ETV Bharat / state

'ನೋಡ್ರಿ ನನಿಗಿರೋದು ಎರಡು ಕೈ-ಕಾಲು, ಬಾಲ ಇಲ್ಲ; ರೇವಣ್ಣ ಯಾವ ಬಾಲ ಕಟ್ ಮಾಡ್ತಾರೋ ನಂಗೊತ್ತಿಲ್ಲ'

author img

By

Published : Jun 30, 2021, 5:14 PM IST

Updated : Jun 30, 2021, 6:49 PM IST

ಬಾಲ​ ಯಾರ ಬಳಿ ಇದೆ ಎಂಬುದು ನನಗೆ ಗೊತ್ತಿಲ್ಲ. ನಮಗಿರುವುದು ಕೇವಲ ಎರಡು ಕೈ ಕಾಲು ಎಂದು ಮಾಜಿ ಸಚಿವ ಹೆಚ್​ ಡಿ ರೇವಣ್ಣ ಅವರ ಹೇಳಿಕೆಗೆ ಸಂಸದ ಡಿ ಕೆ ಸುರೇಶ್​ ವ್ಯಂಗ್ಯವಾಡಿದ್ದಾರೆ.

d k suresh
ಸಂಸದ ಡಿಕೆ ಸುರೇಶ್​

ಹಾಸನ: ನೋಡ್ರಿ ನಮಗೆ ಇರೋದು ಎರಡು ಕೈ, ಎರಡು ಕಾಲು. ಅವರು ಎಲ್ಲಿ ಬಾಲ​ ಹಿಡ್ಕೋಂಡಿದ್ದಾರೋ ನನಗೆ ಗೊತ್ತಿಲ್ಲ. ಅವರು ಬಾಲ ಕಟ್ ಮಾಡಿಕೊಳ್ಳಕ್ಕಿದ್ರೆ ಮಾಡಿಕೊಳ್ಳಲಿ. ನನಗೇನಾಗಬೇಕು ಅಂತ ಮಾಜಿ ಸಚಿವ ಹೆಚ್​ ಡಿ ರೇವಣ್ಣನ ಹೇಳಿಕೆಗೆ ಸಂಸದ ಡಿ ಕೆ ಸುರೇಶ್​ ವ್ಯಂಗ್ಯವಾಡಿದರು.

ಸಂಸದ ಡಿ ಕೆ ಸುರೇಶ್​ ಪ್ರತಿಕ್ರಿಯೆ

ಜಿಲ್ಲೆಯ ದುದ್ದ ಹೋಬಳಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಹಾರ ವಿತರಣೆ ಮಾಡುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಲ ಯಾರ ಬಳಿ ಇದೆ ಎಂಬುದು ನನಗೆ ಗೊತ್ತಿಲ್ಲ ಎಂದು ಟಾಂಗ್​ ಕೊಟ್ಟರು.

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ನಾಯಕರೇ. ಚುನಾವಣೆ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆದು, ನಾಯಕತ್ವದ ವಿಚಾರದಲ್ಲಿ ಅಭಿಪ್ರಾಯ ಸಂಗ್ರಹಿಸಿ ದೆಹಲಿ ನಾಯಕರ ಒಪ್ಪಿಗೆ ಪಡೆಯುವುದು ಪದ್ಧತಿ. ಆದ್ರೆ ಈಗ ನಡೆಯುವ ಎಲ್ಲ ಚರ್ಚೆಗಳು ಕೂಡ ಅಪ್ರಸ್ತುತ. ಇವತ್ತಿನ ಸಂದರ್ಭದಲ್ಲಿ ನಾವು ಪಕ್ಷ ಸಂಘಟನೆ ಮತ್ತು ನಿರ್ವಹಣೆ ಮಾಡಬೇಕಾಗಿರುವುದು ಅತ್ಯವಶ್ಯಕ. ಇಂತಹ ಚರ್ಚೆ ಅನವಶ್ಯಕ. ನಾನು ಪಕ್ಷದವರಿಗೆ ಮನವಿ ಮಾಡುವುದಿಷ್ಟೇ, ಇಂತಹ ಚರ್ಚೆಗಳನ್ನು ಬಿಟ್ಟು ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಸಂಘಟಿತರಾಗಬೇಕು ಎಂದರು.

ಸಚಿವ ಸಿ ಪಿ ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ ಕೆ ಸುರೇಶ್, ನಮ್ಮ ಪಕ್ಷದಿಂದ ಸೈನಿಕ ಹೊರ ಹೋದ ಬಳಿಕ ನಮಗೂ ಅವರಿಗೂ ಯಾವುದೇ ರಾಜಕೀಯ ಸಂಬಂಧವಿಲ್ಲ. ಆದರೆ ಸಿ ಪಿ ಯೋಗೇಶ್ವರ್ ಪ್ರಬಲ ನಾಯಕತ್ವವನ್ನು ತೋರ್ಪಡಿಸಿಕೊಳ್ಳಲು ಡಿ ಕೆ ಶಿವಕುಮಾರ್ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ ಯೋಗೇಶ್ವರ್​​ಗೆ ಸ್ವಲ್ಪ ಕಿಮ್ಮತ್ತು ಸಿಗಲೆಂದು ನಮ್ಮ ಪಕ್ಷದ ನಾಯಕರ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ. 'ನಾವು ಪರೀಕ್ಷೆ ಬರೆದಿದ್ದೇವೆ. ಫಲಿತಾಂಶಕ್ಕೆ ಕಾಯುತ್ತಿದ್ದೇವೆ' ಎಂದಿದ್ದಾರೆ, ಯಾವ ಪರೀಕ್ಷೆ ಎಂದು ಹೇಳಬೇಕು ಅಲ್ವಾ ಎಂದು ಡಿ ಕೆ ಸುರೇಶ್​ ಪ್ರಶ್ನಿಸಿದರು.

ಕೋವಿಡ್ 19 ಸಂದರ್ಭದಲ್ಲಿ ಯಾವುದೇ ಪಕ್ಷದವರಾಗಲಿ, ರಾಜಕೀಯ ಚರ್ಚೆ ಮಾಡುವುದು ಸರಿಯಲ್ಲ. ಸರಿಯಾದ ಸಮಯದಲ್ಲಿ ಜನರು ಅಂತಹ ನಾಯಕರುಗಳಿಗೆ ಪಾಠ ಕಲಿಸುತ್ತಾರೆ ಎಂದು ಹೇಳಿದ್ರು.

ಲಸಿಕೆ ವಿಚಾರದಲ್ಲಿ ಬೆಂಗಳೂರು ನಗರವನ್ನು ಕೇಂದ್ರೀಕೃತ ಮಾಡಿಕೊಂಡು ಗ್ರಾಮೀಣ ಪ್ರದೇಶವನ್ನು ನಿರ್ಲಕ್ಷ್ಯ ಮಾಡುತ್ತಿದ್ದು, ಕೆಲಸವರು ಪ್ರಚಾರ ಪ್ರಿಯರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಲಸಿಕೆ ಎಂದರೇನು ಎಂಬುದೇ ಕೆಲವರಿಗೆ ಗೊತ್ತಿಲ್ಲ. ಅಂತಹ ಸ್ಥಳಕ್ಕೆ ಹೋಗಿ ಕೆಲಸ ಕೊಡಬೇಕು ಎಂದು ಸಲಹೆ ನೀಡಿದರು.

Last Updated : Jun 30, 2021, 6:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.