ಲಿದ್ದ ದಿನೇಶ್ಗೆ ಅಭಿಲಾಷಾ ಸಹೋದರ ಮಂಜುನಾಥ್ ಕಬ್ಬಿಣದ ಸಲಾಕೆಯಿಂದ ಹೊಡೆಯುತ್ತಾನೆ. ಇದಾದ ನಂತ್ರ ಕುಸಿದು ಬಿದ್ದ ದಿನೇಶ ಕುತ್ತಿಗೆಯನ್ನು ಚಾಕುವಿಂದು ಕುಯ್ದು ಕೊಲೆ ಮಾಡಲಾಗಿದೆ.
ಬಳಿಕ ಬೆಂಗಳೂರಿನಿಂದ ಹಾಸನ ತಮ್ಮ ಊರಿಗೆ ಮೃತ ದೇಹವನ್ನು ಕಾರಿನಲ್ಲಿ ತಂದು ಆ ಕಾರು ಸಮೇತ ಸುಟ್ಟು ಹಾಕಲಾಗಿದೆ. ತನಿಖೆ ನಡೆಸಿದ ಪೊಲೀಸರಿಗೆ ವಿಚಾರ ತಿಳಿದು, ಕೊಲೆಯಲ್ಲಿ ಭಾಗಿಯಾಗಿದ್ದ, ಅಭಿಲಾಷಾ, ಮಂಜುನಾಥ್ ಮತ್ತು ದಿನೇಶ್ ಮೈದುನ ಬಸವರಾಜ್ನನ್ನು ಬಂಧಿಸಲಾಗಿದೆ