ETV Bharat / state

'ರೆಮ್​ಡಿಸಿವಿರ್ ಕಾಳಸಂತೆಯಲ್ಲಿ ಮಾರುವವರನ್ನು ನಡುಬೀದಿಯಲ್ಲಿ ನಿಲ್ಲಿಸಿ ಶೂಟ್‌ ಮಾಡಬೇಕು' - ಹಿಮ್ಸ್ ಆಸ್ಪತ್ರೆ

ರೆಮ್​ಡಿಸಿವಿರ್ ಇಂಜೆಕ್ಷನ್ ಯಾರಿಗೆ ಕೊಡಬೇಕು ಎಂಬ ಬಗ್ಗೆ ತಜ್ಞರ ಕಮಿಟಿ ಮಾಡಿದ್ದೇವೆ. ಪ್ರಬಲರು, ರಾಜಕಾರಣಿಗಳ ಬೆಂಬಲಿಗರೆನ್ನದೆ ಅವಶ್ಯಕವಿರುವವರಿಗೆ ಮಾತ್ರ ರೆಮ್​ಡಿಸಿವರ್ ನೀಡಬೇಕು. ಅನವಶ್ಯಕವಾಗಿ ಈ ಚುಚ್ಚುಮದ್ದು ಸಂಗ್ರಹಿಸಿಟ್ಟು ಅಭಾವ ತೋರಿಸಿದ್ರೆ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ ಎಂದು ಶಾಸಕ ಪ್ರೀತಂ ಜೆ.ಗೌಡ ಎಚ್ಚರಿಸಿದ್ದಾರೆ.

MLa preetham gowda
ಶಾಸಕ ಪ್ರೀತಂ ಜೆ.ಗೌಡ
author img

By

Published : May 5, 2021, 7:08 AM IST

Updated : May 5, 2021, 9:02 AM IST

ಹಾಸನ: ರೆಮ್​ಡಿಸಿವಿರ್ ಚುಚ್ಚುಮದ್ದನ್ನು ಕಾಳಸಂತೆಯಲ್ಲಿ ಮಾರುವವರನ್ನು ಗಲ್ಲಿಗೇರಿಸಬೇಕು ಅಥವಾ ನಡು ಬೀದಿಯಲ್ಲಿ ನಿಲ್ಲಿಸಿ ಶೂಟ್ ಮಾಡಬೇಕು. ಹಣದಾಸೆಗೆ ಆ ರೀತಿ ಮಾಡುವವರು ಮನುಷ್ಯರಲ್ಲ, ರಾಕ್ಷಸರು. ಅವರಿಗೆ ದೇವರು ಖಂಡಿತಾ ಒಳ್ಳೆಯದು ಮಾಡಲ್ಲ ಎಂದು ಶಾಸಕ ಪ್ರೀತಂ ಜೆ.ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಹಾಸನ ಶಾಸಕ ಪ್ರೀತಂ ಜೆ.ಗೌಡ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೆಮ್​ಡಿಸಿವರ್ ಇಂಜೆಕ್ಷನ್ ಯಾರಿಗೆ ಕೊಡಬೇಕು ಎಂಬ ಬಗ್ಗೆ ತಜ್ಞರ ಕಮಿಟಿ ಮಾಡಿದ್ದೇವೆ. ಪ್ರಬಲರು, ರಾಜಕಾರಣಿಗಳ ಬೆಂಬಲಿಗರೆನ್ನದೆ ಅವಶ್ಯಕವಿರುವವರಿಗೆ ಮಾತ್ರ ರೆಮ್​ಡಿಸಿವಿರ್ ನೀಡಬೇಕು. ಅನವಶ್ಯಕವಾಗಿ ಈ ಇಂಜೆಕ್ಷನ್ ಸಂಗ್ರಹಿಸಿಟ್ಟು ಅಭಾವ ತೋರಿಸಿದ್ರೆ ಕ್ರಿಮಿನಲ್ ಕೇಸ್ ಹಾಕಲಾಗುತ್ತೆ ಎಂದರು.

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಜಿಲ್ಲೆಯ ಬಿಪಿಎಲ್ ಕಾರ್ಡ್​ದಾರರಿಗೆ ಶೇಕಡಾ 50ರಷ್ಟು ಆಸ್ಪತ್ರೆ ವೆಚ್ಚವನ್ನು ಭರಿಸುತ್ತೇನೆ. ಸ್ವ್ಯಾಬ್ ಟೆಸ್ಟ್ ವರದಿ 24 ಗಂಟೆಯಲ್ಲಿ ಬರುವಂತೆ ವ್ಯವಸ್ಥೆ ಮಾಡಿದ್ದೇವೆ. ಯಾರ ಕೈ-ಕಾಲು ಹಿಡಿದಾದ್ರೂ ಆಕ್ಸಿಜನ್ ತರುತ್ತೇನೆ. ಹಿಮ್ಸ್​​​​​​ನಲ್ಲಿ ಆಕ್ಸಿಜನ್ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇನೆ. ಅದು ನನ್ನ ಜವಾಬ್ದಾರಿ ಎಂದು ಭರವಸೆ ನೀಡಿದರು.

ಹಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಮೀಸಲಿಟ್ಟ ಹಾಸಿಗೆಯನ್ನು 400 ರಿಂದ 600ಕ್ಕೆ ಏರಿಸಲಾಗುವುದು. ಈ 600 ಬೆಡ್​ಗೂ ಆಕ್ಸಿಜನ್​ ವ್ಯವಸ್ಥೆ ನೋಡಿಕೊಳ್ಳಲಾಗುವುದು. ಆಕ್ಸಿಜನ್ ಅವಶ್ಯಕತೆ ಇರುವವರಿಗೆ ಹಿಮ್ಸ್ ಆಸ್ಪತ್ರೆಯ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಕೊಡಲಾಗುವುದು. ಉಳಿದವರಿಗೆ ಹಳೇ ಕೋರ್ಟ್ ಬಿಲ್ಡಿಂಗ್​​​​​​ನಲ್ಲಿ ಚಿಕಿತ್ಸೆ ಕೊಡುತ್ತೇವೆ. ಹಾಸನದಲ್ಲಿ ಯಾವ ರೋಗಿಯೂ ಕೂಡ ಆಸ್ಪತ್ರೆಗೆ ಬಂದು ಬೆಡ್ ಸಿಗದೆ ವಾಪಸ್ ಹೋಗದಂತೆ ನೋಡಿಕೊಳ್ಳುತ್ತೇನೆ. ಜನತೆ ದಯಮಾಡಿ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: ಮೈಸೂರಲ್ಲಿ ಆಕ್ಸಿಜನ್​ ಪೈಪ್​ ಬ್ಲಾಕ್​.. ಭಾರಿ ಅನಾಹುತ ತಪ್ಪಿಸಿದ ಅಗ್ನಿ ಶಾಮಕ ದಳ

Last Updated : May 5, 2021, 9:02 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.