ETV Bharat / state

'ಮುಂದಿನ ದಿನಗಳಲ್ಲಿ ಬ್ಯಾಟರಿ ಹಾಕಿ ಕಾಂಗ್ರೆಸ್​ ಪಕ್ಷವನ್ನು ಹುಡುಕುವಂತಹ ಪರಿಸ್ಥಿತಿ ಬರುತ್ತೆ' - ಹಾಸನದಲ್ಲಿ ಸಚಿವ ಆರ್.ಅಶೋಕ್ ಹೇಳಿಕೆ

ಆರ್​ಎಸ್​ಎಸ್ ರಾಜಕೀಯ ಪಕ್ಷವಲ್ಲ. ಅದು ಒಂದು ಸಾರ್ವಜನಿಕ ಸಂಸ್ಥೆ. ನಾನು ಕೂಡ ಅಲ್ಲಿಂದಲೇ ಬಂದವನು. ಮೊದಲು ದೇಶದಲ್ಲಿ ಕುಟುಂಬ ಸಂಪ್ರದಾಯ ಕಡಿತಗೊಳ್ಳಬೇಕು. ಈಗಲೇ ಕಾಂಗ್ರೆಸ್ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಬ್ಯಾಟರಿ ಹಾಕಿ ಪಕ್ಷವನ್ನು ಹುಡುಕುವಂತಹ ಪರಿಸ್ಥಿತಿ ಬರುತ್ತೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

Minister R Ashok statement on Congress in Hassan
ಕಂದಾಯ ಸಚಿವ ಆರ್.ಅಶೋಕ್
author img

By

Published : Sep 26, 2021, 7:31 PM IST

Updated : Sep 26, 2021, 10:35 PM IST

ಹಾಸನ: ಈಗಲೇ ಕಾಂಗ್ರೆಸ್ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಬ್ಯಾಟರಿ ಹಾಕಿ ಪಕ್ಷವನ್ನು ಹುಡುಕುವಂತಹ ಪರಿಸ್ಥಿತಿ ಬರುತ್ತೆ ಎಂದು ಕಂದಾಯ ಸಚಿವ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.

ಹಾಸನದ ಹೊರವಲಯದಲ್ಲಿ ಒಕ್ಕಲಿಗರ ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್.​ಅಶೋಕ್, ಆರ್​ಎಸ್​ಎಸ್ ರಾಜಕೀಯ ಪಕ್ಷವಲ್ಲ. ಅದು ಒಂದು ಸಾರ್ವಜನಿಕ ಸಂಸ್ಥೆ. ನಾನು ಕೂಡ ಅಲ್ಲಿಂದಲೇ ಬಂದವನು. ಮೊದಲು ದೇಶದಲ್ಲಿ ಕುಟುಂಬ ಸಂಪ್ರದಾಯ ಕಡಿತಗೊಳ್ಳಬೇಕು. ಅವರು ನಮಗೆ ಬುದ್ಧಿ ಹೇಳುವ ಅವಶ್ಯಕತೆ ಇಲ್ಲ. ಅವರಿಂದ ಬುದ್ಧಿ ಹೇಳಿಸಿಕೊಳ್ಳುವ ಅಗತ್ಯವೂ ನಮಗಿಲ್ಲ ಎಂದು ಹೇಳಿದ್ದಾರೆ.

ಕಂದಾಯ ಸಚಿವ ಆರ್.ಅಶೋಕ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವುದೆಲ್ಲ ಸುಳ್ಳು ಅವರು ಐದು ವರ್ಷ ಇದ್ದಾಗ ಯಾಕೆ ಜನಗಣತಿಯನ್ನು ಬಿಡುಗಡೆ ಮಾಡಲಿಲ್ಲ. ಜಾತಿಗಣತಿಯ ಆಯುಕ್ತರು ಇನ್ನೂ ವರದಿಗೆ ಸಹಿನೇ ಹಾಕಿಲ್ಲ. ಈಗ ಬಿಜೆಪಿ ಬಂದಿದೆಯೆಂದು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಜಾತಿಗಣತಿ ಮಾಡಿಸಿದವರು ನಾವೆಲ್ಲ ಅವರು ನೀವು ಅವರನ್ನೇ ಕೇಳಬೇಕು. ಇದು ರಾಜಕೀಯದ ಕಪಟನಾಟಕ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್​ನವರು ಇಟಲಿ ಶಿಕ್ಷಣ ನೀತಿ ಕೇಳುತ್ತಿದ್ದಾರೆ. ಆದರೆ ಅದನ್ನು ನಾವು ತರಲ್ಲ. ನಮ್ಮ ಭಾರತ ದೇಶವು ಸಂಸ್ಕೃತಿ ಮತ್ತು ಸಂಪ್ರದಾಯ ಹೊಂದಿರುವಂತಹ ದೇಶ. ಹಾಗಾಗಿ ಏಕರೂಪ ಶಿಕ್ಷಣ ಜಾರಿಗೆ ತರುತ್ತಿದ್ದೇವೆ ಎಂದಿದ್ದಾರೆ.

ಕೋವಿಡ್​ ಮೂರನೇ ಅಲೆ ವಿಚಾರವಾಗಿ ಮಾತನಾಡಿದ ಅವರು, ಹಂತಹಂತವಾಗಿ ನಿರ್ಬಂಧ ತೆಗೆಯುತ್ತಿದ್ದೇವೆ. ತಜ್ಞರು ವರದಿ ಕೊಟ್ಟಿದ್ದಾರೆ. ಮೂರನೇ ಬಗ್ಗೆ ನಿಖರ ಮಾಹಿತಿ ಇಲ್ಲ. ಸತ್ತವರ ಕುಟುಂಬದ ಸರ್ವೆ ಕಾರ್ಯ ನಡೆಯುತ್ತಿದ್ದು, ಕೋವಿಡ್-19 ರಿಂದ ಮೃತಪಟ್ಟವರ ದಾಖಲೆಗಳನ್ನು ಸ್ವೀಕರಿಸುವ ಕಾರ್ಯವನ್ನ ಸರ್ಕಾರ ಮಾಡುತ್ತಿದೆ. ಬಿಪಿಎಲ್ ಕಾರ್ಡ್ ಇದ್ದವರಿಗೆ ರಾಜ್ಯ ಸರ್ಕಾರ 1 ಲಕ್ಷ ರೂ. ಪರಿಹಾರವನ್ನು ಹಾಗೂ ಕೇಂದ್ರದಿಂದ 50 ಸಾವಿರ ರೂ. ಪರಿಹಾರ ನೀಡಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾನು ಪಕ್ಷ ಬದಲಾವಣೆ ಮಾಡುತ್ತೇನೆ ಎಂದವರಿಗೆ ತಲೆಕೆಟ್ಟಿದೆ: ಶಾಸಕ ಶಿವಲಿಂಗೇಗೌಡ

Last Updated : Sep 26, 2021, 10:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.