ETV Bharat / state

ದೇವೇಗೌಡರ ಕುಟುಂಬದ ಕಣ್ಣೀರಿಗೆ ಶಾಸಕ ಪ್ರೀತಂ ಗೌಡ ವ್ಯಂಗ್ಯ

ಗೌಡರ ಕುಟುಂಬದವರ ಕಣ್ಣೀರ ಹೊಳೆಗೆ ಶಾಸಕ ಪ್ರೀತಂ ಗೌಡ ವ್ಯಂಗ್ಯವಾಡಿದ್ದು, ಕಣ್ಣೀರು ಹಾಕುವ ಮೂಲಕ‌ ಮತ ಸೆಳೆಯಬಹುದು ಅಂದುಕೊಂಡಿದ್ದಾರೆ ಅಂತ ಕಿಡಿ ಕಾರಿದ್ದಾರೆ.

ಶಾಸಕ ಪ್ರೀತಂ ಗೌಡ ವ್ಯಂಗ್ಯ
author img

By

Published : Mar 14, 2019, 12:54 PM IST

ಹಾಸನ: ಹೊಳೆನರಸೀಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌಡರ ಕುಟುಂಬದವರ ಕಣ್ಣೀರ ಹೊಳೆಗೆ ಶಾಸಕ ಪ್ರೀತಂ ಗೌಡ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ದೂರವಾಣಿ ಮೂಲಕ ಮಾತನಾಡಿದ ಅವ್ರು, ಮಾನ್ಯ ದೇವೇಗೌಡರಿಗೆ ಕ್ಷೇತ್ರದ ಬಗ್ಗೆ ಪ್ರೀತಿ, ಭಾವನಾತ್ಮಕ ಸಂಬಂಧವಿದ್ದು, ಆ ರೀತಿ ಅವರು ಭಾವುಕರಾಗುವುದರಲ್ಲಿ ತಪ್ಪೇನಿಲ್ಲ. ಆ ಸಂಬಂಧ ದುಃಖ ಬರೋದು, ಕಣ್ಣೀರು ಹಾಕೋದು ಸಹಜ. ಆದರೆ, ಚುನಾವಣೆಗೆ ನಿಲ್ಲುವವರಿಂದ ಹಿಡಿದು, ಸಚಿವ ರೇವಣ್ಣ, ಭವಾನಿ‌ ರೇವಣ್ಣ ಸೇರಿದಂತೆ ಎಲ್ಲರೂ ಕಣ್ಣೀರು ಹಾಕಿರೋದು ಅಚ್ಚರಿ ಎಂದಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಈ ರೀತಿ ಭಾವನಾತ್ಮಕ ಗಿಮಿಕ್ ಅನ್ನು ಜನ ನಂಬುವುದಿಲ್ಲ. ಜಿಲ್ಲೆಯಲ್ಲಿ ಅಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಹಾಗೂ ಪುಲ್ವಾಮಾ ದಾಳಿಗೆ ಅಷ್ಟು ಯೋಧರು ಬಲಿಯಾದಾಗಲೂ ಇವರಿಗೆ ದುಃಖ‌ ಆಗ್ಲಿಲ್ಲ. ಚುನಾವಣೆಗೆ 25 ರಿಂದ 30 ದಿನ‌ಗಳಿರುವಾಗ ಕಣ್ಣೀರು ಹಾಕುವ ಮೂಲಕ‌ ಮತ ಸೆಳೆಯಬಹುದು ಅಂದುಕೊಂಡಿದ್ದಾರೆ. ಆದ್ರೆ ಜಿಲ್ಲೆಯ ಜನ ಪ್ರಬುದ್ಧರಿದ್ದಾರೆ. ಇವರ ಡ್ರಾಮಾಕ್ಕೆ ಯಾರೂ ಕಿವಿಗೊಡಲ್ಲ. ವೇದಿಕೆ ಮೇಲಿದ್ದವರೆಲ್ಲಾ ಅಳುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಪ್ರೀತಂ ಗೌಡ ಗೇಲಿ ಮಾಡಿದ್ದಾರೆ.

ಇನ್ನೂ ಹಾಸನ ಬಿಜೆಪಿ ಅಭ್ಯರ್ಥಿ ಯಾರು ಎಂಬ ಬಗ್ಗೆ ತೀರ್ಮಾನವಾಗಿಲ್ಲ. ಈ ಬಗ್ಗೆ ದೆಹಲಿಯಲ್ಲಿ ವರಿಷ್ಠರು ತೀರ್ಮಾನ ಮಾಡ್ತಾರೆ. ಮಾಜಿ ಸಚಿವ ಎ. ಮಂಜು ಬಿಜೆಪಿ ಸೇರ್ಪಡೆ ಕುರಿತು ಮಾಹಿತಿ ಇಲ್ಲ. ಎ.ಮಂಜು ಆದಿಯಾಗಿ ಹೈಕಮಾಂಡ್​ ಯಾರನ್ನೇ ಅಭ್ಯರ್ಥಿ ಎಂದು ಘೋಷಿಸಿದರೂ ಅವರಿಗೆ ನನ್ನ ಬೆಂಬಲವಿದೆ‌ ಎಂದು ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.

Intro:Body:

ಟಾಪ್​, ರಾಜ್ಯ 

ದೇವೇಗೌಡರ ಕುಟುಂಬದ ಕಣ್ಣೀರಿಗೆ ಶಾಸಕ ಪ್ರೀತಂ ಗೌಡ ವ್ಯಂಗ್ಯ 

ಹಾಸನ: ಹೊಳೆನರಸೀಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌಡರ ಕುಟುಂಬದವರ ಕಣ್ಣೀರ ಹೊಳೆಗೆ ಶಾಸಕ ಪ್ರೀತಂ ಗೌಡ ವ್ಯಂಗ್ಯವಾಡಿದ್ದಾರೆ. 

ಈ ಬಗ್ಗೆ ಮಾತನಾಡಿದ ಅವ್ರು, ಮಾನ್ಯ ದೇವೇಗೌಡರಿಗೆ ಕ್ಷೇತ್ರದ ಬಗ್ಗೆ ಪ್ರೀತಿ, ಭಾವನಾತ್ಮಕ ಸಂಬಂಧವಿದ್ದು, ಆ ರೀತಿ ಅವರು ಭಾವುಕರಾಗುವುದರಲ್ಲಿ ತಪ್ಪೇನಿಲ್ಲ. ಆ ಸಂಬಂಧ ದುಃಖ ಬರೋದು, ಕಣ್ಣೀರು ಹಾಕೋದು ಸಹಜ. ಆದರೆ, ಚುನಾವಣೆಗೆ ನಿಲ್ಲುವವರಿಂದ ಹಿಡಿದು, ಸಚಿವ ರೇವಣ್ಣ, ಭವಾನಿ‌ ರೇವಣ್ಣ ಸೇರಿದಂತೆ ಎಲ್ಲರೂ ಕಣ್ಣೀರು ಹಾಕಿರೋದು ಅಚ್ಚರಿ ಎಂದಿದ್ದಾರೆ. 

ಚುನಾವಣೆ ಸಂದರ್ಭದಲ್ಲಿ ಈ ರೀತಿ ಭಾವನಾತ್ಮಕ ಗಿಮಿಕ್ ಅನ್ನು ಜನ ನಂಬುವುದಿಲ್ಲ. ಜಿಲ್ಲೆಯಲ್ಲಿ ಅಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಹಾಗೂ ಪುಲ್ವಾಮಾ ದಾಳಿಗೆ ಅಷ್ಟು ಯೋಧರು ಬಲಿಯಾದಾಗಲೂ ಇವರಿಗೆ ದುಃಖ‌ ಆಗ್ಲಿಲ್ಲ. ಚುನಾವಣೆಗೆ 25 ರಿಂದ 30 ದಿನ‌ಗಳಿರುವಾಗ ಕಣ್ಣೀರು ಹಾಕುವ ಮೂಲಕ‌ ಮತ ಸೆಳೆಯಬಹುದು ಅಂದುಕೊಂಡಿದ್ದಾರೆ. ಆದ್ರೆ ಜಿಲ್ಲೆಯ ಜನ ಪ್ರಬುದ್ಧರಿದ್ದಾರೆ. ಇವರ ಡ್ರಾಮಾಕ್ಕೆ ಯಾರೂ ಕಿವಿಗೊಡಲ್ಲ. ವೇದಿಕೆ ಮೇಲಿದ್ದವರೆಲ್ಲಾ ಅಳುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಪ್ರೀತಂ ಗೌಡ ಗೇಲಿ ಮಾಡಿದ್ದಾರೆ.

ಇನ್ನೂ ಹಾಸನ ಬಿಜೆಪಿ ಅಭ್ಯರ್ಥಿ ಯಾರು ಎಂಬ ಬಗ್ಗೆ ತೀರ್ಮಾನವಾಗಿಲ್ಲ. ಈ ಬಗ್ಗೆ ದೆಹಲಿಯಲ್ಲಿ ವರಿಷ್ಠರು ತೀರ್ಮಾನ ಮಾಡ್ತಾರೆ. ಮಾಜಿ ಸಚಿವ ಎ. ಮಂಜು ಬಿಜೆಪಿ ಸೇರ್ಪಡೆ ಕುರಿತು ಮಾಹಿತಿ ಇಲ್ಲ. ಎ.ಮಂಜು ಆದಿಯಾಗಿ ಹೈಕಮಾಂಡ್​ ಯಾರನ್ನೇ ಅಭ್ಯರ್ಥಿ ಎಂದು ಘೋಷಿಸಿದರೂ ಅವರಿಗೆ ನನ್ನ ಬೆಂಬಲವಿದೆ‌ ಎಂದು ಶಾಸಕ ಪ್ರೀತಂ ಗೌಡ ಹೇಳಿದ್ದಾರೆ. 

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಹಾಸನ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.