ETV Bharat / state

ನನಗೂ ಪ್ರಜ್ವಲ್​ಗೂ ಜನರೇಷನ್ ಗ್ಯಾಪ್ ಇದೆ: ಶಾಸಕ ಪ್ರೀತಂ ಜೆ.ಗೌಡ

ಜಿಲ್ಲೆಯಲ್ಲಿ 25 ವರ್ಷದಿಂದ ಮಾಡಲಾಗದ ಏರ್ ಪೋರ್ಟ್ ಯೋಜನೆಯನ್ನ ನಾನು ತಂದು ತೋರಿಸುವೆ. ಜೊತೆಗೆ ಸಹಕಾರ ನೀಡುವೆ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದ್ದಾರೆ.

author img

By

Published : Feb 1, 2021, 9:47 PM IST

MLA Preetam J gowda
ಶಾಸಕ ಪ್ರೀತಂ ಜೆ.ಗೌಡ

ಹಾಸನ: ಜಿಲ್ಲೆಗೆ ಸಿಟಿ ಟೂ ಸಿಟಿ ಕನಕ್ಟ್ ಮಾಡುವ ಏರ್ ಪೋರ್ಟ್ ಬೇಡ, ಇಂಟರ್ ನ್ಯಾಷನಲ್ ಏರ್ ಪೋರ್ಟ್ ಮಾಡುವ ಕನಸು ದೇವೇಗೌಡರದ್ದು, ಎಂದು ಹೇಳಿದ್ದ ಸಂಸದ ಪ್ರಜ್ವಲ್ ರೇವಣ್ಣಗೆ ಶಾಸಕ ಪ್ರೀತಂ ಜೆ.ಗೌಡ ತಿರುಗೇಟು ನೀಡಿದ್ದು, ಅವರ ಕನಸಿಗೆ ನಾನೂ ಸಂಪೂರ್ಣ ಸಹಕಾರ ಕೊಡುವುದಾಗಿ ಹೇಳಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷದಿಂದ ಸನ್ಮಾನ್ಯ ದೇವೇಗೌಡರು ಸಂಸದರಾಗಿ ಈಗ ಪ್ರಜ್ವಲ್ ರೇವಣ್ಣ ಅವರು ಸಂಸದರಾಗಿದ್ದಾರೆ. ಅವರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ಮಾಡುತ್ತಾರೋ! ಇಲ್ಲವೋ ನನಗೆ ಗೊತ್ತಿಲ್ಲ. ಅವರಿಗೆ ಜಿಲ್ಲೆಯ ಜನತೆ ಪರವಾಗಿ, ಬಿಜೆಪಿ ಶಾಸಕನಾಗಿ ಸಂಪೂರ್ಣ ಸಹಕಾರ ಕೊಡುವುದರ ಜೊತೆಗೆ ಕೇಂದ್ರ ನಾಯಕರ ಗಮನ ಸೆಳೆಯುವ ವೇಳೆ ನಾನು ಕೂಡಾ ಭಾಗವಹಿಸುತ್ತೇನೆ ಎಂದರು.

ಶಾಸಕ ಪ್ರೀತಂ ಜೆ.ಗೌಡ

ಜಿಲ್ಲೆಯು ಈಗಲೂ ಕೂಡ ವಿಶ್ವ ಭೂಪಟದಲ್ಲಿದ್ದು, ಹೊಯ್ಸಳರ ನಾಡು ಬೇಲೂರು - ಹಳೇಬೀಡು ಮತ್ತು ಶ್ರವಣಬೆಳಗೊಳದ ಗೋಮಟೇಶ್ವರ ಅದೇ ರೀತಿ ಹಾಸನ ಜಿಲ್ಲೆಯ ಜನ ಹೆಚ್.ಡಿ. ದೇವೇಗೌಡರನ್ನು ಪ್ರಧಾನಿ ಮಾಡುವುದರ ಮೂಲಕ ಜಿಲ್ಲೆಯನ್ನು ದೇಶಕ್ಕೆ ಪ್ರತಿಷ್ಠಿತ ಜಿಲ್ಲೆಯನ್ನಾಗಿ ಮಾಡಿದ್ದಾರೆ. ಯಾವೆಲ್ಲಾ ಕಾರ್ಯಕ್ರಮ ಯಾವ ಸಮಯದಲ್ಲಿ ಆಗಬೇಕು ಎಂಬುದನ್ನು ಯಾರು ಚುನಾಯಿತ ಜನಪ್ರತಿನಿಧಿಗಳಿರುತ್ತಾರೆ ಅವರು ನಿರ್ವಹಿಸುವ ಅವಶ್ಯಕತೆ ಇದೆ ಎಂದರು.

ನನಗೂ ಸಂಸದರಿಗೂ ಜನರೇಷನ್ ಗ್ಯಾಪ್ ಇದ್ದು, ನಮಗಿಂತ 8 ವರ್ಷ ಚಿಕ್ಕವರು. ಅವರ ಮನಸ್ಥಿತಿಯಲ್ಲಿ ವಿಶ್ವ ಭೂಪಟಕ್ಕೆ ಹಾಸನ ಜಿಲ್ಲೆ ಸೇರಬೇಕು, ಸಿಟಿ ಟು ಸಿಟಿ ಬೇಡ ಎಂದರೇ ಅದಕ್ಕೆ ವಿರೋಧ ಮಾಡುವುದಿಲ್ಲ. ನನಗೂ ರೇವಣ್ಣನವರಿಗೂ ಯಾವ ರೀತಿ ಜನರೇಷನ್ ಗ್ಯಾಪ್ ಇದೇಯೋ ಅದೆ ರೀತಿ ನನಗೂ ಪ್ರಜ್ವಲ್​ಗೂ ಜನರೇಷನ್ ಗ್ಯಾಪ್ ಇದೆ. ಈಗ ರೇವಣ್ಣ ನನಗಿಂತ ಬಹಳ ಹಿಂದೆ ಇದ್ದಾರೆ. ಹಾಗೇ ಸಂಸದರು ನನಗಿಂತ ಮುಂದಿದ್ದಾರೆ. ನನ್ನ ಸಲಹೆಯನ್ನು ಹೇಗೆ ರೇವಣ್ಣನವರು ತೆಗೆದುಕೊಳ್ಳುತ್ತಾರೆ. ಅದೇ ರೀತಿ ಪ್ರಜ್ವಲ್ ಅವರ ಸಲಹೆ ಸ್ವೀಕರಿಸುವುದಾಗಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.