ETV Bharat / state

ಹಾಸನದಲ್ಲಿ ದೇವೇಗೌಡ ಕುಟುಂಬದಿಂದ ಯಾರೇ ಸ್ಪರ್ಧಿಸಿದರೂ ಗೆಲುವು ನನ್ನದೇ.. ಶಾಸಕ ಪ್ರೀತಂ ಗೌಡ

ಹಾಸನದಲ್ಲಿ ಸ್ಪರ್ಧೆ ಮಾಡಿದರೆ ಮತದಾರರು ಅಭಿವೃದ್ಧಿ ಕೆಲಸ ನೋಡಿ ಯಾರಿಗೆ ವೋಟ್ ಹಾಕಬೇಕೆಂಬುದನ್ನ ನಿರ್ಧಾರ ಮಾಡಲಿದ್ದಾರೆ. ದಯಮಾಡಿ ಕೂಡಲೇ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ನಿಮ್ಮ ಕುಟುಂಬದಿಂದ ಯಾರು ಅಭ್ಯರ್ಥಿ ಎಂಬುದನ್ನು ಶೀಘ್ರದಲ್ಲಿಯೇ ಘೋಷಣೆ ಮಾಡಿದರೆ ಉತ್ತಮ ಎಂದು ಶಾಸಕ ಪ್ರೀತಂ ಗೌಡ ಹೇಳಿದರು.

author img

By

Published : Jan 29, 2022, 3:26 PM IST

ಪ್ರೀತಂ ಗೌಡ
ಪ್ರೀತಂ ಗೌಡ

ಹಾಸನ: ರೇವಣ್ಣನವರು ಪದೇ ಪೇದೆ ನನ್ನ ವಿಚಾರ ತೆಗೆದು ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಾಗಲಿದ್ದು, ಅವರ ಜೆಡಿಎಸ್​​​ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ. ಹಾಸನಕ್ಕೆ ಮಾಜಿ ಸಚಿವ ಎಚ್ ಡಿ ರೇವಣ್ಣ, ಅವರ ಪತ್ನಿ ಭವಾನಿ ರೇವಣ್ಣ ಅಥವಾ ಅವರ ಕುಟುಂಬದಿಂದ ಯಾರಾದರು ಬಂದು ನನ್ನ ವಿರುದ್ಧ ಚುನಾವಣೆ ಎದುರಿಸಲಿ. ನಾನು ಚುನಾವಣೆಗೆ ಸಿದ್ಧನಾಗಿದ್ದೇನೆ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ದೇವೇಗೌಡರ ಕುಟುಂಬಕ್ಕೆ ಸವಾಲು ಹಾಕಿದ್ದಾರೆ.

ಬಿಜೆಪಿ ಶಾಸಕ ಪ್ರೀತಂ ಗೌಡ ಹೇಳಿಕೆ

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಪ್ರೀತಂ ಗೌಡ 25 ಸಾವಿರ ಮತಗಳ ಅಂತರದಿಂದ ದೇವೇಗೌಡರ ಕುಟುಂಬವನ್ನು ಸೋಲಿಸುವ ಮೂಲಕ ಹಾಸನದಲ್ಲಿ ಮತ್ತೊಮ್ಮೆ ಶಾಸಕರಾಗುತ್ತಾರೆ ಎಂದು ದೇವೇಗೌಡರ ಕುಟುಂಬದ ಜ್ಯೋತಿಷ್ಯರೊಬ್ಬರು ಹೇಳಿದ್ದಾರಂತೆ. ಅದರಂತೆ ಅವರ ಕುಟುಂಬದಿಂದ ಯಾರೇ ನನ್ನ ವಿರುದ್ಧ ಸ್ಪರ್ಧೆಸಿದರು ನಾನು ಚುನಾವಣೆಗೆ ಸಿದ್ಧನಿದ್ದೇನೆ. ಯಾರನ್ನು ಗೆಲ್ಲಿಸಬೇಕೆಂದು ಜನರು ತೀರ್ಮಾನ ಮಾಡುತ್ತಾರೆ ಎಂದರು.

ಹಾಸನದಲ್ಲಿ ಸ್ಪರ್ಧಿಸಿದರೆ ಮತದಾರರು ಅಭಿವೃದ್ಧಿ ಕೆಲಸ ನೋಡಿ ಯಾರಿಗೆ ವೋಟ್ ಹಾಕಬೇಕೆಂಬುದನ್ನ ನಿರ್ಧಾರ ಮಾಡಲಿದ್ದಾರೆ. ದಯಮಾಡಿ ಕೂಡಲೇ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ನಿಮ್ಮ ಕುಟುಂಬದಿಂದ ಯಾರು ಅಭ್ಯರ್ಥಿ ಎಂಬುದನ್ನು ಶೀಘ್ರದಲ್ಲಿಯೇ ಘೋಷಣೆ ಮಾಡಿದರೆ ಉತ್ತಮ ಎಂದು ಪುನರುಚ್ಚಾರ ಮಾಡುವ ಮೂಲಕ ದೇವೇಗೌಡರ ಕುಟುಂಬಕ್ಕೆ ಸವಾಲು​ ಹಾಕಿದ್ದಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.