ETV Bharat / state

ಆಸ್ಪತ್ರೆಯಲ್ಲೇ ಶಾಸಕ ಶಿವಲಿಂಗೇಗೌಡ-ಎನ್ ಆರ್ ಸಂತೋಷ್ ನಡುವೆ ಮಾತಿನ ಚಕುಮಕಿ

ನಾಲಿಗೆ ಬಿಗಿ ಹಿಡಿದು ಮಾತಾಡಬೇಕು. ಬಾಯಿಗೆ ಬಂದಂತೆ ಮಾತನಾಡಿ ಗೌರವ ಕಳೆದುಕೊಳ್ಳಬೇಡಿ ಎಂದು ಎನ್ ಆರ್‌ ಸಂತೋಷ್‌ ಅವರಿಗೆ ಶಾಸಕ ಶಿವಲಿಂಗೇಗೌಡರು ಗದರಿದರು. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ತಕ್ಷಣ ಮಧ್ಯ ಪ್ರವೇಶಿಸಿದರು..

MLA Shivalinga Gowda Slams n. R. Santosh in Hasan
ಆಸ್ಪತ್ರೆಯಲ್ಲೇ ಶಾಸಕ ಶಿವಲಿಂಗೇಗೌಡ, ಎನ್. ಆರ್. ಸಂತೋಷ್ ನಡುವೆ ಮಾತಿನ ಚಕುಮಕಿ
author img

By

Published : Jan 3, 2021, 6:44 AM IST

Updated : Jan 3, 2021, 6:53 AM IST

ಹಾಸನ : ಎರಡು ದಿನಗಳ ಹಿಂದೆ ಅರಸೀಕೆರೆಯ ಬೈರಗೊಂಡನಹಳ್ಳಿ ಗ್ರಾಮದಲ್ಲಿ ಚುನಾವಣಾ ಫಲಿತಾಂಶದ ಹಿನ್ನೆಲೆ ಗೆದ್ದ ಮತ್ತು ಸೋತವರ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ 30ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರೇ ಇದಕ್ಕೆ ಕಾರಣ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಶಾಸಕ ಶಿವಲಿಂಗೇಗೌಡ-ಎನ್ ಆರ್ ಸಂತೋಷ್ ನಡುವೆ ಮಾತಿನ ಚಕುಮಕಿ

ಸೋಲು ಗೆಲುವಿನ‌ ವಿಚಾರಕ್ಕೆ ಮೊದಲು ಮಹಿಳೆಯರ ನಡುವೆ ಮಾತಿನ ಚಕುಮಕಿ ಶುರುವಾಗಿ ಬಳಿಕ ಅದು ವಿಕೋಪಕ್ಕೆ ತಿರುಗಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅರಸೀಕೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಸಂತೋಷ್ ಭೇಟಿ ನೀಡಿದ ವಿಷಯವನ್ನು ತಿಳಿದ ಶಾಸಕ ಕೆ ಎಂ ಶಿವಲಿಂಗೇಗೌಡ ಅವರು ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ವಾಪಸ್ ಹೋಗುತ್ತಿದ್ದ ವೇಳೆ ಶಾಸಕರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕುಮಕಿ ನಡೆದು ಕೆಲಕಾಲ ಗೊಂದಲದ ವಾತಾವaರಣ ಸೃಷ್ಠಿಯಾಯಿತು.

ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸಿ ಏನೂ ಗೊತ್ತಿಲ್ಲದಂತೆ ಹೋಗುತ್ತಿರುವ ಶಾಸಕರ ಕಾರನ್ನ ಅಡ್ಡಗಟ್ಟಿ ಮುಂದಕ್ಕೆ ಹೋಗುವುದಕ್ಕೆ ಬಿಡಬೇಡಿ. ಕಾರ್ಯಕರ್ತರಿಗೆ ಆಗಿರುವ ನಷ್ಟಕ್ಕೆ ಪರಿಹಾರ ಕೊಡಬೇಕು, ಎಲ್ಲಾ ಇಲ್ಲಿಯೇ ತೀರ್ಮಾನ ಆಗಬೇಕು ಎನ್ನುತ್ತಿದ್ದಂತೆ, ಶಾಸಕ ಶಿವಲಿಂಗೇಗೌಡರು, ತಕ್ಷಣ ತಿರುಗಿ ಯಾರು ಮಾತಾಡ್ತಿರೋದು.

ನಾಲಿಗೆ ಬಿಗಿ ಹಿಡಿದು ಮಾತಾಡಬೇಕು. ಬಾಯಿಗೆ ಬಂದಂತೆ ಮಾತನಾಡಿ ಗೌರವ ಕಳೆದುಕೊಳ್ಳಬೇಡಿ ಎಂದು ಎನ್ ಆರ್‌ ಸಂತೋಷ್‌ ಅವರಿಗೆ ಗದರಿದರು. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಪೊಲೀಸರು ಮಧ್ಯಸ್ಥಿಕೆ ವಹಿಸಿ ಶಾಸಕರನ್ನು ಸುರಕ್ಷಿತವಾಗಿ ಕಳಿಸಿಕೊಟ್ಟರು.

ಓದಿ : ಹೆದ್ದಾರಿಯಲ್ಲಿ ಕ್ಯಾಂಟರ್​​ ಅಪಘಾತ: ತುಂಡಾಗಿ ಬಿದ್ದ ಚಾಲಕನ ಬಲಗಾಲು

Last Updated : Jan 3, 2021, 6:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.