ETV Bharat / state

ರಾಜನಾಥ್ ಸಿಂಗ್ ರಫೆಲ್​ ಅಡಿಯಲ್ಲಿಟ್ರೆ ಪೂಜೆ, ನಾವಿಟ್ರೆ ಅದು ಮಾಟ-ಮಂತ್ರನಾ? ಪ್ರಜ್ವಲ್ ಆಕ್ರೋಶ - Hassan Mp Prajwal Revanna latest news

ಸಹಕಾರ ಸಚಿವರು ಯೋಚಿಸಿ ಮಾತನಾಡಲಿ. ರೇವಣ್ಣ ಮೊದಲಿಂದಲೂ ಕೂಡ ಧಾರ್ಮಿಕ ಜೀವಿ. ಹಾಸನ ಜಿಲ್ಲೆಯಲ್ಲಿ ನಿಮಗೆ ಯಾವ ಭಾಗಕ್ಕೆ ಹೋದರೂ ದೇವಸ್ಥಾನಗಳು ನಿರ್ಮಾಣವಾಗಿದೆ ಅಂದರೆ ಅದಕ್ಕೆ ಅವರ ಕೊಡುಗೆ ಅಪಾರವಾಗಿದೆ..

Mp Prajwal Revanna
ಪ್ರಜ್ವಲ್​ ರೇವಣ್ಣ
author img

By

Published : Nov 30, 2020, 3:28 PM IST

ಹಾಸನ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಫೆಲ್ ಡೀಲ್ ಮಾಡುವ ವೇಳೆ ವಿಮಾನದ ಚಕ್ರಕ್ಕೆ ನಿಂಬೆಹಣ್ಣು ಕೊಟ್ರಲ್ಲ, ಅವರು ಮಾಟ-ಮಂತ್ರ ಮಾಡಿ ಇಟ್ರಂತಾ..? ಮೊದಲು ಹಿಂದೂಗಳು ಅಂದ್ರೇನು, ಹಿಂದುತ್ವ ಅಂದ್ರೇನು ಎಂಬುದನ್ನು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿದು ಮಾತನಾಡಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ತಿರುಗೇಟು ನೀಡಿದ್ದಾರೆ.

ಹಿಂದುತ್ವ ಸಂಪ್ರದಾಯದ ಬಗ್ಗೆ ಸಚಿವ ಸೋಮಶೇಖರ್ ತಿಳಿದುಕೊಳ್ಳಲಿ. ಪ್ರತಿ ಗ್ರಾಮಕ್ಕೆ ಹೋದ್ರೂ ಕೂಡ ಅಲ್ಲೇ ನಿಂಬೆಹಣ್ಣನ್ನ ಕೊಡುವ ಸಂಪ್ರದಾಯವಿದೆ. ಹಾಗಂತಾ ನಿಂಬೆಹಣ್ಣನ್ನು ಕೊಟ್ಟವರೆಲ್ಲ ಮಾಟ-ಮಂತ್ರ ಮಾಡಿಸುತ್ತಾರೆ ಅಂತಾ ಅಲ್ಲ.. ಯಾವುದೇ ದೇವಸ್ಥಾನಗಳಿಗೆ ಹೋದ್ರೂ ಅಲ್ಲಿ ಮೊದಲಿಗೆ ನಿಂಬೆಹಣ್ಣನ್ನು ಕೊಡುವುದು ಸಂಪ್ರದಾಯ.

ಶೃಂಗೇರಿ ದೇವಾಲಯವನ್ನು ಹೆಚ್‌ ಡಿ ರೇವಣ್ಣನವರು ಬಹಳ ನಂಬಿದ್ದಾರೆ. ಅಲ್ಲಿ ನಿಂಬೆಹಣ್ಣು ಕೊಡುತ್ತಾರೆ. ಹಾಗಂತಾ ರೇವಣ್ಣನವರು ಮಾಟ-ಮಂತ್ರ ಮಾಡಿಸುತ್ತಿದ್ದಾರೆ ಅಂತಾ ಹೇಳುವುದಕ್ಕೆ ಆಗುತ್ತಾ? ಅವರಿಗೆ ಹಿಂದುತ್ವದ ಬಗ್ಗೆ ಗೊತ್ತಿಲ್ಲ ಅಂತಾ ಕಾಣಿಸುತ್ತದೆ ಎಂದು ಪ್ರಜ್ವಲ್ ರೇವಣ್ಣ ಸಹಕಾರ ಸಚಿವ ಟಿ ಸೋಮಶೇಖರ್ ಅವರಿಗೆ ಟಾಂಗ್ ಕೊಟ್ಟರು.

ಹಾಸನ ತಾಲೂಕಿನ ತೇಜೂರು ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್ ಟಿ ಸೋಮಶೇಖರ್ ಅವರಿಗೆ ಅವರದೇ ಆದ ಸ್ಥಾನಮಾನಗಳಿವೆ. ಮಾತನಾಡುವಾಗ ಯೋಚಿಸಿ ಮಾತನಾಡಬೇಕು. ನಾನು ಚಿಕ್ಕವನಾಗಿ ಹೇಳುತ್ತಿರುವೆ ಮುಂದೆ ಇಂತಹ ಮಾತುಗಳನ್ನು ಆಡಬಾರದು. ಬದಲಿಗೆ ರೈತರ ಕಷ್ಟಗಳನ್ನು, ರೈತರಿಗೆ ಆಗಬೇಕಾದ ನೆರವಿನ ಬಗ್ಗೆ ಮಾತನಾಡಲು ರಾಜ್ಯದ ರೈತರು ಕೂಡ ಅವರಿಗೆ ಗೌರವ ಕೊಡುತ್ತಾರೆ. ಇಂತಹ ಮಾತುಗಳಿಂದ ಅವರ ಘನತೆ ಹಾಳು ಮಾಡಿಕೊಳ್ಳುವುದು ಬೇಡ ಎಂದು ಸಲಹೆ ನೀಡಿದರು.

ಇದನ್ನೂ ಓದಿ: ನಿಂಬೆಹಣ್ಣಿನ ಆಟ ಹೆಚ್ಚು ದಿನ ನಡೆಯುವುದಿಲ್ಲ: ಸಚಿವ ಸೋಮಶೇಖರ್ ಟಾಂಗ್

ಸಹಕಾರ ಸಚಿವರು ಯೋಚಿಸಿ ಮಾತನಾಡಲಿ. ರೇವಣ್ಣ ಮೊದಲಿಂದಲೂ ಕೂಡ ಧಾರ್ಮಿಕ ಜೀವಿ. ಹಾಸನ ಜಿಲ್ಲೆಯಲ್ಲಿ ನಿಮಗೆ ಯಾವ ಭಾಗಕ್ಕೆ ಹೋದರೂ ದೇವಸ್ಥಾನಗಳು ನಿರ್ಮಾಣವಾಗಿದೆ ಅಂದರೆ ಅದಕ್ಕೆ ಅವರ ಕೊಡುಗೆ ಅಪಾರವಾಗಿದೆ. ದೇವರ ಭಕ್ತರಾಗಿರುವ ರೇವಣ್ಣನವರು ಮಾಟ-ಮಂತ್ರ ಮಾಡುತ್ತಾರೆ ಎನ್ನುವ ಮನಸ್ಥಿತಿಗಳು ಇರುವವರೇ ಇಂತಹ ಮಾತುಗಳನ್ನಾಡುವವರು ಎಂದು ಎಸ್ ಟಿ ಸೋಮಶೇಖರ್ ಅವರ ಮಾತನ್ನು ಅವರಿಗೆ ತಿರುಗಿಸಿದರು.

ವಿಜಯೇಂದ್ರ ದುರಹಂಕಾರದ ಮಾತು ಬಿಡದಿದ್ರೆ ರಾಜಕೀಯ ಪತನ

ನಾನು ಕೂಡ ಹತ್ತು ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬರುತ್ತಿದ್ದೇನೆ. ಗೆಲುವು-ಸೋಲು ಶಾಶ್ವತವಲ್ಲ. ಈ ಒಂದು ದರ್ಪತ ಬಿಟ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸಿದರೆ ರಾಜಕೀಯವು ಉತ್ತಮವಾಗಿರುತ್ತದೆ. ಅದನ್ನು ಬಿಟ್ಟು ಅಧಿಕಾರವಿದೆ ಎಂದು ದುರಹಂಕಾರದ ಮಾತು ಆಡುತ್ತಾ ಮುಂದುವರೆದ್ರೆ ರಾಜಕೀಯ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೂ ಕೂಡ ಇದೇ ವೇಳೆ ಮಾತಿನ ಮೂಲಕ ಚಾಟಿ ಬೀಸಿದರು.

ನಮ್ಮ ಪಕ್ಷದ ಬಗ್ಗೆ ಮಾತನಾಡುವ ಬದಲು ಮೊದಲು ಅವರ ತಂದೆಯ ಸ್ಥಾನ ಉಳಿಸಿಕೊಳ್ಳಲು ಹೋರಾಟ ನಡೆಸಲಿ ಎಂದು ಸಲಹೆ ನೀಡಿದ ಪ್ರಜ್ವಲ್ ರೇವಣ್ಣ, ಬಿಜೆಪಿ ನಾಯಕರು ಹಾಸನಕ್ಕೆ ಬಂದಾಗ ಜೆಡಿಎಸ್ ವಿರುದ್ಧ ವಾಕ್ಸಮರ ಮಾಡ್ತಾರೆ.

ಹೀಗಾಗಿ ನಾವು ಬಿಜೆಪಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದೇವೆಯೋ ಅಥವಾ ರಾಷ್ಟ್ರೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿದೆಯೇ ಎಂಬುದನ್ನು ಸಿದ್ದರಾಮಯ್ಯ ಯೋಚಿಸಲಿ ಎಂದು ಸಿದ್ದರಾಮಯ್ಯ ವಿರುದ್ಧವೂ ಕೂಡ ವಾಕ್ಪ್ರಹಾರ ಮಾಡಿದ್ರು.

ಆರ್ಥಿಕ ಪರಿಸ್ಥಿತಿ ಚೆನ್ನಾಗಿರದ ಕಾರಣ ಸೋಲು :

ಶಿರಾ ಮತ್ತು ಆರ್‌ಆರ್‌ನಗರ ಚುನಾವಣೆಯಲ್ಲಿ ನಾವು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಶಿರಾ ಮತ್ತು ಆರ್‌ಆರ್‌ನಗರದ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಕೋಟಿ ಕೋಟಿ ಹಣ ಹಂಚಿದ್ದರಿಂದ ನಮ್ಮ ಪಕ್ಷದ ಬಡ ಅಭ್ಯರ್ಥಿಗಳು ಸೋಲನ್ನು ಅನುಭವಿಸಿದ್ರೇ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ. ಯಾವ ಪಕ್ಷ ಆಡಳಿತ ನಡೆಸುತ್ತಿರುತ್ತದೆಯೋ ಅಂತಹ ಸಂದರ್ಭದಲ್ಲಿ ಉಪಚುನಾವಣೆಗಳಲ್ಲಿ ಅವರ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಸಹಜ.

ಬಳ್ಳಾರಿಯಲ್ಲಿ ಕಳೆದ ಬಾರಿ ಉಗ್ರಪ್ಪನವರು ಉಪಚುನಾವಣೆಯಲ್ಲಿ ಗೆದ್ದಿದ್ದರು. ಆದರೆ, ಈ ಬಾರಿ ಅವರು ಸೋಲಲಿಲ್ಲವೇ?. ಹಾಗಾಗಿ ಉಪಚುನಾವಣೆಗಳು ಮುಂದಿನ ಚುನಾವಣೆಯ ದಿಕ್ಸೂಚಿ ಆಗುವುದಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.