ETV Bharat / state

ಕಾಫಿ ಬೆಳೆಗಾರರ ಬಗ್ಗೆಯೂ ಸರ್ಕಾರ ಚಿಂತನೆ ಮಾಡಬೇಕು: ಶಾಸಕ ಹೆಚ್.ಕೆ.ಕುಮಾರಸ್ವಾಮಿ - MLA H. K. Kumaraswamy reaction

10 ಹೆಚ್​ಪಿ ಮೋಟಾರ್ ಖದೀದಿಸಲು ಸರ್ಕಾರ ರಾಜ್ಯದ ಎಲ್ಲಾ ರೈತರಿಗೂ ವಿನಾಯಿತಿ ನೀಡುತ್ತಿದೆ. ಹಾಗೆಯೇ ಕಾಫಿ ಬೆಳೆಗಾರರು ಕೂಡ ಸಂಕಷ್ಟದಲ್ಲಿದ್ದಾರೆ ಎಂಬುದನ್ನರಿತು ಅವರಿಗೂ ಕೂಡ ಮೋಟಾರ್ ಖರೀದಿ ವೇಳೆ ವಿನಾಯಿತಿ ನೀಡಬೇಕು ಎಂದು ಶಾಸಕ ಹೆಚ್.ಕೆ.ಕುಮಾರಸ್ವಾಮಿ ಆಗ್ರಹಿಸಿದರು.

MLA  H. K. Kumaraswamy reaction
ಶಾಸಕ ಹೆಚ್. ಕೆ. ಕುಮಾರಸ್ವಾಮಿ
author img

By

Published : Mar 20, 2021, 10:16 PM IST

ಹಾಸನ: ಕಾಫಿ ಬೆಳೆಗಾರರ ಸಮಸ್ಯೆ ಹಳೆಯದು. ಈ ಭಾಗದ ಜನಪ್ರತಿನಿಧಿಗಳು ಮತ್ತು ಶಾಸಕರುಗಳನ್ನು ಒಳಗೊಂಡಂತೆ ಎಲ್ಲರೂ ಹೋರಾಟ ಮಾಡುತ್ತಿದ್ದರೂ ಇನ್ನೂ ಜೀವಂತವಾಗಿ ಉಳಿದಿದೆ ಎಂದು ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ರು.

ಶಾಸಕ ಹೆಚ್.ಕೆ.ಕುಮಾರಸ್ವಾಮಿ ಪ್ರತಿಕ್ರಿಯೆ

ಸಕಲೇಶಪುರದಲ್ಲಿ ನಡೆದ ಕಾಫಿ ಬೆಳೆಗಾರ ಸಂಘದ ವಾರ್ಷಿಕ ಮಹಾಸಭೆ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಅತೀ ಹೆಚ್ಚು ಸಂಕಷ್ಟಕ್ಕೆ ಸಿಲುಕಿದವರು ಕಾಫಿ ಬೆಳೆಗಾರರು. 10 ಹೆಚ್​ಪಿ ಮೋಟಾರ್ ಖದೀದಿಸಲು ಸರ್ಕಾರ ರಾಜ್ಯದ ಎಲ್ಲಾ ರೈತರಿಗೂ ವಿನಾಯಿತಿ ನೀಡುತ್ತಿದೆ. ಹಾಗೆಯೇ ಕಾಫಿ ಬೆಳೆಗಾರರು ಕೂಡ ಸಂಕಷ್ಟದಲ್ಲಿದ್ದಾರೆ ಎಂಬುದನ್ನರಿತು ಅವರಿಗೂ ಕೂಡ ಮೋಟಾರ್ ಖರೀದಿ ವೇಳೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.

ಸಕಲೇಶಪುರ ತಾಲೂಕಿಗೆ ಬರುವಂತಹ ಅನುದಾನವನ್ನು ಬೇರೆ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ಕೊಂಡೊಯ್ಯುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, 25 ಕೋಟಿ ರೂ. ಮಂಜೂರಾಗಿರುವುದು ನಿಜ. ಇದರಲ್ಲಿ 12 ಕೋಟಿ ರೂ. ಹಾಸನಕ್ಕೆ ಹೋಗಿದ್ದು, ಇದ್ರ ಬಗ್ಗೆ ಲೋಕೋಪಯೋಗಿ ಸಚಿವರ ಗಮನಕ್ಕೆ ತಂದಿದ್ದೇನೆ. ಇದು ಮತ್ತೆ ಪುನರಾವರ್ತನೆಯಾದರೆ ಈ ಭಾಗದ ಜನತೆ ಸಹಿಸುವುದಿಲ್ಲ. ಇದು ಉಸ್ತುವಾರಿ ಸಚಿವರ ಗಮನಕ್ಕೆ ಬಂದು ಜಿಲ್ಲೆಯ ಅತಿವೃಷ್ಟಿ-ಅನಾವೃಷ್ಟಿ ಯಾವ ಜಿಲ್ಲೆಯಲ್ಲಿ ಎಷ್ಟಾಗಿದೆ ಎಂಬುದನ್ನು ಪರಿಗಣಿಸಿ ಹಂಚಿಕೆ ಮಾಡಬೇಕು. ಮೊದಲಿಗೆ ಸಕಲೇಶಪುರಕ್ಕೆ 12 ಕೋಟಿ ರೂ. ನೀಡಿ ನಂತರ ಉಳಿದ ಹಣವನ್ನು ಬೇರೆ ಬೇರೆ ತಾಲೂಕಿಗೆ ಹಂಚಿಕೆ ಮಾಡಿ. ಹಾಗೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ತಮ್ಮ ಕಚೇರಿಯ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಉಪಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕೆ:

ಯಾವ ಪಕ್ಷ ಆಡಳಿತದಲ್ಲಿ ಇರುತ್ತದೆಯೋ ಆ ಪಕ್ಷ ಗೆಲುವಿನ ನಗೆ ಬೀರೋದು ಸಹಜ. ಆದರೆ ನಾವು ಸುಮ್ಮನೆ ಕೂತಿಲ್ಲ. ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕೂಡ ಕಣಕ್ಕಿಳಿಸಿ ಸಮರಕ್ಕೆ ಸಜ್ಜು ಮಾಡುತ್ತೇವೆ ಎಂದು ಹೆಚ್.ಕೆ.ಕುಮಾರಸ್ವಾಮಿ ಹೇಳಿದರು.

ಸಕಲೇಶಪುರದಲ್ಲಿ ಮಾತನಾಡಿದ ಅವರು, ಈವರೆಗೆ ನಡೆದ ಬಹುತೇಕ ಉಪಚುನಾವಣೆಗಳು ಯಾವ ಪಕ್ಷ ಆಡಳಿತದಲ್ಲಿ ಇರುತ್ತದೆಯೋ ಆ ಪಕ್ಷಕ್ಕೆ ಮತದಾರರು ಮತ ಹಾಕಿರುವುದು ಕಂಡಿದ್ದೀರಾ. ಇದಕ್ಕೆ ಕೆ.ಆರ್. ಪೇಟೆ ಚುನಾವಣೆ ಉದಾಹರಣೆಯಾಗಿದೆ. ಆಡಳಿತ ಪಕ್ಷದಲ್ಲಿ ಇರುವ ಅಭ್ಯರ್ಥಿಗೆ ನಾವು ಮತ ಹಾಕಿದರೆ ನಮ್ಮ ಕ್ಷೇತ್ರ ಅಭಿವೃದ್ಧಿ ಆಗಬಹುದು ಎಂಬ ಭಾವನೆ ಮತದಾರರದ್ದು. ಹಾಗಾಗಿ ಬಿಜೆಪಿಯವರು ನಾವು ಈ ಬಾರಿ ಗೆಲ್ಲುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ. ಆದರೆ ವಿರೋಧ ಪಕ್ಷದವರು ಇದ್ದಾರೆ ಎಂಬುದನ್ನು ತೋರಿಸಬೇಕು. ನಾವು ಸುಮ್ಮನೆ ಕೂರುವುದಕ್ಕೆ ಆಗುವುದಿಲ್ಲ. ಹಾಗಾಗಿ ನಾವು ಕೂಡ ಪ್ರಬಲ ವ್ಯಕ್ತಿಯನ್ನು ಕ್ಷೇತ್ರದಲ್ಲಿ ನಿಲ್ಲಿಸಲು ಸಿದ್ಧವಾಗುತ್ತಿದ್ದೇವೆ ಎಂದರು.

ಇನ್ನು ದೊಡ್ಡಮನೆಯ ಸೊಸೆಯಾಗಿರುವ ಭವಾನಿ ರೇವಣ್ಣ ವಿಧಾನಸಭಾ ಚುನಾವಣಾ ಅಖಾಡಕ್ಕೆ ಧುಮುಕಲು ಸಜ್ಜಾಗುತ್ತಿದ್ದಾರೆ ಎಂಬ ಪ್ರಶ್ನೆಗೆ ಮಾತನಾಡಿದ ಅವರು, ಒಬ್ಬ ಹೆಣ್ಣು ಮಗಳಾಗಿ ಸಂಘಟನೆ ಮಾಡುತ್ತಿರುವುದು ಸತ್ಯ. ಆದರೆ ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಆದರೆ ಅವರು ನಿಲ್ಲುವುದು ಬಿಡುವುದು ವರಿಷ್ಠರ ತೀರ್ಮಾನಕ್ಕೆ ಬಿಟ್ಟದ್ದು. ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಅಷ್ಟರೊಳಗೆ ಯಾವೆಲ್ಲಾ ಬದಲಾವಣೆಯಾಗುತ್ತದೆ ಎಂಬುದನ್ನ ಮುಂದೆ ನೀವೇ ನೋಡುತ್ತೀರಾ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.