ಹಾಸನ: ಸಾವಿರಾರು ಜನರ ನೂಕುನುಗ್ಗಲಲ್ಲಿ ನಿಂತ ತಾಯಿಯೊಬ್ಬಳು ತನ್ನ ಮಗುವನ್ನು ಕೈಯಲ್ಲೆತ್ತಿ ಹಿಡಿದು ಕೂಗಿಕೊಳ್ಳುತ್ತಿರುವ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ಅರಕಲಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶ್ರೀಧರ್‌ಗೌಡ ಭಾನುವಾರ ವಿಶ್ವ ತಾಯಂದಿರ ದಿನ ಪ್ರಯುಕ್ತ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿನಿಮಾ ನಟ-ನಟಿಯರು ಭಾಗವಹಿಸಿದ್ದರು.
ಮಹಿಳೆಯರಿಗೆ ಸೀರೆ ವಿತರಣೆ ಮಾಡಲು ಆಯೋಜಕರು ಮುಂದಾದರು. ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆಯರಿಗೆ ಟೋಕನ್ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸೀರೆ ಪಡೆಯಲು ಸಾವಿರಾರು ಮಹಿಳೆಯರು ಮುಗಿಬಿದ್ದರು. ಮಹಿಳೆಯರ ಮಧ್ಯೆ ತಾಯಿ, ಮಗು ಸಿಲುಕಿಕೊಂಡಿದ್ದು, ಉಸಿರುಗಟ್ಟಿದ ವಾತಾವರಣದಲ್ಲಿ ಮಗು ಮೇಲೆತ್ತಿ ಗೋಳಾಡಿದ್ದಾರೆ.
ಇದನ್ನೂ ಓದಿ: ಅಮ್ಮನ ಪಾದ ತೊಳೆದು ಆಶೀರ್ವಾದ ಪಡೆದ ಬಿಜೆಪಿ ಕಾರ್ಯಕರ್ತರು